ರಾಜಕುಮಾರ ಅವರ ಮಗಳನ್ನು ವಿವಾಹವಾದ ನಂತರ ನಟ, ರಾಮಕುಮಾರ್ ಅವರು ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಕಳೆದುಕೊಂಡರಾ? ಇಲ್ಲಿದೆ ನೋಡಿ ಸಂಪೂರ್ಣ ಸುದ್ದಿ…

ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಾಮ್ ಕುಮಾರ್ ಅವರು 1990ರಲ್ಲಿ ಆವೇಶ ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಅದೇ ವರ್ಷ ರಾಜೇಂದ್ರ ಸಿಂಗ್ ಬಾಬು ಅವರ ಯುದ್ಧ ಕತೆ, ಮುತ್ತಿನ ಹಾರ ಚಿತ್ರದಲ್ಲಿ ನಟಿಸಿದರು. ‘ಚಾಕ್ಲೇಟ್ ಹೀರೋ’ ಎಂದೇ ಪ್ರಸಿದ್ಧಿಯಾಗಿದ್ದ ರಾಮಕುಮಾರ್ ಅವರು ಅಭಿನಯಕ್ಕೆ ಎಲ್ಲರಿಂದ ಹೊಗಳಿಕೆಯನ್ನು ಪಡೆದಿದ್ದರು.

ಗೆಜ್ಜೆನಾದ, ಹಬ್ಬ, ಸ್ನೇಹಲೋಕ, ತವರಿನ ತೊಟ್ಟಿಲು ಸೇರಿದಂತೆ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಾಮ್ ಕುಮಾರ್ ಅವರನ್ನು ತರೆಯ ಮೇಲೆ ಕಂಡಾಗ ಅಭಿಮಾನಿಗಳು ಸಂತಸಗೊಳ್ಳುತ್ತಿದ್ದರು. ರಾಮ್ ಕುಮಾರ್ ಅವರು ನಟಿಸಿರುವ ಎಲ್ಲ ಚಿತ್ರಗಳು ಯಶಸ್ಸನ್ನು ದೊರಕಿಸಿ ಕೊಟ್ಟಿಲ್ಲ. ಸಾಲು ಸಾಲು ಚಿತ್ರಗಳ ಸೋಲನ್ನು ಅನುಭವಿಸಿದ್ದಾರೆ. ಇಂದು ಚಿತ್ರರಂಗದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೆ ಇರಲು ಹಲವಾರು ಕಾರಣಗಳಿರಬಹುದು.

ಶ್ರೀನಗರ ನಾಗರಾಜ್ ಅವರ ಪುತ್ರನಾದ ರಾಮಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಅಪ್ಪಾಜಿ ಎಂದೇ ಕರೆಸಿಕೊಳ್ಳುವ ಡಾಕ್ಟರ್ ರಾಜಕುಮಾರ್ ಅವರ ಮಗಳಾದ ಪೂರ್ಣಿಮಾ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳು; ಧನ್ಯಾ, ಧೀರೇನ್. ರಾಮ್ ಕುಮಾರ್ ಅವರು ನೋಡಲು ಸುಂದರವಾಗಿದ್ದರಲ್ಲದೆ, ಪ್ರೇಮ ಕಥೆಗೆ ತಕ್ಕನಾದ ಹಾವಭಾವಗಳನ್ನು ವ್ಯಕ್ತಪಡಿಸುತ್ತಿದ್ದರು.

ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ಬೇರೆ ಬೇರೆ ಪಾತ್ರಗಳಲ್ಲಿ ನೋಡಲು ಇಚ್ಚಿಸುತ್ತಾರೆ. ಹಲವು ಸಿನಿಮಾಗಳಲ್ಲಿ ಒಂದೇ ರೀತಿಯ ಪಾತ್ರಕ್ಕೆ ಬಣ್ಣ ಹಚ್ಚಿದರೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ತರಲಳಿ ಚಿತ್ರ ನೋಡಲು ಅಷ್ಟಾಗಿ ಆಸಕ್ತಿ ತೋರುವುದಿಲ್ಲ. ಸಿನಿಮಾರಂಗದಲ್ಲಿ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಆದರೆ ರಾಮಕುಮಾರ್ ಅವರು ನಟಿಸಿರುವ ಹಲವಾರು ಚಿತ್ರಗಳಲ್ಲಿ ಪ್ರೇಮ ಕಥೆಯ ನಾಯಕನಾಗಿ, ಸಂಸಾರಸ್ಥನಾಗಿ ಕಾಣಿಸಿಕೊಳ್ಳುತ್ತಾರೆ. ಇದರಿಂದಾಗಿ ಅವರ ಅನೇಕ ಚಿತ್ರಗಳು ಉಳಿದ ನಟರ ಚಿತ್ರಗಳಂತೆ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ ಎಂಬುದು ಕೆಲವು ಸಿನಿಪ್ರಿಯರ ಊಹೆ.

ಸತತವಾಗಿ ಸೋಲನ್ನು ಕಂಡ ರಾಮಕುಮಾರ್ ಅವರು ತಾನು ಹೊಸ ಪಾತ್ರಗಳಿಗೆ ಬಣ್ಣ ಹಚ್ಚಬೇಕೆಂದು ನಿರ್ಧರಿಸಿ ಕನ್ನಡದ ನಂಬರ್ ಒನ್ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡರು. ಅದಾಗಲೇ ತಡವಾಗಿ ಹೋಗಿತ್ತು. ಸಿನಿ ರಂಗದಲ್ಲಿಯೇ ಮುಂದಿನ ಪ್ರಯಾಣ ಬೆಳೆಸಬೇಕೆಂದು ಆಸೆಯನ್ನು ಹೊಂದಿದ್ದ ರಾಮಕುಮಾರ್ ಅವರು ರಾಜಕುಮಾರ ಅವರ ಮಗಳನ್ನು ವಿವಾಹವಾಗಲು ನಿರ್ಧರಿಸುತ್ತಾರೆ. ವಿವಾಹವಾದ ಮೇಲೆ ಮೊದಲಿನ ಜೀವನಕ್ಕಿಂತ ಕೊಂಚವಾದರೂ ಬದಲಾವಣೆ ಇದ್ದೇ ಇರುತ್ತದೆ. ವೈಯಕ್ತಿಕ ಸಮಸ್ಯೆಗಳಿಂದ ರಾಮಕುಮಾರ್ ಅವರು ಮಾನಸಿಕವಾಗಿ ಸ್ವಲ್ಪಮಟ್ಟಿಗೆ ಕುಗ್ಗಿ ಹೋಗಿದ್ದರಂತೆ. ಈ ವಿಚಾರವು ಕೂಡ, ಅವರು ಹೆಚ್ಚೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ದೊರೆಯದೆ ಸಿನಿರಂಗದಿಂದ ದೂರವೇ ಉಳಿಯಲು ಕಾರಣವಾಗಿರಬಹುದೆಂದು ಹಲವರು ಹೇಳುತ್ತಾರೆ.

Leave a Comment

error: Content is protected !!