Sandalwood: ಈ ಫೋಟೋದಲ್ಲಿರುವ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಿಂಚುತ್ತಿರುವ ಈ ಕನ್ನಡದ ಸ್ಟಾರ್ ನಟ ಯಾರು ಗೊತ್ತಾ?

Kannada Actors ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಕನ್ನಡ ಚಿತ್ರರಂಗದ(Kannada Film Industry) ಸ್ಟಾರ್ ನಟರಿಗೆ ಸಂಬಂಧಪಟ್ಟಿರುವಂತಹ ಅವರ ಬಾಲ್ಯದ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ‌. ಅವುಗಳಲ್ಲಿಯೇ ಇಂದು ನಾವು ಮಾತನಾಡಲು ಹೊರಟಿರುವುದು ಈ ವೈರಲ್(Viral) ಆಗಿರುವ ಫೋಟೋದ ಬಗ್ಗೆ. ಬಾಲ್ಯದ ಫೋಟೋಗಳನ್ನು ನೋಡಿದ ತಕ್ಷಣ ಕೂಡಲೇ ಅವರು ಯಾರೆಂದು ನಿರ್ಧರಿಸುವುದು ಅತ್ಯಂತ ಕಷ್ಟಕರವಾದ ವಿಚಾರವಾಗಿದೆ.

ನೀವು ಕೂಡ ಈ ಫೋಟೋ ನೋಡಿ ಈ ನಟ ಯಾರು ಎಂಬುದನ್ನು ಗೆಸ್ ಮಾಡಬಹುದಾಗಿದೆ ಆದರೆ ಅದು ಕಷ್ಟ ಸಾಧ್ಯ ಎಂಬುದು ನಮಗೆ ತಿಳಿದಿರುವಂತಹ ವಿಚಾರವಾಗಿದೆ. ಹಾಗಿದ್ರೆ ಬನ್ನಿ ಈ ನಟನ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಹೌದು ಮಿತ್ರರೇ, ಈ ಬಾಲ್ಯದ ಫೋಟೋ ಬೇರೆ ಯಾರದ್ದೂ ಅಲ್ಲ ಬದಲಾಗಿ ನಮ್ಮ ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್(Simple Star) ಆಗಿರುವ ರಕ್ಷಿತ್ ಶೆಟ್ಟಿ ಅವರ ಫೋಟೋ. ನೋಡಿದ ತಕ್ಷಣ ಅವರು ಎನ್ನುವುದನ್ನು ಗುರುತಿಸಲು ಕೂಡ ಸಾಧ್ಯವಾಗದ ರೀತಿಯಲ್ಲಿದೆ.

ಕರಾವಳಿ ಮೂಲದ ಅನುಕೂಲಸ್ತ ಕುಟುಂಬದಿಂದ ಬಂದಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಸಾಧಿಸಬೇಕು ಎನ್ನುವ ಕನಸನ್ನು ರಕ್ಷಿತ್ ಶೆಟ್ಟಿ(Rakshit Shetty) ಅವರು ಹೊಂದಿರುತ್ತಾರೆ. ಆರಂಭಿಕ ಸಮಯಗಳಲ್ಲಿ ಸಾಕಷ್ಟು ಸತತ ಸೋಲುಗಳಿಂದ ಕಂಗೆಟ್ಟಿದ್ದರು ಕೂಡ ಛಲ ಬಿಡದ ತ್ರಿವಿಕ್ರಮನಂತೆ ಕನ್ನಡ ಚಿತ್ರರಂಗದಲ್ಲಿ ಇಂದು ಅವರು ಏರಿರುವ ಸ್ಥಾನ ನಿಜಕ್ಕೂ ಪ್ರತಿಯೊಬ್ಬ ಯುವ ಕಲಾವಿದನಿಗೆ ಸ್ಪೂರ್ತಿಯಾಗಿದೆ.

ಇಂದು ಕನ್ನಡ ಚಿತ್ರರಂಗದಲ್ಲಿ ನಟ ನಿರ್ದೇಶಕ ಹಾಗೂ ನಿರ್ಮಾಪಕನಾಗಿಯೂ ಕೂಡ ರಕ್ಷಿತ್ ಶೆಟ್ಟಿ(Rakshit Shetty) ಅವರು ಯಶಸ್ವಿ ಕರಿಯರ್ ಅನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ ಅವರ 777 ಚಾರ್ಲಿ(777 Charlie) ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿ 100 ಕೋಟಿ ಅಧಿಕ ಕಲೆಕ್ಷನ್ ಮಾಡುವ ಮೂಲಕ ರಕ್ಷಿತ್ ಶೆಟ್ಟಿ ಅವರಿಗೆ ಇನ್ನಷ್ಟು ಜನಪ್ರಿಯತೆ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಅವಕಾಶವನ್ನು ನೀಡಿದೆ. ನಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!