ಚಿಕ್ಕ ವಯಸ್ಸಿನಲ್ಲಿಯೇ ಪುನೀತ್ ರಾಜಕುಮಾರ್ ಶಂಕರ್ ನಾಗ್ ಅವರ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ನಾನು ನಿಜಕ್ಕೂ ನಂಬಲಿಕ್ಕೆ ಸಾಧ್ಯ ಇಲ್ಲ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಶಂಕರ್ ನಾಗ್ ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಚಿಕ್ಕ ವಯಸ್ಸಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದಂತಹ ನಟರು. ಇಬ್ಬರೂ ಕೂಡ ಅಕಾಲಿಕ ಮರಣಕ್ಕೆ ತುತ್ತಾಗಿ ಕೋಟ್ಯಾಂತರ ಅಭಿಮಾನಿಗಳನ್ನು ಅನಾಥರನ್ನಾಗಿ ಮಾಡಿ ಬಿಟ್ಟು ಹೋದವರು. ಹಲವಾರು ವಿಚಾರಗಳಲ್ಲಿ ಅಪ್ಪು ಹಾಗೂ ಶಂಕ್ರಣ್ಣ ಇಬ್ಬರಿಗೂ ಕೂಡ ಸ್ವಾಮ್ಯತೆ ಇದೆ.

ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶಂಕ್ರಣ್ಣ ಹಾಗೂ ರಾಜಕುಮಾರ್ ಕುಟುಂಬಕ್ಕೆ ಹಲವಾರು ವರ್ಷಗಳಿಂದಲೂ ಕೂಡ ಒಳ್ಳೆಯ ಉತ್ತಮ ಬಾಂಧವ್ಯ ಇದ್ದರೂ ಕೂಡ ಕೆಲವರು ಆಗದವರು ಬೇಡವಾದ ಸುದ್ದಿಗಳನ್ನು ಹರಡುತ್ತಿದ್ದಾರೆ. ಶಿವಣ್ಣ ನಟನೆಯ ಜೋಗಿ ಸಿನಿಮಾದಲ್ಲಿ ಅವರ ತಾಯಿಯಾಗಿ ಅರುಂಧತಿ ನಾಗ ಹಾಗೂ ರಾಜಕುಮಾರ್ ಅವರ ಜೊತೆಗೂ ಕೂಡ ಮತ್ತು ಅವರ ಮಕ್ಕಳ ಜೊತೆಗೂ ಶಂಕರ್ ನಾಗ್ ಅವರ ಸಹೋದರ ಆಗಿರುವ ಅನಂತನಾಗ್ ರವರು ಕೂಡ ಹಲವಾರು ಬಾರಿ ನಟಿಸಿರುವುದು ಇವರಿಬ್ಬರ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯ ಇದೆ ಎನ್ನುವುದಕ್ಕೆ ಜೀವಂತ ಸಾಕ್ಷಿಯಾಗಿದೆ.

ಇನ್ನು ಚಿಕ್ಕ ವಯಸ್ಸಿನಲ್ಲಿ ಮಾಸ್ಟರ್ ಲೋಹಿತ್ ಆಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡು ಕೇವಲ 10ನೇ ವಯಸ್ಸಿಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡ ಪ್ರತಿಭೆಯಾಗಿದ್ದಾರೆ. ಇನ್ನು ಅವರು ಚಿಕ್ಕವಯಸ್ಸಿನಲ್ಲಿ ಶಂಕ್ರಣ್ಣ ಅವರ ಸಿನಿಮಾಗೆ ಮಾಡಿದ ಕೆಲಸ ನೋಡಿದರೆ ಖಂಡಿತವಾಗಿ ನೀವು ಕೂಡ ಬೆರಗಾಗುವುದು ಗ್ಯಾರಂಟಿ.

ಹೌದು ಮಿತ್ರರೇ ರಾಜಕುಮಾರ್ ರವರು ನಾಯಕನಾಗಿ ಕಾಣಿಸಿಕೊಂಡಿರುವ ಹಾಗೂ ಶಂಕ್ರಣ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಒಂದು ಮುತ್ತಿನ ಕಥೆ ಸಿನಿಮಾದ ಮುಹೂರ್ತ ಕ್ಕೆ ಕ್ಲಾಪ್ ಮಾಡಿದ್ದು ಅತ್ಯಂತ ಚಿಕ್ಕವಯಸ್ಸಿನಲ್ಲಿ ನಮ್ಮ ಪುನೀತ್ ರಾಜಕುಮಾರ್. ಈಗ ಆ ಎಲ್ಲಾ ನೆನಪು ಗಳು ಕೇವಲ ನೆನಪು ಮಾತ್ರ. ಇಬ್ಬರೂ ಸ್ವರ್ಗದಲ್ಲಿ ನೆಮ್ಮದಿಯಿಂದ ಅಭಿಮಾನಿಗಳ ಪ್ರೀತಿಗೆ ರಾಜರಾಗಿರಲಿ ಎಂಬುದಾಗಿ ಆಶಿಸೋಣ.

Leave a Comment

error: Content is protected !!