Puneeth Rajkumar Road ಕೊನೆಗೂ ಉದ್ಘಾಟನೆಯಾಗಲಿದೆ ಪುನೀತ್ ರಾಜ್ ಕುಮಾರ್ ರಸ್ತೆ. ಎಲ್ಲಿಂದ ಎಲ್ಲಿಯವರೆಗೆ ಗೊತ್ತಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power Star Puneeth Rajkumar) ರವರ ಮರಣಾನಂತರ ಅವರು ಮಾಡುತ್ತಿದ್ದಂತಹ ಎಲ್ಲಾ ಜನಪರ ಹಾಗೂ ಜನಪಯೋಗಿ ಕಾರ್ಯಗಳು ಎಲ್ಲರಿಗೂ ತಿಳಿದು ಬಂದಿದೆ. ತಾವು ಬದುಕಿದ್ದಾಗ ಒಮ್ಮೆ ಕೂಡ ಇದರ ಕುರಿತಂತೆ ಮಾತನಾಡಿ ಪ್ರಚಾರವನ್ನು ಪಡೆದುಕೊಳ್ಳುವಂತಹ ಪ್ರಯತ್ನವನ್ನು ಕೂಡ ಅವರು ಮಾಡಿರಲಿಲ್ಲ. ಅದಕ್ಕಾಗಿ ಅವರನ್ನು ಜನರು ಅಷ್ಟೊಂದು ಪ್ರೀತಿಸುವುದು.

ತಾವು ಬದುಕಿದ್ದಾಗಲೂ ಕೂಡ ಅಪ್ಪು(Appu) ಅವರು ಚಿತ್ರರಂಗದಲ್ಲಿ ಅಜಾತಶತ್ರುವಿನಂತೆ ಬೆಳೆದು ಬಂದವರು. ಹತ್ತನೇ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರೂ ಕೂಡ ಚಿತ್ರರಂಗದಲ್ಲಿ ಅತ್ಯಂತ ಸರಳವಾಗಿ ಕಾಣಿಸಿಕೊಂಡವರು. ನಾಯಕ ನಟನಾಗಿ ಮಾಡಿದ್ದು 25ರ ಆಸು ಪಾಸಿನ ಸಿನಿಮಾಗಳಾದರೂ ಕೂಡ ಚಿತ್ರರಂಗದಲ್ಲಿ ಅವರು ಆರು ತಿಂಗಳ ಮಗುವಾಗಿದ್ದಾಗಲೇ ಪಾದರ್ಪಣೆ ಮಾಡಿದವರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿರುವಂತಹ ಸಿನಿಮಾ ರಂಗದ ಹಾಗೂ ಸಾಮಾಜಿಕ ಸೇವೆಯ ಸಾಧನೆಗಳಿಗಾಗಿ ಕರ್ನಾಟಕ ಸರ್ಕಾರ ಕೊಡ ಮಾಡುವ ಅತ್ಯುನ್ನತ ಗೌರವವಾಗಿರುವ ಕರ್ನಾಟಕ ರತ್ನ(Karnataka Ratna) ಪ್ರಶಸ್ತಿಯನ್ನು ಅಪ್ಪು ಅವರಿಗೆ ಮರಣೋತ್ತರವಾಗಿ ನೀಡಲಾಗಿದೆ.

Puneeth Rajkumar Road

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ರಸ್ತೆಗೆ ಕೂಡ ಇಡಲಾಗುತ್ತಿದ್ದು ಇದರ ಕುರಿತಂತೆ ಇರುವಂತಹ ಎಲ್ಲಾ ಯೋಜನೆಗಳು ಮುಕ್ತಾಯಗೊಂಡಿದ್ದು ನಾಳೆ ಅಂದರೆ ಫೆಬ್ರವರಿ 7 ರಂದು ರಾಜ್ಯದ ಮುಖ್ಯಮಂತ್ರಿಗಳಾಗಿರುವ ಶ್ರೀ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಈ ರಸ್ತೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಅಷ್ಟಕ್ಕೂ ಪುನೀತ್ ರಾಜಕುಮಾರ್ ರಸ್ತೆಯ(Puneeth Rajkumar Road) ಬಗ್ಗೆ ಇರುವಂತಹ ಇನ್ನಷ್ಟು ಮಾಹಿತಿಗಳನ್ನು ಸಂಪೂರ್ಣ ವಿವರವಾಗಿ ಮೇಲುಕು ಹಾಕೋಣ.

ಮೊದಲನೇದಾಗಿ ರಿಂಗ್ ರೋಡ್ ಅನ್ನು ಪುನೀತ್ ರಾಜಕುಮಾರ್ ಅವರ ರಸ್ತೆ ಮಾಡಲಾಗಿದ್ದು ಮೈಸೂರು ರಸ್ತೆಯಿಂದ(Mysore Raod) ನಾಯಂಡಳ್ಳಿ ಜಂಕ್ಷನ್ ವರೆಗೆ ಇದು ಇದ್ದು ಒಟ್ಟಾರೆಯಾಗಿ 12 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಇದು ಬನ್ನೇರುಘಟ್ಟ ರಸ್ತೆಯವರೆಗೂ ಕೂಡ ಹರಡಿಕೊಂಡಿದೆ. ಮುಖ್ಯಮಂತ್ರಿಗಳ ಅಮೂಲ್ಯ ಹಸ್ತದಿಂದ ಉದ್ಘಾಟನೆಗೊಳ್ಳಲಿರುವ ಈ ರಸ್ತೆ ನಟರ ಹೆಸರಿನಲ್ಲಿರುವ ಅತ್ಯಂತ ಉದ್ದದ ರಸ್ತೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳಲಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಈ ರಸ್ತೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!