Radhika Kumaraswamy: ಶಿವಣ್ಣನ ಜೊತೆಗೆ ನಾಯಕಿಯಾಗುವ ಅವಕಾಶ ಸಿಕ್ಕರೆ ಮಾಡ್ತೀರಾ ಎಂಬ ಪ್ರಶ್ನೆಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇ ಬೇರೆ!

Radhika Kumaraswamy ನಟಿ ರಾಧಿಕಾ ಕುಮಾರಸ್ವಾಮಿ(Actress Radhika Kumaraswamy) ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ನಾಯಕ ನಟರ ಸಿನಿಮಾಗಳಿಗೆ ಬೇಕಾಗಿದ್ದಂತಹ ಸ್ಟಾರ್ ನಟಿಯಾಗಿ ಕಾಣಿಸಿಕೊಂಡವರು. ಇಂದಿಗೂ ಕೂಡ ಅವರ ಬೇಡಿಕೆ ಕನ್ನಡ ಚಿತ್ರರಂಗದಲ್ಲಿ ಇದೆ ಆದರೆ ಅವರೇ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಬೇಸರ ಅವರ ಅಭಿಮಾನಿಗಳಲ್ಲಿ ಕೂಡ ಇಂದಿಗೂ ಇದೆ.

ಇತ್ತೀಚಿನ ವರ್ಷಗಳಲ್ಲಿ ಅವರು ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಹಾಗೂ ಕೆಲವೊಂದು ಮಹಿಳಾ ಪ್ರಾಧಾನ್ಯತೆ ಕಥೆಯನ್ನು ಹೊಂದಿರುವಂತಹ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು ಕೂಡ ಸಿನಿಮಾಗಳಲ್ಲಿ ಅವರ ಅಭಿಮಾನಿಗಳಿಗೆ ಹಳೆಯ ರಾಧಿಕಾ(Radhika) ಅವರು ಕಾಣಿಸಿಕೊಳ್ಳುತ್ತಿಲ್ಲ ಎಂಬುದು ಬೇಸರದ ವಿಚಾರವಾಗಿದೆ. ಅದರಲ್ಲೂ ವಿಶೇಷವಾಗಿ ಶಿವಣ್ಣನ(Shivanna) ತಂಗಿಯ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಳ್ಳುತ್ತಿದ್ದ ರೀತಿ ನಿಜಕ್ಕೂ ಕೂಡ ಅದನ್ನು ಮೀರಿಸುವ ಮತ್ತೊಂದು ಪಾತ್ರ ಇಲ್ಲ ಎಂದು ಹೇಳಬಹುದಾಗಿದೆ.

ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಚಾನೆಲ್ ನ ಸಂದರ್ಶನದಲ್ಲಿ ಇದೇ ಕುರಿತಂತೆ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರನ್ನು ಪ್ರಶ್ನೆ ಕೇಳಲಾಗಿತ್ತು. ಶಿವಣ್ಣನ(Shivanna) ಜೊತೆಗೆ ಸಿನಿಮಾ ಆಫರ್ ಬಂದರೆ ಅವರ ಜೊತೆಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತೀರ ಎಂಬುದಾಗಿ ಸಂದರ್ಶಕರು ಪ್ರಶ್ನೆ ಕೇಳಿದ್ದು ಅದಕ್ಕೆ ನೇರವಾಗಿ ರಾಧಿಕಾ ಕುಮಾರಸ್ವಾಮಿ ಇಲ್ಲ ಎಂಬುದಾಗಿ ಹೇಳುವ ಮೂಲಕ ಅಭಿಮಾನಿಗಳಲ್ಲಿ ಆಶ್ಚರ್ಯವನ್ನು ಹುಟ್ಟು ಹಾಕಿದ್ದಾರೆ.

ಹೌದು ಮೊದಲಿನಿಂದಲೂ ಕೂಡ ನಾನು ಅವರ ಜೊತೆಗೆ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ನನಗೆ ಅವರ ಜೊತೆಗೆ ನಾಯಕಿಯಾಗಿ ನಟಿಸಲು ಇಷ್ಟವಿಲ್ಲ ಬದಲಾಗಿ ಮತ್ತೆ ಅವರ ಜೊತೆಗೆ ತಂಗಿಯ ಪಾತ್ರ ಸಿಕ್ಕರೆ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಅವರ ಜೊತೆಗೆ ನಟಿಸುತ್ತೇನೆ ನನಗೆ ಅವರು ಸಿನಿಮಾಗಿಂತ ಹೆಚ್ಚಾಗಿ ನಿಜ ಜೀವನದಲ್ಲಿ ಕೂಡ ಅಣ್ಣನಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಹೇಳಿದ್ದಾರೆ. ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!