Puneeth Rajkumar ಸಾಕಷ್ಟು ದಿನಗಳ ನಂತರ ಬಿದ್ದು ಬಿದ್ದು ನಕ್ಕ ಅಶ್ವಿನಿ ಪುನೀತ್ ರಾಜಕುಮಾರ್. ಅವರ ನಗುವಿಗೆ ಕಾರಣ ಯಾರು ಗೊತ್ತಾ?

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರ ಧರ್ಮಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಾಗಿನಿಂದಲೂ ಕೂಡ ನಿಜಕ್ಕೂ ಜೀವನದಲ್ಲಿ ಒಬ್ಬಂಟಿಯಾಗಿ ನಗುವುದನ್ನೇ ಮರೆತಿದ್ದಾರೆ ಎಂದರೆ ತಪ್ಪಾಗಲಾರದು. ಅಪ್ಪು(Appu) ಅವರು ನಡೆಸಿಕೊಂಡು ಬರುತ್ತಿದ್ದ ಎಲ್ಲಾ ಕಾರ್ಯಗಳನ್ನು ಈಗ ಅಶ್ವಿನಿ ಅವರೇ ನಡೆಸಿಕೊಂಡು ಹೋಗುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿಕೊಂಡು ಬಂದಿದ್ದ ಎಲ್ಲ ಜನ ಸೇವ ಕಾರ್ಯಗಳು ಹಾಗೂ ಪಿ ಆರ್ ಕೆ ಪ್ರೊಡಕ್ಷನ್(PRK Productions) ಸಂಸ್ಥೆಯ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ ಮಾಡಿ ಅವರಿಗೊಂದು ಮಿಂಚಲು ವೇದಿಕೆಯನ್ನು ನೀಡುತ್ತಿದ್ದ ಕೆಲಸವನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರೇ ನಿರ್ಮಾಪಕವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದು ಪ್ರತಿಯೊಬ್ಬರೂ ಕೂಡ ಮೆಚ್ಚಲೇ ಬೇಕಾಗಿರುವಂತಹ ವಿಚಾರ.

Puneeth Rajkumar With his wife Ashwini Puneeth Rajkumar

ಯಾಕೆಂದರೆ ದೊಡ್ಮನೆ ಸೊಸೆಯ ಹೆಸರಿಗೆ ತಕ್ಕಂತೆ ಎಲ್ಲರೂ ಮೆಚ್ಚುವಂತಹ ಹಾಗೂ ಬೇರೆಯವರಿಗೆ ಸಹಾಯ ಆಗುವಂತೆ ಕೆಲಸವನ್ನೇ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರು ಮಾಡುತ್ತಿದ್ದಾರೆ. ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ನಗುವನ್ನೇ ಮರೆತಿದ್ದ ಅಶ್ವಿನಿ ಅವರು ಕೂಡ ಬಿದ್ದು ಬಿದ್ದು ನಕ್ಕಿದ್ದರು. ಅಷ್ಟಕ್ಕೂ ಅದಕ್ಕೆ ಕಾರಣವಾದರೂ ಯಾರು ಹಾಗೂ ಆ ಕಾರ್ಯಕ್ರಮವಾದರೂ ಯಾವುದು ಎಂಬುದನ್ನು ತಿಳಿಯೋಣ.

ಬಿಗ್ ಬಾಸ್ ಖ್ಯಾತಿಯ ನಟ ಒಳ್ಳೆ ಹುಡುಗ ಪ್ರಥಮ್(Olle Huduga Pratham) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ನಟಭಯಂಕರ(Nata Bhayankara) ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಅತಿಥಿಯನ್ನಾಗಿ ಧರಿಸಿದ್ದರು ಈ ಸಂದರ್ಭದಲ್ಲಿ ಅವರು ಹೇಳಿದ ಹಾಸ್ಯದ ಮಾತುಗಳಿಂದ ಅಶ್ವಿನಿ ಅವರು ಕ್ಯಾಮರಾ ಕಣ್ಣಿಗೆ ಮನಸ್ಪೂರ್ತಿಯಾಗಿ ನಕ್ಕಿದ್ದು ಕಂಡುಬಂದಿತು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು ಎಲ್ಲರ ಮನಸ್ಸನ್ನು ತೃಪ್ತಿಯನ್ನಾಗಿಸಿದ. ಹಲವಾರು ಸಮಯಗಳಿಂದ ಬೇಸರದಲ್ಲಿದ್ದ ಅವರ ಮುಖದಲ್ಲಿ ನಗು ಮೂಡಿರುವುದು ದೊಡ್ಮನೆ(Dodmane) ಅಭಿಮಾನಿಗಳಿಗೆ ಸಂತೋಷವನ್ನು ತರಿಸಿದೆ.

Leave a Comment

error: Content is protected !!