Rishab Shetty: ಗುರು ಕಿಚ್ಚನ ಹಾದಿಯನ್ನು ಕಾಪಿ ಮಾಡಿದ ರಿಷಭ್ ಶೆಟ್ಟಿ ಮಾಡಿದ ಸಾಧನೆ ಎಂತದ್ದು ಗೊತ್ತಾ? ಎಲ್ರೂ ಹೆಮ್ಮೆ ಪಡೋ ವಿಚಾರ.

Dada Sahebphalke Award ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರನ್ನು ರಿಷಭ್ ಶೆಟ್ಟಿ ತಮ್ಮ ಸಿನಿಮಾದ ಸ್ಪೂರ್ತಿ ಎಂಬುದಾಗಿ ಮೊದಲಿನಿಂದಲೂ ಕೂಡ ಕರೆದುಕೊಂಡು ಬಂದು ಅವರ ಅಭಿಮಾನಿ ಎಂಬುದಾಗಿ ಹೇಳಿಕೊಂಡಿದ್ದಾರೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆಗಾಗ ಕಿಚ್ಚನ ಅಭಿಮಾನಿಗಳು ಕೂಡ ರಿಷಬ್ ಶೆಟ್ಟಿ ಅವರ ಬಳಿ ಯಾವಾಗ ನಮ್ಮ ಬಾಸ್ ಗೆ ಸಿನಿಮಾ ಮಾಡುತ್ತೀರಿ ಎಂಬುದಾಗಿ ಕೇಳುತ್ತಲೇ ಇರುತ್ತಾರೆ.

ಇನ್ನು ಹಲವಾರು ವಿಚಾರಗಳಲ್ಲಿ ರಿಷಬ್ ಶೆಟ್ಟಿ(Rishab Shetty) ಹಾಗೂ ಕಿಚ್ಚ ಸುದೀಪ್ ರವರು ಸರಿಸಮಾನರಾಗಿ ಹೋಲಿಕೆ ಆಗುತ್ತಾರೆ. ಈಗ ಅದು ಮತ್ತೊಂದು ಹಂತಕ್ಕೆ ಹೋಗಿ ಸತ್ಯವಾಗಿದೆ ಎಂದರೆ ತಪ್ಪಾಗಲಾರದು. ಹೌದು ಗುರು ಕಿಚ್ಚನ ಹಾದಿಯನ್ನೇ ಶಿಷ್ಯ ಆಗಿರುವ ರಿಷಬ್ ಶೆಟ್ಟಿ ಕೂಡ ಹಿಂಬಾಲಿಸುತ್ತಿದ್ದಾರೆ ಎನ್ನುವುದು ಈ ಮೂಲಕ ಸ್ಪಷ್ಟವಾಗಿ ತಿಳಿದು ಬಂದಿದೆ.

Rishab Shetty Won Dadasaheb phalke award

ಕಿಚ್ಚ ಸುದೀಪ್ ಅವರು ಕೆಲವು ವರ್ಷಗಳ ಹಿಂದಷ್ಟೇ ಹೋದರೆ ದಾದಾಸಾಹೇಬ್ ಪಾಲ್ಕೆ ಇಂಟರ್ನ್ಯಾಷನಲ್ ಅವಾರ್ಡ್(Dadasahebphalke International Award) ಅನ್ನು ಗೆದ್ದುಕೊಂಡಿದ್ದರು. ಈಗ ಅವರ ಅಭಿಮಾನಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವ ರಿಷಬ್ ಶೆಟ್ಟಿ ಕೂಡ ಕಾಂತಾರ ಸಿನಿಮಾಗಾಗಿ ದಾದಾಸಾಹೇಬ್ ಇಂಟರ್ನ್ಯಾಷನಲ್ ಅವಾರ್ಡ್ ಅನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಕಿಚ್ಚನ ಸಾಧನೆಯನ್ನೇ ಅವರ ಅಭಿಮಾನಿ ಹಾಗೂ ಶಿಷ್ಯನಂತೆ ಇರುವ ರಿಷಬ್ ಶೆಟ್ಟಿ ಕೂಡ ಪುನರಾವರ್ತಿಸಿದ್ದಾರೆ.

ಈಗಾಗಲೇ ಕಾಂತಾರ ಸಿನಿಮಾ ಸಾಕಷ್ಟು ವಿಚಾರಗಳಿಗಾಗಿ ಸುದ್ದಿ ಆಗುತ್ತಿದ್ದು ಕಾಂತಾರ ಸಿನಿಮಾದ ಮುಂದಿನ ಭಾಗ ಯಾವಾಗ ಬರಲಿದೆ ಎನ್ನುವುದಾಗಿ ಕನ್ನಡ ಸೇರಿದಂತೆ ಪರಭಾಷೆ ಸಿನಿಮಾ ರಸಿಕರು ಕೂಡ ಕಾತರರಾಗಿ ಕಾಯುತ್ತಿದ್ದಾರೆ. ಕಾಂತಾರ 2(Kantara 2) ಸಿನಿಮಾದ ಬಗ್ಗೆ ನಿಮಗಿರುವಂತಹ ನಿರೀಕ್ಷೆಗಳೇನು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!