ಮದುವೆಯಾದ ಎರಡೇ ಎರಡು ತಿಂಗಳಿನಲ್ಲಿ ಸಿಹಿ ಸುದ್ದಿ ಕೊಟ್ಟ ನಟಿ ಮಹಾಲಕ್ಷ್ಮಿ. ಅಬ್ಬಾ ಇಷ್ಟೊಂದು ಫಾಸ್ಟ್ ಆ ಎಂದ ನೆಟ್ಟಿಗರು

ಮಹಾಲಕ್ಷ್ಮಿ ಹಾಗೂ ರವೀಂದ್ರ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ನೆಟ್ಟಿಗರು ಮಿಸ್ ಮ್ಯಾಚ್ ಜೋಡಿ ಎಂದೇ ಕರೆಯುತ್ತಿದ್ದರು. ಇಂತಹ ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದ ಈ ಜೋಡಿಯು ಮದುವೆ ಹಬ್ಬದ ತಮ್ಮ ವಿವಿಧ ಪೋಸ್ ಗಳ ಫೋಟೋಗಳನ್ನು ಶೇರ್ ಮಾಡುತ್ತಲೇ ಇದ್ದರು.

ಪ್ರೀತಿಸಿ ಮದುವೆಯಾದ ಈ ಜೋಡಿಯು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ನೆನಪಿಗಾಗಿ ಸೆರೆಹಿಡಿದ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಬಂದಿದ್ದರು. ಹನಿಮೂನ್ಗಾಗಿ ತೆರಳಿದ ಮಹಾಲಕ್ಷ್ಮಿ ಹಾಗೂ ರವೀಂದರ್ ನವ ದಂಪತಿಗಳ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳು ಸಖತ್ ವೈರಲಾಗಿತ್ತು. ವಿಧವಿಧವಾದ ಕಾಮೆಂಟ್ಸ್ಗಳು ಕೂಡ ಬಂದಿದ್ದವು.

ಇತ್ತೀಚಿಗಷ್ಟೇ ಹೆಂಡತಿಯ ಅಡುಗೆಯ ಸ್ಕಿಲ್ಸ್ ಗಳನ್ನು ಬಹಿರಂಗಪಡಿಸಿದ ರವೀಂದರ್ ಅವರು ಸೀದು ಹೋದ ಎರಡು ಮೊಟ್ಟೆಗಳ ಫೋಟೋವನ್ನು ಕೂಡ ಅಪ್ಲೋಡ್ ಮಾಡಿದ್ದರು. ಅಭಿಮಾನಿಗಳು ಹಾಗೂ ನೆಟ್ಟಿಗರು ಅದನ್ನು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದರು. ಇವರ ಮತ್ತೊಂದು ಫೋಟೋ ವೈರಲ್ ಆಗಿದ್ದು, ಮಹಾಲಕ್ಷ್ಮಿಯವರು ಗರ್ಭಿಣಿಯಾಗಿದ್ದಾರೆಯೇ? ಎಂಬ ಸಂದೇಹ ನೆಟ್ಟಿಗರನ್ನು ಕಾಡುತ್ತಿದೆ.

‘ಮಹಾಲಕ್ಷ್ಮಿಯವರು ಸದ್ಯದಲ್ಲಿ ಸಿಹಿ ಸುದ್ದಿ ನೀಡಲಿದ್ದಾರೆ’ ಎಂಬ ವದಂತಿಗೆ ಪುಷ್ಟಿ ನೀಡುವ ಫೋಟೋದಲ್ಲಿ ಕಾಣುವಂತೆ ರವೀಂದರ್ ಹಾಗೂ ಮಹಾಲಕ್ಷ್ಮಿ ಜೋಡಿಯು ಎದುರು ಬದುರಾಗಿ ಕುಳಿತಿದ್ದಾರೆ; ಮಧ್ಯದಲ್ಲಿರುವ ಟೇಬಲ್ ಮೇಲೆ ತಿಂಡಿ ತಿನಿಸುಗಳ ಜೊತೆಯಲ್ಲಿ ಪಾನೀಯ ಕೂಡ ಇದೆ; ರವೀಂದರ್ ಅವರು ತಮ್ಮ ಪತ್ನಿ ಮಹಾಲಕ್ಷ್ಮಿಗೆ ಸ್ವೀಟನ್ನು ಕೂಡ ತಿನ್ನಿಸುತ್ತಿದ್ದಾರೆ; ಅಲ್ಲದೆ ಮಹಾಲಕ್ಷ್ಮಿಯವರು ಕುಳಿತಿರುವ ಭಂಗಿಯನ್ನು ನೋಡಿದರೆ ಗರ್ಭಧಾರಣೆ ಮಾಡಿರುವುದರಲ್ಲಿ ಸಂಶಯವೇ ಇಲ್ಲ ಎಂದು ನೋಡಿದವರು ಹೇಳುತ್ತಿದ್ದಾರಂತೆ.

Actress mahalakshmi

ಮಹಾಲಕ್ಷ್ಮಿ ಹಾಗೂ ರವೀಂದರ್ ಇಬ್ಬರಿಗೂ ಇದು ಎರಡನೇ ಮದುವೆಯಾದರೂ, ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಸುಖವಾಗಿ ಕಾಲ ಕಳೆಯುತ್ತಿದ್ದಾರೆ ಎಂಬುದು ಇವರ ಫೋಟೋಗಳನ್ನು ನೋಡಿದಾಗಲೇ ತಿಳಿದು ಬರುತ್ತದೆ. ಮಿಸ್ ಮ್ಯಾಚ್ ಜೋಡಿ ಎಂದು ಕರೆಸಿಕೊಂಡರೆನಂತೆ? ತಾವು ಎಂಜಾಯ್ ಮಾಡುತ್ತಾ ಕಳೆದ ಸಮಯವನ್ನು ಶೇರ್ ಮಾಡುತ್ತಲೇ ಬಂದಿದ್ದಾರೆ. ಇದೀಗ ಮಹಾಲಕ್ಷ್ಮಿಯವರು ತಾಯಿಯಾಗುವ ಸಿಹಿ ಸುದ್ದಿಯನ್ನು ನೀಡಲಿದ್ದಾರೆಯೇ? ಎಂದು ಬಹಳವೇ ಚರ್ಚೆಯಾಗುತ್ತದೆ.

Leave a Comment

error: Content is protected !!