Ashika Ranganath: ನಟಿ ಆಶಿಕಾ ರಂಗನಾಥ್ ರವರ ಈ ಒಂದು ಆಸೆಯನ್ನು ಕೊನೆಗೂ ಅಪ್ಪು ತೀರಿಸಲೇ ಇಲ್ಲ! ಏನದು ನಟಿಯೇ ಹೇಳಿದ್ದ ಸತ್ಯವಿದು!

Puneeth Rajkumar ಕನ್ನಡ ಚಿತ್ರರಂಗದ ಖ್ಯಾತ ಉದಯೋನ್ಮುಖ ನಟಿಯರಲಿ ಆಶಿಕ ರಂಗನಾಥ್(Ashika Ranganath) ರವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ಅತ್ಯಂತ ಬಹು ಬೇಡಿಕೆಯ ನಾಯಕ ನಟಿಯರಲ್ಲಿ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ಕೂಡ ಅವರ ನಟನೆ ಹಾಗೂ ಅವರ ಸೌಂದರ್ಯವನ್ನು ನೋಡಿ ಅವರನ್ನು ಅಭಿಮಾನಿಗಳು ಕರ್ನಾಟಕದ ಕ್ರಶ್ ಎನ್ನುವುದಾಗಿ ಕರೆಯುತ್ತಾರೆ.

ಇನ್ನು ಇತ್ತೀಚಿಗಷ್ಟೇ ತೆಲುಗಿನ ಅಮಿಗೋಸ್ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಪರಭಾಷೆಗಳಿಗೂ ಕೂಡ ನಟಿ ಆಶಿಕ ರಂಗನಾಥ್(Ashika Ranganath) ಕಾಲಿಡುವ ಮೂಲಕ ಬಹು ಭಾಷೆ ತಾರೆಯಾಗಿ ಮಿಂಚುವಂತಹ ಸೂಚನೆಯನ್ನು ನೀಡಿದ್ದಾರೆ. ಆದರೆ ಇಂತಹ ನಟಿಯಾಗಿರುವ ಆಶಿಕ ರಂಗನಾಥ್ ರವರ ಒಂದು ಆಸೆಯನ್ನು ನಮ್ಮೆಲ್ಲರ ನೆಚ್ಚಿನ ಪುನೀತ್ ರಾಜಕುಮಾರ್(Puneeth Rajkumar) ರವರು ಕೊನೆಗೂ ಪೂರೈಸಲೇ ಇಲ್ಲ.

ಹೌದು ಮಿತ್ರರೇ ಹೀಗೆ ಹೇಳಿದ ಮಾತ್ರಕ್ಕೆ ನೀವು ತಪ್ಪು ಭಾವಿಸಬೇಡಿ ಯಾಕೆಂದರೆ ನಾವು ಮಾತನಾಡುತ್ತಿರುವುದು ಆಶಿಕಾ ರಂಗನಾಥ್(Ashika Ranganath) ಹಾಗೂ ಪುನೀತ್ ರಾಜಕುಮಾರ್ ರವರು ಒಂದೇ ಸಿನಿಮಾದಲ್ಲಿ ನಟಿಸಬೇಕಾಗಿತ್ತು. ಹೌದು ನಾವು ಮಾತನಾಡುತ್ತಿರುವುದು ದ್ವಿತ್ವ ಸಿನಿಮಾದ ಬಗ್ಗೆ. ಅಪ್ಪು(Appu) ಅವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲ ಆಶಿಕ ರಂಗನಾಥ್ ರವರಿಗೆ ಸಾಕಷ್ಟು ವರ್ಷಗಳಿಂದ ಇತ್ತು.

ಆದರೆ ಚಿತ್ರಿಕರಣ ಪ್ರಾರಂಭ ಆಗುವ ಮುನ್ನವೇ ಅಪ್ಪು ಅವರು ನಮ್ಮನ್ನೆಲ್ಲ ಅಕಾಲಿಕವಾಗಿ ಅಗಲಿದು ನಿಜಕ್ಕೂ ಕೂಡ ಆಶಿಕ ರಂಗನಾಥ್(Ashika Ranganath) ರವರ ಆಸೆಗೆ ತಣ್ಣೀರನ್ನು ಎರಚಿದಂತೆ ಆಯ್ತು. ಇದೇ ಕಾರಣಕ್ಕಾಗಿ ಅಪ್ಪು ಅವರ ಜೊತೆಗೆ ನಟಿಸಬೇಕು ಎನ್ನುವಂತಹ ಆಶಿಕ ಅವರ ಕನಸು ಕನಸಾಗಿಯೇ ಉಳಿಯಿತು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!