Rakshita Prem ನಟಿ ರಕ್ಷಿತಾ ನಿರ್ದೇಶಕ ಪ್ರೇಮ್ ಅವರ ನಡುವಿನ ವಯಸ್ಸಿನ ಅಂತರ ಎಷ್ಟು? ಇವರ ಲವ್ ಸ್ಟೋರಿ ಹಿಂದಿನ ಇಂಟರೆಸ್ಟಿಂಗ್ ಕಹಾನಿ.

Rakshita Prem ಕನ್ನಡ ಚಿತ್ರರಂಗದಲ್ಲಿ ನಟ ನಟಿಯರು ಹಾಗೂ ನಿರ್ದೇಶಕ ನಿರ್ಮಾಪಕರು ಈ ರೀತಿಯಲ್ಲಿ ಅವರವರೇ ಪ್ರೀತಿಸಿ ಮದುವೆಯಾಗಿರುವಂತಹ ಹಲವಾರು ಘಟನೆಗಳು ನಿಮಗೆ ದೊರಕಬಹುದು. ಅವರಲ್ಲಿ ಒಂದು ಜೋಡಿಯ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಟೈಟಲ್ ನೋಡಿ ನೀವೇ ಅಂದಾಜು ಮಾಡಿರಬಹುದು ನಾವು ಮಾತನಾಡಲು ಹೊರಟಿರುವುದು ಒಂದು ಕಾಲದ ಬಹು ಬೇಡಿಕೆ ನಟಿ ರಕ್ಷಿತ(Rakshita) ಹಾಗೂ ಹ್ಯಾಟ್ರಿಕ್ ಡೈರೆಕ್ಟರ್ ಆಗಿರುವ ಜೋಗಿ ಪ್ರೇಮ್(Jogi Prem) ಅವರ ಕುರಿತಂತೆ.

ಧಮ್(Dhum) ಸಿನಿಮಾದ ಡಬ್ಬಿಂಗ್ ಸಮಯದಲ್ಲಿ ರಾಮ್ಪ್ರಸಾದ್ ಅವರ ಆಫೀಸ್ ನಲ್ಲಿ ರಕ್ಷಿತಾ ಅವರನ್ನು ಪ್ರೇಮ್(Prem’s) ಅವರು ಮೊದಲ ಬಾರಿಗೆ ಭೇಟಿಯಾಗುತ್ತಾರೆ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ಮೊದಲ ಪರಿಚಯವಾಗಿ ಇಬ್ಬರು ಕೂಡ ಅಲ್ಲಿಯೇ ಮೊದಲ ಬಾರಿಗೆ ಮಾತನಾಡುತ್ತಾರೆ. ನಂತರ ಜೋಗಿ ಪ್ರೇಮ್ ಅವರ ಕೇರಿಂಗ್ ಹಾಗೂ ಅವರು ಮೃದುವಾಗಿ ಮಾತನಾಡುವ ಸ್ವಭಾವ ರಕ್ಷಿತಾ ಅವರಿಗೆ ಸಾಕಷ್ಟು ಇಷ್ಟವಾಗಿ ಅವರು ಜೋಗಿ ಪ್ರೇಮ್ ಅವರಿಗೆ ಒಂದು ದಿನ ಕರೆ ಮಾಡುತ್ತಾರೆ. ಕರೆ ಮಾಡಿದಾಗ ಅವರೇ ಮೊದಲು ಪ್ರೇಮ್ ಅವರಿಗೆ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾರೆ.

Rakshit with jogi prem

ನಿಮ್ಮ ಕೇರಿಂಗ್ ಸ್ವಭಾವ ನನಗೆ ತುಂಬಾ ಇಷ್ಟ ಆಯಿತು ಐ ಲವ್ ಯು ಎನ್ನುವುದಾಗಿ ಪ್ರಪೋಸ್ ಮಾಡುತ್ತಾರೆ. ಕೇವಲ ಇಷ್ಟು ಮಾತ್ರವಲ್ಲದೆ ನೀವು ನನ್ನ ಪ್ರಪೋಸ್ ಅನ್ನು ಒಪ್ಪಲೇಬೇಕೆಂದೇನೂ ಇಲ್ಲ ಎಂಬುದಾಗಿ ಕೂಡ ಹೇಳುತ್ತಾರೆ. ಅದಕ್ಕೆ ಹಾಗಿಲ್ಲ ನೀವು ಬೇಸರ ಪಟ್ಕೋಬೇಡಿ ನನಗೆ ಆತರ ಏನೂ ಇಲ್ಲ ಎಂಬುದಾಗಿ ಹೇಳಿ ಪ್ರೇಮ್(Prem) ಅವರು ಫೋನ್ ಇಟ್ಟುಬಿಡುತ್ತಾರೆ. ಇದಾದ ನಂತರ ಮತ್ತೆ ಅವರೇ ರಕ್ಷಿತಾ ಅವರಿಗೆ ಕರೆ ಮಾಡಿ ನಮ್ಮದು ಹಳ್ಳಿಯಿಂದ ಬಂದ ಕುಟುಂಬ ನಮ್ಮ ಮನೆಯಲ್ಲಿ ಯಾರಿಗೂ ಇಂಗ್ಲೀಷ್ ಬರುವುದಿಲ್ಲ ಎಂಬುದಾಗಿ ಹೇಳಿ ತಮ್ಮ ಜೀವನದ ಪರಿಚಯವನ್ನು ರಕ್ಷಿತಾ ಅವರಿಗೆ ಮಾಡಿದ ನಂತರವೇ ಇಬ್ಬರು ಮದುವೆ ಆಗುತ್ತಾರೆ.

ಇನ್ನು ಇವರಿಬ್ಬರ ವಯಸ್ಸಿನ ಅಂತರವನ್ನು ಗಮನಿಸುವುದಾದರೆ ನಟಿ ರಕ್ಷಿತಾ ಅವರಿಗಿಂತ ಪ್ರೇಮ್ ಅವರು ವಯಸ್ಸಿನಲ್ಲಿ ಐದು ವರ್ಷ ದೊಡ್ಡವರು. ಮದುವೆ ಆದ ನಂತರ ರಕ್ಷಿತಾ ಅವರು ಯಾವುದೇ ಸಿನಿಮಾದಲ್ಲಿಯೂ ಕೂಡ ನಟಿಯಾಗಿ ಕಾಣಿಸಿಕೊಂಡಿಲ್ಲ. ಪ್ರೇಮ್ ಅವರು ಕೂಡ ಈಗಾಗಲೇ ನಿರ್ದೇಶನದಲ್ಲಿ ಕಮ್ ಬ್ಯಾಕ್ ಮಾಡಿದ್ದು ಅವರ ನಿರ್ದೇಶನದ ಕೆಡಿ(KD) ಸಿನಿಮಾ ಈಗ ಎಲ್ಲರ ನಿರೀಕ್ಷೆಯಲ್ಲಿದೆ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!