Radhika Pandit: ಸ್ಯಾಂಡಲ್ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಮನೆಯಲ್ಲಿ ಅದ್ದೂರಿ ಕ್ರಿಸ್ಮಸ್ ಸೆಲೆಬ್ರೇಶನ್, ಯಶ್ ಮಕ್ಕಳ ಖುಷಿ ನೋಡಿ ಅಭಿಮಾನಿಗಳು ಫಿದಾ

Radhika Pandit: ಕನ್ನಡ ಸಿನಿಮಾ ರಂಗದ ಕ್ಯೂಟ್ ಕಪಲ್ಸ್ ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಯಾವುದೇ ಹಬ್ಬ ಹರಿದಿನಗಳು ಬಂದರು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡು ತಮ್ಮ ಮಕ್ಕಳ ಪಾಲನೆ ಪೋಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ರಾಧಿಕಾ ಪಂಡಿತ್(Radhika Pandit) ಅವರು ಪ್ರತಿ ಹಬ್ಬ ಆಚರಣೆಗಳ ಮಹತ್ವವನ್ನು ಹಾಗೂ ಅದರ ವೃತ್ತಾಂತವನ್ನು ಮಕ್ಕಳಿಗೆ ತಿಳಿಸುತ್ತಾ ಬಹಳ ವಿಶೇಷವಾಗಿ ಹಬ್ಬ ಆಚರಿಸಿ ಅದೆಲ್ಲವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಹಿಂದೂ ಸಂಪ್ರದಾಯದವರಾದರು ಕೂಡ ರಾಧಿಕಾ ಪಂಡಿತ್(Radhika Pandit) ಯಾವುದೇ ಭೇದಭಾವ ಮಾಡದೆ ಕ್ರಿಸ್ಮಸ್ ಹಬ್ಬವನ್ನು ಮನೆಯಲ್ಲಿ ಬಹಳ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ ಹಾಗೂ ಅದರ ವಿಶೇಷತೆಯನ್ನು ಮಕ್ಕಳಿಗೆ ಅರ್ಥ ಮಾಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಎಲ್ಲಾ ಹಬ್ಬಗಳಂತೆ ಕ್ರಿಸ್ಮಸ್ ಹಬ್ಬಕ್ಕೂ ತಮ್ಮ ಮುದ್ದಿನ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಿ.

ಬಹಳ ಮುದ್ದಾಗಿ ರೆಡಿ ಮಾಡಿ ಕ್ರಿಸ್ಮಸ್ ಟ್ರೀ ಗೆ ವಿಶೇಷ ಉಡುಗೊರೆಯನ್ನೆಲ್ಲ ನೇತು ಹಾಕಿ ಅದರ ಸುತ್ತ ಲೈಟಿಂಗ್ಸ್ ಗಳನ್ನು ಬಿಟ್ಟು ಹೂವುಗಳಿಂದ ಪೂರ್ತಿ ಮನೆಯನ್ನು ಡೆಕೋರೇಟ್ ಮಾಡಿ ರಾಧಿಕಾ ಪಂಡಿತ್ ಕ್ರಿಸ್ಮಸ್ ಟ್ರೀ ಪಕ್ಕ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಜೂನಿಯರ್ ರಾಧಿಕಾ ಪಂಡಿತ್, ಐರಾ ಕೂಡ ನೀಲಿ ಬಣ್ಣದ ಗೌನ್ ಧರಿಸಿ ಏಂಜಲ್ನಂತೆ ಕ್ರಿಸ್ಮಸ್ ಟ್ರೀ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

ಇನ್ನು ವಿಶೇಷವಾಗಿ ಯಶ್ ಅವರ ಪುತ್ರ ಯಥರ್ವ(Yash son Yatharva) ಕೂಡ ಕ್ರಿಸ್ಮಸ್ ಟ್ರೀ ಮತ್ತು ಕ್ರಿಸ್ಮಸ್ ತಾತ ಇರುವಂತಹ ಚಂದದ ಟಿ-ಶರ್ಟ್ ಧರಿಸಿ, ಕಣ್ಣಿಗೆ ಕ್ರಿಸ್ಮಸ್ ಸಂತಾನ ಗಾಗಲ್ಸ್ ಹಾಕಿಕೊಂಡು ಬಹಳ ಕ್ಯೂಟ್ ಆಗಿ ಫೋಟೋಗೆ ನೀಡಿದ್ದು, ಈ ಎಲ್ಲಾ ಸುಂದರ ಫೋಟೋಗಳನ್ನು ರಾಧಿಕಾ ಪಂಡಿತ್(Radhika Pandit) ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಎಲ್ಲರಿಗೂ ತುಂಬು ಹೃದಯದ ಪ್ರೀತಿ ಮತ್ತು ನಗು ಸದಾ ದುರಕಲಿ ಎಂದು ಕೋರುತ್ತೇನೆ ಮೇರಿ ಕ್ರಿಸ್ಮಸ್(Merry Christmas) ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!