Puneeth Rajkumar: ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಅಪ್ಪು ಇದೇನಿದು ಹೊಸ ಸಿನಿಮಾನಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ನಮ್ಮನ್ನೆಲ್ಲ ಆಗಲಿ ಈಗಾಗಲೇ ಸರಿಸುಮಾರು ಎರಡು ವರ್ಷಗಳೇ ಆಗುತ್ತಾ ಬಂದಿದೆ. ಇಂದಿಗೂ ಆ ದಿವ್ಯ ಚೇತನ ಇಂದಿಗೂ ಕೂಡ ನಮ್ಮ ಜೊತೆಗೆ ಇದ್ದಾರೆ ಅನ್ನುವಂತಹ ಭಾವನೆ ಮೂಡಿ ಬರುತ್ತದೆ. ಆ ನಿಷ್ಕಲ್ಮಶ ನಗು ಹಾಗೂ ಇಂದಿಗೂ ಕೂಡ ನಮ್ಮ ಮನಸ್ಸನ್ನು ಕಾಡುತ್ತದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಾಣಿಸಿಕೊಂಡಿರುವಂತಹ ಕೊನೆಯ ಸಿನಿಮಾ ಎಂದರೆ ಅದು ಗಂಧದಗುಡಿ(Gandhada Gudi) ಡಾಕ್ಯೂಮೆಂಟ್ರಿ. ಅದಾದ ನಂತರ ಅವರ ನಟನೆಯನ್ನು ದೊಡ್ಡಪರದೆ ಮೇಲೆ ನೋಡಲು ಸಾಧ್ಯವಾಗಲಿಲ್ಲ ಎನ್ನುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಬೇಸರ ಪಡುವ ವಿಚಾರವಾಗಿದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗ ಒಂದು ಫೋಟೋ ಓಡಾಡುತ್ತಿದ್ದು ಪ್ರತಿಯೊಬ್ಬರೂ ಕೂಡ ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ಮುಂದಿನ ಸಿನಿಮಾ ಆಗಿರಬಹುದು ಎನ್ನುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ನಿಜಕ್ಕೂ ಈ ಫೋಟೋದ ಹಿಂದಿನ ನಿಜವಾದ ರಹಸ್ಯ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಹೌದು, ಈ ಫೋಟೋವನ್ನು AI ಜನರೇಟ್ ಮಾಡಿರುವಂತಹ ಫೋಟೋದ ಎಡಿಟ್ ಎಂಬುದಾಗಿ ಗುರುತಿಸಲಾಗಿದ್ದು ಇದರಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಬಳಸಿ ಹಾಲಿವುಡ್ ಸಿನಿಮಾದ ಪೋಸ್ಟರ್ ಗೆ ಹೋಲಿಸಲಾಗಿದೆ. ಈ ಪೋಸ್ಟರ್ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!