Puneeth Rajkumar: ಯಾರಿಗೂ ತಿಳಿಯದಂತೆ ಈ ಶಾಲೆಗೆ ಅಪ್ಪು ನೀಡಿದ ಹಣ ಕೇಳಿದ್ರೆ ನೀವು ಕೂಡ ಶಾ’ಕ್ ಆಗ್ತೀರಾ! ಬಂಗಾರದ ಮನುಷ್ಯ!

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಾವು ಮಾಡಿರುವಂತಹ ಮಹತ್ಕಾರ್ಯಗಳನ್ನು ಎಲ್ಲಿಯೂ ಕೂಡ ಪ್ರಚಾರಕ್ಕಾಗಿ ಬಳಸಿಕೊಳ್ಳದೆ ಪ್ರತಿಯೊಬ್ಬ ಬಡಜೀವಗಳಿಗೂ ಕೂಡ ತಮ್ಮ ಕೈಯಿಂದಾದ ಅಥವಾ ತಮ್ಮ ಕೈಯಿಂದ ಆಗುವುದಕ್ಕಿಂತ ಹೆಚ್ಚಿಗೆ ಸಹಾಯವನ್ನು ಅಪ್ಪು ಮಾಡಿದ್ದಾರೆ ಎಂದು ಹೇಳಿದರು ತಪ್ಪಾಗಲಾರದು. ಅವರಿಗೆ ಸಿಕ್ಕಿರುವಂತಹ ಕರ್ನಾಟಕ ರತ್ನ(Karnataka Ratna) ಪ್ರಶಸ್ತಿಯೇ ಅವರು ಮಾಡಿರುವ ಸಾಧನೆಗೆ ಹಿಡಿದ ಕೈಗನ್ನಡಿಯಂತಿದೆ.

ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ವೃದ್ಧಾಶ್ರಮ ಅನಾಥಾಶ್ರಮ ಘೋಶಾಲೆ ಶಕ್ತಿಧಾಮ(Shakthi dhama) ಸೇರಿದಂತೆ ಹೇಗೆ ಹತ್ತು ಹಲವರು ಕಾರ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಅಪ್ಪು ಮಾಡಿಕೊಂಡು ಬಂದಿದ್ದಾರೆ. ಎಡಗೈಯಲ್ಲಿ ಮಾಡಿದಾನ ಬಲೆಗೈದು ತಿಳಿಯಬಾರದು ಎನ್ನುವ ಹಾಗೆ ತಾವು ಜೀವ ಇರುವವರೆಗೂ ಕೂಡ ಅದರ ಕುರಿತಂತೆ ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ.

ಇನ್ನು ಒಂದು ಸರ್ಕಾರಿ ಶಾಲೆಗೆ ಕಷ್ಟ ಎಂದು ತಿಳಿದು ಬಂದಾಗ ಯಾರಿಗೂ ತಿಳಿಯದಂತೆ ತಾವೇ ಒಬ್ಬರೇ ಹೆಲ್ಮೆಟ್ ಹಾಕಿಕೊಂಡು ಆ ಶಾಲೆಗೆ ಹೋಗಿ ಅಲ್ಲಿರುವ ಕಷ್ಟಗಳನ್ನು ತಿಳಿದುಕೊಂಡು ಬಂದು 2016ನೇ ಇಸ್ವಿಯಿಂದ ತಮ್ಮ ಕೊನೆಯ ಘಳಿಗೆವರೆಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಕೇವಲ ಅದೊಂದು ಶಾಲೆಗೆ ಪ್ರತಿ ವರ್ಷ 26 ಲಕ್ಷ ರೂಪಾಯಿ ಅನುದಾನವನ್ನು ನೀಡುತ್ತಾ ಬಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಯಾರೋ ಒಬ್ಬ ಜನಪ್ರತಿನಿಧಿಯ ಕೋರಿಕೆಯ ಮೇರೆಗೆ ಆ ಶಾಲೆಯ ಪರಿಸ್ಥಿತಿಯನ್ನು ತಿಳಿಯಲು ಯಾರಿಗೆ ತಿಳಿಯದಂತೆ ಹೆಲ್ಮೆಟ್ ಹಾಕಿಕೊಂಡು ಬಂದು ಅಲ್ಲಿರುವ ಕಷ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪುನೀತ್ ರಾಜಕುಮಾರ್(Puneeth Rajkumar) ಅವರು ಆ ಮಕ್ಕಳಿಗೆ ಸಹಾಯ ಆಗಲಿ ಎನ್ನುವ ಉದ್ದೇಶದಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರತಿ ವರ್ಷ 26 ಲಕ್ಷಕ್ಕೂ ಅಧಿಕ ದಣಿಗೆಯನ್ನು ನೀಡುತ್ತಾ ಬಂದಿರುವುದು ನಿಜಕ್ಕೂ ಕೂಡ ಅವರ ಬಂಗಾರದ ಮನಸ್ಸಿಗೆ ನೀಡುವಂತಹ ಒಂದು ಜ್ವಲಂತ ಉದಾಹರಣೆಯಾಗಿದೆ. ಇದು ಕೇವಲ ಒಂದು ಶಾಲೆಯ ವಿಚಾರ ಇದೇ ರೀತಿ ಹಲವಾರು ಸಂಘ ಸಂಸ್ಥೆಗಳ ಉದ್ಧಾರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನೀಡಿರುವಂತಹ ದೇಣಿಗೆಗೆ ಲೆಕ್ಕವಿಲ್ಲ.

Leave a Comment

error: Content is protected !!