Rakshit Shetty: ತಮ್ಮ ಜೀವನದ ಮಹತ್ವದ ನಿರ್ಧಾರವನ್ನು ಅನೌನ್ಸ್ ಮಾಡಿದ ರಕ್ಷಿತ್ ಶೆಟ್ಟಿ.

Rakshit Shetty ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಇದ್ರೆ ಸಾಕು ಸಿನಿಮಾ ಸ್ಮಾಲ್ ಬಜೆಟ್ ಆಗಿದ್ದರೂ ಕೂಡ ಖಂಡಿತವಾಗಿ ದೊಡ್ಡ ಮಟ್ಟದಲ್ಲಿ ಹಣ ಗಳಿಸುತ್ತದೆ ಎಂಬುದನ್ನು ಕಿರಿಕ್ ಪಾರ್ಟಿ(Kirik Party Cinema) ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟವರು ಎಂದು ನಿಮಗೆಲ್ಲರಿಗೂ ತಿಳಿದಿದೆ.

ರಕ್ಷಿತ್ ಶೆಟ್ಟಿ(Rakshit Shetty) ಅವರು ಸಿನಿಮಾ ಮಾಡುತ್ತಿದ್ದಾರೆ ಅಂದ್ರೆ ಒಂದು ರೀತಿ ಹೈಫ್ ಇರುತ್ತದೆ ಯಾಕೆಂದರೆ ಅವರು ತಮ್ಮ ಟೀಮ್ ಜೊತೆಗೆ ಮಾತ್ರ ಸಿನಿಮಾ ಮಾಡೋದು. ಹೀಗಾಗಿ ಕಥೆಗಳಲ್ಲಿ ಅವರ ಸಲಹೆಗಳು ಕೂಡ ಅವರು ನಿರ್ದೇಶನ ಮಾಡದೆ ಇದ್ದರೂ ಕೂಡ ಇದ್ದೇ ಇರುತ್ತದೆ ಎಂಬುದನ್ನು ಪ್ರತಿಯೊಬ್ಬರು ನಂಬುತ್ತಾರೆ. ಅಷ್ಟರ ಮಟ್ಟಿಗೆ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಶೈಲಿಯ ಯೋಚನೆ ಪ್ರೇಕ್ಷಕರನ್ನು ಆವರಿಸಿಕೊಂಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ರಕ್ಷಿತ್ ಶೆಟ್ಟಿ ಅವರು ಇತ್ತೀಚಿಗಷ್ಟೇ, ತಮ್ಮ ಜೀವನದ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಅವರ ಅನೌನ್ಸ್ಮೆಂಟ್ ಕೇಳಿ ಪ್ರತಿಯೊಬ್ಬರು ಕೂಡ ಆಶ್ಚರ್ಯ ಚಕಿತರಾಗಿದ್ದಾರೆ ಹಾಗೂ ಖುಷಿಯಾಗಿದ್ದಾರೆ. ಅಷ್ಟಕ್ಕೂ ಆ ಮಹತ್ವದ ನಿರ್ಧಾರ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ರಕ್ಷಿತ್ ಶೆಟ್ಟಿ ನಾಯಕರು ವಂತಹ ಬಹುನಿರೀಕ್ಷಿತ ಸಿನಿಮಾ ಸಪ್ತಸಾಗರದಾಚೆ ಎಲ್ಲೋ(SSE) ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದ್ದು ಮೊದಲ ಭಾಗ ಸೆಪ್ಟೆಂಬರ್ ಒಂದರಂದು ಬಿಡುಗಡೆಯಾದರೆ ಎರಡನೇ ಭಾಗ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ ಎಂಬುದಾಗಿ ತಿಳಿದು ಬಂದಿದ್ದು ಕೇವಲ ಒಂದು ತಿಂಗಳ ಅಂತರದ ನಡುವೆ ಎರಡು ಭಾಗಗಳು ಬಿಡುಗಡೆಯಾಗುತ್ತಿರುವ ಬಗ್ಗೆ ಪ್ರತಿಯೊಬ್ಬರು ಕೂಡ ಆಶ್ಚರ್ಯ ಚಕಿತರಾಗಿದ್ದಾರೆ.

Leave a Comment

error: Content is protected !!