Radhika Kumaraswamy: ರಾಧಿಕಾ ಕುಮಾರಸ್ವಾಮಿ ರವರ SSLC ಯ ಮಾರ್ಕ್ಸ್ ಎಷ್ಟು ಗೊತ್ತಾ?

Radhika Kumaraswamy ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವಾರು ನಟ ನಟಿಯರು ಮಿಂಚಿ ಹೋಗಿದ್ದಾರೆ. ಅವರಲ್ಲಿ ಕೆಲವರು ನಟಿಯರು ಮಾತ್ರ ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿರುವ ನಟಿಯರಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಕೂಡ ಒಬ್ಬರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ನಟಿಸಿರುವ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ ಕೂಡ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ.

ಮಂಗಳೂರು ಮೂಲದವರಾಗಿರುವ ರಾಧಿಕಾ ಕುಮಾರಸ್ವಾಮಿ ರವರು ಕನ್ನಡ ಚಿತ್ರರಂಗಕ್ಕೆ ನೀಲ ಮೇಘ ಶ್ಯಾಮ(Neela Megha Shyama) ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಾರೆ. ಇದಾದ ನಂತರ ಒಂದಾದ ಮೇಲೆ ಒಂದರಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ರಾಧಿಕಾ ಅವರು ಕಾಣಿಸಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ ರತನ್ ಎನ್ನುವವರನ್ನು ಮದುವೆಯಾಗಿರುತ್ತಾರೆ ಆದರೆ ಅವರು ಮರಣ ಹೊಂದಿರುತ್ತಾರೆ.

Radhika Kumaraswamy

ನಂತರ 2010ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ(HD Kumaraswamy) ಅವರನ್ನು ಮದುವೆಯಾಗುತ್ತಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಿಂದ ರಾಧಿಕಾ ಕುಮಾರಸ್ವಾಮಿ ಅವರು ಸಂಪೂರ್ಣವಾಗಿ ದೂರವಾಗಿರುತ್ತಾರೆ. ನಂತರ ಶ್ರಮಿಕ ಎಂಟರ್ಪ್ರೈಸಸ್ ಅಂದರೆ ತಮ್ಮ ಮಗಳ ಹೆಸರಿನಲ್ಲಿ ಸಿನಿಮಾನ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಲಕ್ಕಿ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ. ನಂತರ ಸ್ವೀಟಿ ಎನ್ನುವ ಸಿನಿಮಾದ ಮೂಲಕ ಮತ್ತೆ ಚಿತ್ರರಂಗಕ್ಕೆ ನಾಯಕಿಯಾಗಿ ಮರು ಪಾದರ್ಪಣೆ ಮಾಡುತ್ತಾರೆ.

ಇನ್ನು ಸದ್ಯಕ್ಕೆ ಚಿತ್ರರಂಗದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ನಿರ್ಮಾಪಕಿ ಹಾಗೂ ನಾಯಕ ನಟಿಯಾಗಿ ಚಾಲ್ತಿಯಲ್ಲಿದ್ದಾರೆ. ಇನ್ನು ಹತ್ತನೇ ತರಗತಿಯಲ್ಲಿ ರಾಧಿಕಾ ಕುಮಾರಸ್ವಾಮಿ(Radhika) ಅವರು ಪಡೆದಂತಹ ಅಂಕಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ಮೂಲಗಳ ಪ್ರಕಾರ 10ನೇ ತರಗತಿಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!