ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ 10ನೇ ತರಗತಿಯಲ್ಲಿ ಪಡೆದಿದ್ದ ಮಾರ್ಕ್ಸ್ ಎಷ್ಟು ಗೊತ್ತಾ? ದಾಖಲೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಣ್ಣಾವ್ರ ಮಗ ಆಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕವೇ ಇಂದು ಪ್ರತಿಯೊಬ್ಬ ಅಭಿಮಾನಿಗಳ ಮನಸ್ಸಿನಲ್ಲಿ ನಟನಿಗಿಂತ ಹೆಚ್ಚಾಗಿ ಒಬ್ಬ ದೇವರಂತೆ ನೆಲೆಸಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವಿದ್ಯಾಭ್ಯಾಸವನ್ನು ಹೆಚ್ಚಾಗಿ ಮಾಡದಿದ್ದರೂ ಕೂಡ ಶಿಕ್ಷಣದ ಕುರಿತಂತೆ ಉತ್ತಮ ಜ್ಞಾನವನ್ನು ಹೊಂದಿದ್ದರು.

ಎಲ್ಲಕ್ಕಿಂತ ಪ್ರಮುಖವಾಗಿ ತಾವು ಬೆಳೆದು ದೊಡ್ಡ ನಟ ಆದ ಮೇಲೆ ಶಿಕ್ಷಣ ಕಲಿಯಲು ಅಸಹಾಯಕರಾಗಿದ್ದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯುವಂತೆ ಸಹಾಯ ಮಾಡಿದ್ದಾರೆ ಎಂದರೆ ಅವರ ಹೃದಯ ಶ್ರೀಮಂತಿಕೆಯನ್ನು ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳಲೇಬೇಕು. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಗ್ಗೆ.

ಹೌದು ಮಿತ್ರರೇ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಷ್ಟು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದ ಪಿಆರ್‌ಕೆ ಪ್ರೊಡಕ್ಷನ್ ಸಂಸ್ಥೆಯ ಸಿನಿಮಾಗಳ ನಿರ್ಮಾಣ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮ ಕೊಡುಗೆಯನ್ನು ನೀಡುವ ಕಾರ್ಯವನ್ನು ಈಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ರವರು ಚಿಕ್ಕವರಿರಬೇಕಾದರೆ ಹತ್ತನೇ ತರಗತಿಯಲ್ಲಿ ಪಡೆದುಕೊಂಡಿರುವ ಮಾರ್ಕ್ಸ್ ಗಳ ಬಗ್ಗೆ ಈಗ ತಿಳಿದು ಬಂದಿದೆ.

ಹೌದು ಮಿತ್ರರೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು 83% ಮಾರ್ಕ್ಸ್ ಅನ್ನು ಹತ್ತನೇ ತರಗತಿಯಲ್ಲಿ ಪಡೆದುಕೊಂಡಿದ್ದಾರೆ ಎಂಬುದಾಗಿ ಮಾರ್ಕ್ಸ್ ಕಾರ್ಡ್ ಮೂಲಕ ತಿಳಿದು ಬಂದಿದೆ. ಅಶ್ವಿನಿ ಹಾಗೂ ಪುನೀತ್ ರಾಜಕುಮಾರ್ ಇಬ್ಬರೂ ಕೂಡ ಕಾಮನ್ ಫ್ರೆಂಡ್ ಮೂಲಕ ಪರಿಚಿತರಾಗಿ ನಂತರ ಇವರಿಬ್ಬರ ನಡುವೆ ಪ್ರೀತಿ ಬೆಳೆದು ನಂತರ ಮನೆಯವರು ಒಪ್ಪಿದ ಮೇಲೆ ಅದ್ದೂರಿಯಾಗಿ ಮದುವೆಯಾಗಿದ್ದರು.

Leave a Comment

error: Content is protected !!