ಅಶ್ವಿನಿ ಅವರನ್ನು ವಿವಾಹವಾಗುವ ಮೊದಲು ಪುನೀತ್ ರಾಜಕುಮಾರ್ ಅವರು ಈ ನಟಿಗೆ ಪ್ರಪೋಸ್ ಮಾಡಿದ್ದರು ಆ ನಟಿ ಯಾರೆಂದು ತಿಳಿದರೆ ನೀವು ಅಚ್ಚರಿಪಡ್ತೀರಾ!

ಪುನೀತ್ ರಾಜಕುಮಾರ್ ಅವರು ತೀರಿಕೊಂಡು ಒಂದು ವರ್ಷವೇ ಕಳೆದರೂ ಅವರ ಸವಿ ನೆನಪುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ವೀವ್ಸ್ ಪಡೆದುಕೊಂಡು ಲೈಕ್ಸ್ ಗಳನ್ನು ಗಳಿಸಿ ಒಳ್ಳೆಯ ಕಮೆಂಟ್ಸ್ ಗಳನ್ನು ಪಡೆಯುತ್ತಿದೆ. ಪುನೀತ್ ರಾಜಕುಮಾರ್ ಅವರ ಬಗೆಗಿನ ಕ್ಯೂಟ್ ಕ್ಯೂಟ್ ವಿಡಿಯೋಗಳು ಸಕ್ಕತ್ ವೈರಲ್ ಆಗುತ್ತಿದ್ದು, ಇದೀಗ ಪುನೀತ್ ಅವರು ಅಶ್ವಿನಿಗಿಂತಲೂ ಮೊದಲು ಯಾರಿಗೆ ಪ್ರಪೋಸ್ ಮಾಡಿದ್ದರು ಎಂಬುದರ ಕುರಿತಾದ ವಿಡಿಯೋ ವೈರಲ್ ಆಗುತ್ತಿದೆ.

ನಮಗೆಲ್ಲರಿಗೂ ತಿಳಿದಿರುವ ಹಾಗೆ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರು ಪ್ರೀತಿಸಿ ಮದುವೆಯಾದದ್ದು. ಹಿಟ್ ಚಿತ್ರಗಳ ನಾಯಕನಾದ ಪುನೀತ್ ರಾಜಕುಮಾರ್ ಅವರು ಸದಾ ಕಾಲ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ಕೂಡ ಕುಟುಂಬದೊಂದಿಗೆ ಪ್ರೀತಿಯಿಂದ ಒಡನಾಡಲು ಅಮೂಲ್ಯವಾದ ಸಮಯವನ್ನು ಮೀಸಲಿಟ್ಟಿದ್ದರು.

1999 ರ ಡಿಸೆಂಬರ್ ತಿಂಗಳಿನಲ್ಲಿ ವಿವಾಹವಾದ ಈ ದಂಪತಿಗಳಿಗೆ ಧೃತಿ ಹಾಗೂ ವಂದಿತಾ ಎಂಬ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅಶ್ವಿನಿ ಅವರು ಕೋಪಗೊಂಡಾಗ ಹಾಡು ಹಾಡುತ್ತಾ, ಬೇಸರವೆನಿಸಿದಾಗ ತಮಾಷೆ ಮಾಡಿ ಅಶ್ವಿನಿ ಅವರ ಕಾಲು ಎಳೆಯುತ್ತಾ, ನಗುತ್ತಾ ನಗಿಸುತ್ತಾ ಪುನೀತ್ ರಾಜಕುಮಾರ್ ಅವರು ಸಮಯ ಕಳೆಯುತ್ತಿದ್ದರು.

ಸಂಗೀತ ನಿರ್ದೇಶಕರಾದ ಗುರುಕಿರಣ್ ಅವರ ಹುಟ್ಟು ಹಬ್ಬದ ಅಂಗವಾಗಿ ಕಳೆದ ವರ್ಷ ಅಕ್ಟೋಬರ್ 28ರಂದು ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅಪ್ಪು, ಅವರ ಪತ್ನಿ ಅಶ್ವಿನಿ ಇಬ್ಬರೂ ಕೂಡ ಭಾಗಿಯಾಗಿದ್ದು ಗುರುಕಿರಣ್ ಅವರಿಗೆ ಸಂತೋಷ ನೀಡಿತ್ತು. ನಟ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ, ರಮೇಶ್ ಅರವಿಂದ್, ಡಿಂಪಲ್ ಸುಂದರಿ ರಚಿತಾ ರಾಮ್, ಸುಮಲತಾ ಅಂಬರೀಶ್, ಅನಿರುದ್ಧ್ ಸೇರಿದಂತೆ ಹಲವಾರು ಕಲಾವಿದರು ಆಗಮಿಸಿದ್ದರು.

ಗುರುಕಿರಣ್ ಅವರ ಬರ್ತಡೆ ಪಾರ್ಟಿಯಲ್ಲಿ ಪುನೀತ್ ರಾಜಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಹಾಗೂ ಸುಮಲತಾ ಅವರ ಚಿತ್ರದ ಜನಪ್ರಿಯ ಹಾಡದ ‘ನಾ ನಿನ್ನ ಆಸೆ ಕಂಡೆ’ ಗಾಯನವನ್ನು ಸೊಗಸಾಗಿ ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಅಲ್ಲದೆ ನಟ ಉಪೇಂದ್ರ ಹಾಗೂ ಗಣೇಶವರ ಜೊತೆಗೂಡಿ ಗುರುಕಿರಣ್ ಅವರ ಸಂಗೀತ ನಿರ್ದೇಶನದ ‘ಸುಮ್ ಸುಮ್ನೆ ನಗ್ತಾಳೆ’ ಹಾಡನ್ನು ಕೂಡ ಹಾಡಿದ್ದರು.

ಅದೇ ವೇಳೆ ನಟಿ ಸುಮಲತಾ ಅಂಬರೀಶ್ ಅವರು ಪುನೀತ್ ಅವರು ಪ್ರಪೋಸ್ ಮಾಡಿದ ವಿಷಯವನ್ನು ನೆನೆದು ನಕ್ಕಿದ್ದರು. ನಟಿ ಸುಮಲತಾ ಅಂಬರೀಶ್ ಅವರು ಪುನೀತ್ ಅವರ ಪತ್ನಿ ಅಶ್ವಿನಿಯವರ ಬಳಿ ‘ಅಪ್ಪು ಪ್ರಪೋಸ್ ಮಾಡಿದ ಫಸ್ಟ್ ವಿಮೆನ್ ಯಾರು ಅಂತ ನಿನಗೆ ಗೊತ್ತಾ?? ನಾನು 16 ವರ್ಷದವಳಾಗಿದ್ದೆ. ಅಪ್ಪು ಆಗ ಐದು ವರ್ಷದ ಪುಟ್ಟ ಬಾಲಕ. ನನಗೆ ಬಂದ ಫಸ್ಟ್ ಪ್ರಪೋಸಲ್ ಅಪ್ಪುದೆ’ ಎನ್ನುತ್ತಾ ನಕ್ಕಿದ್ದರು. ಈ ಕ್ಯೂಟ್ ವಿಡಿಯೋವನ್ನು ನೋಡಿದ ಬಳಿಕ ಅಭಿಮಾನಿಗಳು ನಕ್ಕಿದ್ದಾರಂತೆ..

Leave a Comment

error: Content is protected !!