ಪುನೀತ್ ಅವರ ಸಮಾಧಿ ಬಳಿ ಕೂತು ಜೀವನ ಕಟ್ಟಿಕೊಂಡಿರುವ ಅಭಿಮಾನಿ ಯುವಕ ತಿಂಗಳಿಗೆ 60 ಸಾವಿರ ದುಡಿಯುತ್ತಿರೋದು ಹೇಗೆ ಗೊತ್ತಾ

ಕನ್ನಡ ಚಿತ್ರರಂಗದಲ್ಲಿ ನಟರಾಗಿ, ಹಾಡುಗಾರರಾಗಿ, ನಿರ್ಮಾಪಕರಾಗಿ ಸೇವೆ ಸಲ್ಲಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ ಪುನೀತ್ ರಾಜಕುಮಾರ್ ಅವರು ಸರಳತೆ, ಸೌಜನ್ಯದ ನಡೆ-ನುಡಿಗಳಿಂದ ಕೋಟ್ಯಾಂತರ ಜನರ ಹೃದಯದಲ್ಲಿ ‘ಪರಮಾತ್ಮ’ನಂತೆ ಉಳಿದಿದ್ದಾರೆ. ಚಂದನವನದ ‘ನಟಸಾರ್ವಭೌಮ’ ಜೊತೆಗಾರರಿಗೆ ಪ್ರೋತ್ಸಾಹಿಸುವ ‘ಪವರ್’.

ಸಾಧನೆಯ ದಾರಿಯಲ್ಲಿ ಉತ್ತಮ ವ್ಯಕ್ತಿತ್ವದೊಂದಿಗೆ ಸಾಗಿದ ಹೆಗ್ಗಳಿಕೆ ಇವರದು. ಬಿಡುವಿನ ವೇಳೆಯಲ್ಲಿ ಚಿತ್ರೀಕರಣದ ಸುತ್ತಮುತ್ತಲ ಹಳ್ಳಿಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಾಮಾನ್ಯನಂತೆ ಬೆರೆತು ದೇವರ ದರ್ಶನ ಪಡೆದು ಬರುವ ಸಾಂಪ್ರದಾಯಿಕ ಕುಟುಂಬದ ಗರ್ವರಹಿತ ‘ರಾಜಕುಮಾರ’. ತಾವು ಬೆಳೆದಿದ್ದಲ್ಲದೆ ಅಕ್ಕಪಕ್ಕದವರಿಗೆ ಕೈ ಕೊಟ್ಟು ನಿಲ್ಲಿಸಿದವರು. ಅದೆಷ್ಟೋ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಅನಾಥ ಮಕ್ಕಳ ಊಟೋಪಚಾರಕ್ಕಾಗಿ ಶಕ್ತಿಧಾಮ ಸಂಸ್ಥೆ ಕಟ್ಟಿದವರು. ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿದ ‘ಯುವರತ್ನ’. ಅವರ ಅಗಲುವಿಕೆ ಎಲ್ಲರಿಗೂ ನೋವಿನ ಸಂಗತಿ.

ಅವರ ಒಳ್ಳೆಯತನಕ್ಕೆ ಸಾಕ್ಷಿಯೆಬಂತೆ ಸಾವನ್ನಪ್ಪಿ ಒಂದು ವರ್ಷವಾಗುತ್ತಾ ಬಂದರೂ, ಸಮಾಧಿಯ ಬಳಿ ದರ್ಶನಕ್ಕೆಂದು ಬರುವವರ ಸಂಖ್ಯೆಯಲ್ಲಿ ಇಳಿತವೇ ಇಲ್ಲ. ಪ್ರತಿದಿನವು ಜನಸಾಗರವೇ ಬರುತ್ತದೆ. ಇಲ್ಲೊಬ್ಬ ಅಭಿಮಾನಿ ಯುವಕ ಇವರ ಹೆಸರಿನಲ್ಲಿಯೇ ಜೀವನ ಸಾಗಿಸುತ್ತಿದ್ದಾನೆ. ಸಮಾಧಿಯ ಹತ್ತಿರದಲ್ಲಿ ಕೂತು ಅಪ್ಪುವಿನ ಚಿತ್ರವನ್ನು ಮೊಬೈಲ್ ಬ್ಯಾಕ್ಕವರ್, ಪೌಚ್, ಬೈಕ್, ಕೀಬಂಚ್ ಗಳ ಮೇಲೆ ಅಚ್ಚು ಹಾಕಿ ಹಣ ಪಡೆಯುತ್ತಿದ್ದಾನೆ.

ಸಂದರ್ಶನಕಾರರೊಬ್ಬರು ಸಮಾಧಿಯ ಬಳಿಯಲ್ಲಿ ಕೂತು ಸಣ್ಣಪುಟ್ಟ ವ್ಯಾಪಾರ ಮಾಡುವ ಯುವಕನನ್ನು ಮಾತನಾಡಿಸಿದಾಗ ಆತ “ನಾನು ಮೊದಲಿನಿಂದಲೂ ಇದೆ ಕೆಲಸ ಮಾಡಿಕೊಂಡು ಬಂದವನು. ಈಗ ಒಂದು ವರ್ಷದಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ಇಲ್ಲಿ ಬಂದು ಕೂತು ನನ್ನ ಕೆಲಸ ಮಾಡುತ್ತೇನೆ. ಯಾವುದೇ ಸ್ಥಳವಿರಲಿ ವರ್ಷಕ್ಕೊಮ್ಮೆ ಜಾತ್ರೆ, ತೇರು, ಉತ್ಸವಗಳೆಂದು ನಡೆಯುತ್ತವೆ. ಆದರೆ ನಮ್ಮ ಅಣ್ಣ ಅಪ್ಪು ಅವರ ಸಮಾಧಿಯ ಬಳಿ ದಿನವೂ ಜಾತ್ರೆಯೆ. ಎಷ್ಟೊಂದು ಜನ ದರ್ಶನ ಪಡೆದು ಅಳುತ್ತಾ ಹೋಗುತ್ತಾರೆ. ಬೆಳ್ಳಿಗ್ಗೆ ನಾಲ್ಕು ಗಂಟೆಗೆ ದೂರದ ಊರಿನಿಂದ ಬರುವವರಿದ್ದಾರೆ. ಹತ್ತು, ಇಪ್ಪತ್ತು ರೂಪಾಯಿಗಳ ಟೀ ತಿಂಡಿ ಕೊಡಿಸಿ ಎಲ್ಲೆಡೆ ಹೇಳಿಕೊಂಡು ಓಡಾಡುವವರ ಮಧ್ಯೆ ದೊಡ್ಡ ದೊಡ್ಡ ಉಪಕಾರಗಳನ್ನು ಮಾಡಿಯೂ ಪ್ರಚಾರ ಮಾಡಿಕೊಳ್ಳದವರು ಪುನೀತ್ ರಾಜಕುಮಾರ್ ಅವರು. ಇವರ ಹೆಸರಿನೊಂದಿಗೆ ನನ್ನ ಜೀವನ ನಡೆದಿದೆ. ಇವರ ಚಿತ್ರವನ್ನು ಅಭಿಮಾನಿಗಳು ಕೇಳಿದಲ್ಲಿ ಅಚ್ಚು ಹಾಕಿ ಕೊಡುತ್ತೇನೆ” ಎಂದಿದ್ದಾನೆ.

Leave a Comment

error: Content is protected !!