Kantara: ರಿಷಬ್ ಶೆಟ್ಟಿಗಿಂತಲೂ ಕಾಂತಾರ ಸಿನಿಮಾದ ಗೆಲುವಿನ ಶ್ರೇಯವನ್ನು ಆ ನಟನಿಗೆ ಸಲ್ಲಿಸಬೇಕು. ಅವರೇ ಸಿನಿಮಾದ ಗೆಲುವಿಗೆ ನಿಜವಾದ ಕಾರಣ.

Rishab Shetty ಈಗಾಗಲೇ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಾಯಕತ್ವದಲ್ಲಿ ಮೂಡಿಬಂದಿರುವಂತಹ ಕಾಂತಾರ ಸಿನಿಮಾ ಯಾವ ರೀತಿಯಲ್ಲಿ ಯಶಸ್ಸನ್ನು ಸಾಧಿಸಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಕಾಂತಾರ(Kantara) ಸಿನಿಮಾವನ್ನು ಪ್ರಾರಂಭಿಸುವಾಗ ಅವರಿಗೂ ಸಹ ಇದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತದೆ ಎಂಬ ವಿಚಾರ ಅರಿವಿಗೆ ಬಂದಿರಲಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಹೌದು ಗೆಳೆಯರೇ ಕೇವಲ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಂತಹ ಈ ಸಿನಿಮಾ ಭರ್ಜರಿ ನಾನೂರ ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಇಡೀ ಭಾರತೀಯ ಚಿತ್ರರಂಗದ ತಲೆಬಾಗಿಸಿ ನಮಸ್ಕರಿಸುವಂತೆ ಮಾಡಿಕೊಂಡಿದೆ ಇದು ಸಾಮಾನ್ಯದ ಸಾಧನೆಯಲ್ಲ. ಹಿಂದಿ ಭಾಷಿಗರು ಕೂಡ ಈ ಸಿನಿಮಾವನ್ನು ಮೆಚ್ಚಿ ಅಪ್ಪಿಕೊಂಡಿದ್ದಾರೆ ಎಂದರೆ ಇದು ಯಾವ ರೀತಿಯಲ್ಲಿ ಯಶಸ್ಸನ್ನು ಕಂಡು ಇರಬಹುದು ಎಂಬುದನ್ನು ಲೆಕ್ಕಚಾರ ಹಾಕಬೇಕಾಗಿದೆ.

Rajb Shetty Kantara

ಇನ್ನು ಈ ಸಿನಿಮಾದ ಗೆಲುವಿಗೆ ಏಕ ಮಾತ್ರ ಕಾರಣರೂ ರಿಷಬ್ ಶೆಟ್ಟಿ(Rishab Shetty) ಎಂಬುದಾಗಿ ಎಲ್ಲರೂ ಕೂಡ ಮಾತನಾಡುತ್ತಾರೆ. ಆದರೆ ಕೇವಲ ರಿಷಬ್ ಶೆಟ್ಟಿ ಮಾತ್ರ ಅಲ್ಲ ಇನ್ನೊಬ್ಬ ಖ್ಯಾತ ನಟ ಕೂಡ ಕಾಂತಾರ ಸಿನಿಮಾದ ಗೆಲುವಿಗೆ ಮೂಲ ಕಾರಣ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಅಷ್ಟಕ್ಕೂ ಆ ನಟ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಕಾಂತಾರ ಸಿನಿಮಾವನ್ನು ಪ್ರಮುಖವಾಗಿ ಎಲ್ಲರೂ ಮೆಚ್ಚಿಕೊಳ್ಳುವುದು ಸಿನಿಮಾದ ಕ್ಲೈಮ್ಯಾಕ್ಸ್ ಗಾಗಿ. ಇನ್ನು ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಅಂದರೆ ದೈವ ಕೋಲದ ಭಾಗವನ್ನು ಚಿತ್ರಿಕರಿಸಿದ್ದು ಹಾಗೂ ನಿರ್ದೇಶಸಿದ್ದು ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಿರ್ದೇಶಕ ಹಾಗೂ ನಟ ಆಗಿರುವ ರಾಜ್ ಬಿ ಶೆಟ್ಟಿ(Raj B Shetty). ಹೀಗಾಗಿ ಕಾಂತರಾ ಚಿತ್ರದ ಗೆಲುವಿನ ಶ್ರೇಯವನ್ನು ಅವರಿಗೂ ಕೂಡ ನಾವು ಅರ್ಪಿಸಬೇಕಾಗುತ್ತದೆ.

Leave a Comment

error: Content is protected !!