Rashmika Mandanna: ವಾರಿಸು ಸಿನಿಮಾದ ಚಿತ್ರೀಕರಣದಲ್ಲಿ ಸಾಕಷ್ಟು ಬಾರಿ ಪ್ರಜ್ಞೆ ತಪ್ಪುತ್ತಿದ್ದರಂತೆ ನಟಿ ರಶ್ಮಿಕಾ ಮಂದಣ್ಣ! ಯಾಕಂತೆ ಗೊತ್ತಾ ಇಲ್ಲಿದೆ ನೋಡಿ ಕಾರಣ‌.

Rashmika Mandanna ರಶ್ಮಿಕ ಮಂದಣ್ಣ ಇಂದು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಕೂಡ ನಟಿಸಿದರೆ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆಯುವಂತಹ ಅಭಿಮಾನಿ ಬಳಗವನ್ನು ಎಲ್ಲಾ ಕಡೆ ಹೊಂದಿದ್ದಾರೆ. ಪ್ಯಾನ್ ಇಂಡಿಯನ್ ಸಿನಿಮಾಗಳಂತೆ ಪ್ಯಾನ್ ಇಂಡಿಯನ್ ನಟಿ ಕೂಡ ಆಗಿದ್ದಾರೆ ನಮ್ಮೆಲ್ಲರ ನೆಚ್ಚಿನ ರಶ್ಮಿಕ ಮಂದಣ್ಣ(Rashmika Mandanna).

ರಶ್ಮಿಕಾ ಮಂದಣ್ಣ(Rasbmika Mandanna) ಇತ್ತೀಚಿಗಷ್ಟೇ ಟ್ವಿಟರ್ ನಲ್ಲಿ ಅಭಿಮಾನಿಗಳ ಜೊತೆಗೆ ಪ್ರಶ್ನೋತ್ತರ ಸೆಶನ್ ಅನ್ನು ಪ್ರಾರಂಭಿಸಿದ್ದು ಅದರಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುವಂತಹ ಪ್ರಯತ್ನವನ್ನು ನಟಿ ರಶ್ಮಿಕ(Rashmika) ಮಂದಣ್ಣ ಮಾಡಿರುವುದು ಸಕ್ಕತ್ ಕ್ಯೂಟ್ ಎಂದೆನಿಸಿದೆ. ಇನ್ನು ಅದರಲ್ಲಿ ಕೇಳಿರುವಂತಹ ಒಂದು ಪ್ರಶ್ನೆಗೆ ಅವರು ನೀಡಿರುವ ಉತ್ತರ ಎಲ್ಲರನ್ನು ಆಶ್ಚರ್ಯಕ್ಕೆ ತಳ್ಳಿದೆ.

ತಮಿಳುನ ತಲಪತಿ ವಿಜಯ್(Thalapathy Vijay) ನಟನೆಯ ವಾರಿಸು ಸಿನಿಮಾದಲ್ಲಿ ಕೂಡ ರಶ್ಮಿಕ ಮಂದಣ್ಣ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಡೆದಿರುವಂತಹ ತಮಾಷೆಯ ವಿಚಾರವನ್ನು ಹಂಚಿಕೊಳ್ಳಿ ಮೇಡಂ ಎನ್ನುವುದಾಗಿ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದರು. ಇದರ ಕುರಿತಂತೆ ಮಾತನಾಡುತ್ತಾ ರಶ್ಮಿಕ ಮಂದಣ್ಣ ನೀಡಿರುವ ಒಂದು ಹೇಳಿಕೆ ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದೆ.

ಹೌದು ಮಿತ್ರರೇ, ಈ ಸಂದರ್ಭದಲ್ಲಿ ಚಿತ್ರೀಕರಣ ಆಗುತ್ತಿದ್ದ ವೇಳೆಯಲ್ಲಿ ರಶ್ಮಿಕ ಮಂದಣ್ಣ ಆಗಾಗ ಸೋಫಾ ಮೇಲೆ ಕುಳಿತು ಪ್ರಜ್ಞೆ ತಪ್ಪಿದವರಂತೆ ಸುಸ್ತಾದಾಗ ಆರಾಮ ಪಡೆಯುತ್ತಿದ್ದರಂತೆ. ಈ ಸಂದರ್ಭದಲ್ಲಿ ನಿರ್ದೇಶಕ ಆಗಿದ್ದ ವಂಶಿ ಅವರು ರಶ್ಮಿಕ(Rashmika) ಅವರ ಫೋಟೋ ತೆಗೆದು ನಟ ವಿಜಯ ಬಳಿ ಹೋಗಿ ತಮಾಷೆ ಮಾಡುತ್ತಿದ್ದರು ಎನ್ನುವ ಹಾಸ್ಯ ಸನ್ನಿವೇಶವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

Leave a Comment

error: Content is protected !!