Virat Kohli: ವಿರಾಟ್ ಕೊಹ್ಲಿ ಬಯೋಪಿಕ್ ನಲ್ಲಿ ಕಾಣಿಸಿಕೊಳ್ತಾನಂತೆ ಈ ಖ್ಯಾತ ನಟ! ನೋಡೋಕೂ ಕೂಡ ಹಾಗೇ ಇದ್ದಾನಂತೆ.

Film News ಇಡೀ ಭಾರತೀಯ ಕ್ರಿಕೆಟ್ ಕ್ಷೇತ್ರದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಕೂಡ ಕಾಣಿಸಿಕೊಳ್ಳುತ್ತಾರೆ. ನಾಯಕನಾಗಿ ಅವರು ದೊಡ್ಡ ಮಟ್ಟದಲ್ಲಿ ಸಾಧನೆಯನ್ನು ಮಾಡದಿದ್ದರೂ ಕೂಡ ಒಬ್ಬ ಕ್ರಿಕೆಟ್ ಬ್ಯಾಟ್ಸ್ಮನ್ ಆಗಿ ನಿಜಕ್ಕೂ ಅವರ ಸಾಧನೆ ಅಸಾಮಾನ್ಯ. ಇದು ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳಲೇ ಬೇಕಾಗಿರುವಂತಹ ಮಾತಾಗಿದೆ.

ಇನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕ್ರಿಕೆಟ್ ಕ್ಷೇತ್ರದ ದಿಗ್ಗಜರು ಆಗಿರುವ ಸಚಿನ್ ತೆಂಡೂಲ್ಕರ್ ಮಹೇಂದ್ರ ಸಿಂಗ್ ಧೋನಿ (MS Dhoni)ಮೊಹಮ್ಮದ್ ಅಜರುದ್ದೀನ್ ಕಪಿಲ್ ದೇವ್ ಸೇರಿದಂತೆ ಹಲವಾರು ಕ್ರಿಕೆಟಿಗರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ಹೊರಬಂದಿದೆ. ಆದರೆ ಈಗ ವಿರಾಟ್ ಕೊಹ್ಲಿ ಅವರ ಬಯೋಪಿಕ್ ಕುರಿತಂತೆ ಕೂಡ ಚರ್ಚೆ ನಡೆಯುತ್ತಿದೆ.

ಇದೀಗ ಈ ಸಿನಿಮಾದ ಬಗ್ಗೆ ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್(Mega Power star Ram Charan) ರವರು ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಜೀವನ ಎನ್ನುವುದು ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಅವರ ಬಯೋಪಿಕ್ ಅನ್ನು ಮಾಡುವಂತಹ ಅವಕಾಶ ಸಿಕ್ಕರೆ ಖಂಡಿತವಾಗಿ ನಾನು ಅವರ ಪಾತ್ರದಲ್ಲಿ ನಟಿಸಲು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾರೆ.

ಕೇವಲ ಇಷ್ಟಕ್ಕೆ ನಿಲ್ಲದ ಮೆಗಾ ಪವರ್ ಸ್ಟಾರ್ ರಾಮಚರಣ್(Ram Charan) ರವರು ನಾನು ನೋಡುವುದಕ್ಕೆ ಕೂಡ ವಿರಾಟ್ ಕೊಹ್ಲಿ(Virat Kohli) ಅವರಂತೆ ಇರುವುದರಿಂದ ಅವರ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಎನ್ನುವ ಭರವಸೆಯ ಮಾತುಗಳನ್ನು ಕೂಡ ಹೇಳಿದ್ದಾರಂತೆ. ರಾಮಚರಣ್ ಅವರ ಆರ್ ಆರ್ ಆರ್(RRR) ಸಿನಿಮಾದ ಅಲ್ಲೂರಿ ಸೀತ ರಾಮ ರಾಜು ಪಾತ್ರ ಈಗಾಗಲೇ ಎಲ್ಲರ ಮನೆಗೆ ಇದ್ದಿದ್ದು ಈಗ ಅವರು ವಿರಾಟ್ ಕೊಹ್ಲಿ(Virat Kohli) ಅವರ ಪಾತ್ರದಲ್ಲಿ ಕೂಡ ಕಾಣಿಸಿಕೊಳ್ಳಲು ಉತ್ಸುಕರಾಗಿರುವುದು ಎಲ್ಲರ ಕುತೂಹಲವನ್ನು ಕೆರಳಿಸಿದೆ.

Leave a Comment

error: Content is protected !!