SS Rajamouli: ರಾಜ ಮೌಳಿ ಕಾಂಗ್ರೆಸ್ ಪರಾನ ಇಲ್ಲ ಬಿಜೆಪಿ ಪರಾನ? ಕೊನೆಗೂ ಹೊರಬಿತ್ತು ನೋಡಿ ರಹಸ್ಯ.

Rajamouli ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ನಂಬರ್ ಒನ್ ನಿರ್ದೇಶಕ ಎಂಬುದಾಗಿ ರಾಜ ಮೌಳಿಯವರನ್ನು(Rajamouli) ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅವರ ಸಿನಿಮಾದಲ್ಲಿ ಯಾವುದೇ ಸ್ಟಾರ್ ನಟ ಇರಲಿ ಇಲ್ಲದೆ ಇರಲಿ ಅವರ ನಿರ್ದೇಶನ ಹೊಂದಿದ್ದರೆ ಸಾಕು, ಸಾವಿರಾರು ಕೋಟಿ ರೂಪಾಯಿ ಬಿಜಿನೆಸ್ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದಾಗಿ ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಾಚಾರ ಹಾಕುತ್ತಾರೆ. ಅಷ್ಟರ ಮಟ್ಟಿಗೆ ರಾಜಮೌಳಿ ಅವರ ಹೆಸರು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ನಡೆಯುತ್ತದೆ.

ಇವರು ಹುಟ್ಟಿದ್ದು ನಮ್ಮ ಕರ್ನಾಟಕದಲ್ಲಿ ಎನ್ನುವುದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿರುವಂತಹ ವಿಚಾರವಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಭಾರತ ಸಿನಿಮಾ ಇತಿಹಾಸ ಕಂಡಂತಹ ಅತ್ಯುನ್ನತ ಸಿನಿಮಾಗಳಾಗಿರುವ ಬಾಹುಬಲಿ 1 ಹಾಗೂ 2 ಸಿನಿಮಾಗಳ ನಿರ್ಮಾತ ರಾಜ ಮೌಳಿ ಎನ್ನುವುದನ್ನು ನಾವೆಲ್ಲರೂ ಹೆಮ್ಮೆಯಿಂದ ಮಾತನಾಡಬೇಕಾಗಿರುವಂತಹ ವಿಚಾರವಾಗಿದ್ದು ಇತ್ತೀಚಿಗಷ್ಟೇ ಬಿಡುಗಡೆ ಆಗಿರುವ ಆರ್ ಆರ್ ಆರ್(RRR) ಸಿನಿಮಾ ಕೂಡ ಅವರದೇ ನಿರ್ದೇಶನದಲ್ಲಿ ಮೂಡಿ ಬಂದಿದ್ದು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

SS Rajamouli

ಬಾಲಿವುಡ್ ಚಿತ್ರರಂಗವನ್ನು ಮಂಕು ಬಡಿಯುವಂತೆ ಮಾಡಿರುವಂತಹ ಖ್ಯಾತಿ ದಕ್ಷಿಣ ಭಾರತ ಚಿತ್ರರಂಗದ ಜಕ್ಕಣ್ಣ ರಾಜ ಮೌಳಿ ಅವರಿಗೆ ಸಲ್ಲುತ್ತದೆ. ಹಿಂದಿ ಪ್ರೇಕ್ಷಕರು ಕೂಡ ರಾಜ ಮೌಳಿ ಅವರ ಸಿನಿಮಾಗೆ ಕಾಯುತ್ತಿರುತ್ತಾರೆ ಎಂದರೆ ಯಾವ ರೀತಿಯಲ್ಲಿ ಅವರು ಪ್ರಭಾವವನ್ನು ಬೀರಿರಬೇಕು ಎಂಬುದನ್ನು ನೀವೇ ಲೆಕ್ಕಚಾರ ಹಾಕಿಕೊಳ್ಳಿ. ಇನ್ನು ಇತ್ತೀಚಿನ ದಿನಗಳಲ್ಲಿ ಅವರು ಬಿಜೆಪಿ ಅಥವಾ ಕಾಂಗ್ರೆಸ್ ಪರ ಎನ್ನುವ ಮಾತುಗಳು ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಜಕ್ಕಣ್ಣನೇ(Jakkanna) ಬಾಯಿ ಬಿಟ್ಟು ಉತ್ತರವನ್ನು ನೀಡಿರುವುದು ಈಗ ಸುದ್ದಿಯಾಗುತ್ತಿದೆ.

ನನ್ನ ಸಿನಿಮಾಗಳಲ್ಲಿ ಬಿಜೆಪಿ(BJP) ಪರವಾಗಿರುವಂತಹ ರೈಟ್ ವಿಂಗ್ ಅಂಶಗಳು ಹೆಚ್ಚಾಗಿ ಇರುತ್ತದೆ ಹೀಗಾಗಿ ನನ್ನನ್ನು ಬಿಜೆಪಿಯವನೆಂದು ಭಾವಿಸಿರಬಹುದು. ಆದರೆ ಕೊಮುರಂ ಭೀಮ್ ಪಾತ್ರಕ್ಕೆ ಮುಸ್ಲಿಂ ಟೋಪಿಯನ್ನು ಹಾಕಿದ ಸಂದರ್ಭದಲ್ಲಿ ಬಿಜೆಪಿಯ ಶಾಸಕರು ಕೂಡ ನನ್ನನ್ನು ನಡುರೋಡಿನಲ್ಲಿ ಥ’ಳಿಸಬೇಕು ಎನ್ನುವ ಹೇಳಿಕೆಯನ್ನು ನೀಡಿದ್ದರು. ನಾನು ಎರಡು ವರ್ಗದ ಜನರ ಅತ್ಯಂತ ತೀವ್ರವಾದಿಗಳ ವಿರುದ್ಧವಾಗಿ ದ್ವೇಷಿಸುತ್ತೇನೆ ಯಾವ ಪಕ್ಷಕ್ಕೂ ನಾನು ಇಲ್ಲ ಎಂಬುದಾಗಿ ರಾಜಕೀಯದ ಕುರಿತಂತೆ ಯಾವುದೇ ನಿಲುವಿಲ್ಲ ಎಂಬುದನ್ನು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ.

Leave a Comment

error: Content is protected !!