Megha Shetty: ಸೀರೆಯಲ್ಲಿ ಮಿರಮಿರನೆ ಮಿಂಚಿದ ಜೊತೆಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ. ವೈರಲ್ ಆಯ್ತು ಫೋಟೋಸ್.

Megha Shetty ಕಿರುತೆರೆ ಲೋಕದಲ್ಲಿ ಇರುವಂತಹ ನಟ ನಟಿಯರಿಗೆ ಈಗ ಸಿನಿಮಾರಂಗದಲ್ಲಿರುವ ಕಲಾವಿದರಿಗೆ ಸಿಗುವಷ್ಟೇ ಅಭಿಮಾನಿ ಬಳಗ ಹಾಗೂ ಜನಪ್ರಿಯತೆ ದೊರಕುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅದೇ ಕಿರುತೆರೆಯ ಕ್ಷೇತ್ರದಲ್ಲಿರುವಂತಹ ಧಾರವಾಹಿಯ ನಟಿಯರಲ್ಲಿ ನಟಿ ಮೇಘ ಶೆಟ್ಟಿ(Megha Shetty) ಕೂಡ ಅತ್ಯಂತ ಜನಪ್ರಿಯರಲ್ಲಿ ಒಬ್ಬರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಲಕ್ಷಾಂತರ ಫಾಲೋವರ್ಸ್ ಗಳನ್ನು ಮೇಘ ಶೆಟ್ಟಿ ಹೊಂದಿದ್ದಾರೆ.

ಯಾವುದೇ ನಟನೆಯ ಅನುಭವ ಇಲ್ಲದಿದ್ದರೂ ಕೂಡ ನೇರವಾಗಿ ಝೀ ಕನ್ನಡ(Zee Kannada) ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ಜೊತೆ ಜೊತೆಯಲಿ ಧಾರವಾಹಿಯ ಮೂಲಕ ನಾಯಕಿಯಾಗಿ ಕಿರುತೆರೆಗೆ ಪರಿಚಿತರಾಗುತ್ತಾರೆ. ಹಲವಾರು ವರ್ಷಗಳಿಂದ ಅದರಲ್ಲೇ ನಾಯಕಿಯಾಗಿ ಕಾಣಿಸುತ್ತಿದ್ದ ಮೇಘ ಶೆಟ್ಟಿ ಅವರಿಗೆ ಕಿರುತೆರೆಯ ಲೋಕದಲ್ಲಿ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಪ್ರತಿಯೊಂದು ಮನೆಯಲ್ಲಿ ಕೂಡ ಅವರ ಅಭಿಮಾನಿಗಳು ಇದ್ದೇ ಇರುತ್ತಾರೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

megha shetty

ಇನ್ನು ಸದ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ಅವರ ನಾಯಕತ್ವದಲ್ಲಿ ಮೂಡಿ ಬಂದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಕೂಡ ಮೂವರು ನಾಯಕಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾರಂಗಕ್ಕೆ ಕೂಡ ಪಾದಾರ್ಪಣೆ ಮಾಡುತ್ತಾರೆ. ಕೇವಲ ಸಿನಿಮಾ ಹಾಗೂ ಕಿರುತೆರೆ ಮಾತ್ರವಲ್ಲದೆ ಜಾಹೀರಾತಿನಲ್ಲಿ ಕೂಡ ಈಗಾಗಲೇ ಹಲವಾರು ಬಾರಿ ಮೇಘ ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡಮಟ್ಟದ ಯಶಸ್ಸನ್ನು ಮೇಘ ಶೆಟ್ಟಿ ಪಡೆದಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಮಿರ ಮಿರನೆ ಹೊಳೆಯುವಂತಹ ಸೀರೆಯಲ್ಲಿ ಮೇಘ ಶೆಟ್ಟಿ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದು ಎಲ್ಲರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ಅವರ ಫೋಟೋವನ್ನು ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ಮೇಘ ಶೆಟ್ಟಿ(Megha Shetty) ಅವರು ಮಹಾಲಕ್ಷ್ಮಿಯಂತೆ ಕಾಣುತ್ತಿದ್ದಾರೆ ಎಂಬುದಾಗಿ ಎಲ್ಲರೂ ಕೂಡ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ನೀವು ಕೂಡ ಈ ಫೋಟೋವನ್ನು ನೋಡಬಹುದಾಗಿದ್ದು ಇದರ ಕುರಿತಂತ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!