Dboss: ಡಿಬಾಸ್ ನಟನೆಯ ಕಲಾಸಿಪಾಳ್ಯ ಎಷ್ಟು ಕಲೆಕ್ಷನ್ ಮಾಡಿತ್ತು? ದರ್ಶನ್ ರವರ ಈ ಸೂಪರ್ ಹಿಟ್ ಸಿನಿಮಾ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಮೆಜೆಸ್ಟಿಕ್ ಸಿನಿಮಾದ ಮೂಲಕ ನಾಯಕ ನಟನಾಗಿ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದ ನಂತರ ಮತ್ತೆ ಚಿತ್ರರಂಗದಲ್ಲಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ಸಿನಿಮಾರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಹೋದ ದರ್ಶನ್ ರವರ ಬೇಡಿಕೆ ಎನ್ನುವುದು ಮಾಸ್ ವಿಭಾಗದಲ್ಲಿ ಆ ಕಾಲದಲ್ಲಿಯೇ ದೊಡ್ಡ ಮಟ್ಟದಲ್ಲಿ ಹೆಚ್ಚಿತ್ತು. ಇಂದಿಗೂ ಕೂಡ ಅವರ ಹಲವಾರು ಹಳೆಯ ಸಿನಿಮಾಗಳನ್ನು ಇಷ್ಟಪಡುವಂತಹ ದೊಡ್ಡ ಅಭಿಮಾನಿ ಬಳಗವೇ ಇದೆ.

ಅದರಲ್ಲೂ ವಿಶೇಷವಾಗಿ ಕಲಾಸಿಪಾಳ್ಯ(Kalasipalya) ಎನ್ನುವ ಸಿನಿಮಾದ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಮಾಸ್ ಹಾಗೂ ಭೂ’ ಗತ ಲೋಕದ ಸ್ವಾರಸ್ಯಕರ ಕಥೆಯನ್ನು ಹೊಂದಿದಂತಹ ಈ ಸಿನಿಮಾ ಅಂದಿನ ಕಾಲದಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿತು. ಪ್ರತಿಯೊಂದು ವಿಧದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಕಲಾಸಿಪಾಳ್ಯ ಸಿನಿಮಾ ಗೆಲುವು ಸಾಧಿಸಿತ್ತು.

ಇನ್ನು ಕಲಾಸಿಪಾಳ್ಯ ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2004ನೇ ಇಸವಿಯ ಡಿಸೆಂಬರ್ 10ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ನಟನೆಯ ಈ ಸಿನಿಮಾ ಆ ಕಾಲದಲ್ಲಿಯೇ ಗಳಿಸಿರುವಂತಹ ಕಲೆಕ್ಷನ್ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಬಹುತಾರಗಣ ಹೊಂದಿದ್ದ ಕಲಾಸಿಪಾಳ್ಯ ಸಿನಿಮಾ ಅಂದಿನ ಕಾಲದಲ್ಲಿ ಬಿಡುಗಡೆಯಾಗಿ 8 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆಯನ್ನು ನಿರ್ಮಿಸಿತ್ತು. ಅಂದಿನಿಂದ ಪ್ರಾರಂಭವಾಗಿ ಇಂದಿನವರೆಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮಾರ್ಕೆಟ್ ಎನ್ನುವುದು ಬಾಕ್ಸ್ ಆಫೀಸ್ ನಲ್ಲಿ ಬ್ರಾಂಡ್ ಆಗಿ ನಿರ್ಮಿತವಾಗಿದೆ. ನೀವು ಕೂಡ ಡಿ ಬಾಸ್ ನಟನೆಯ ಕಲಾಸಿಪಾಳ್ಯ(Kalasipalya Movie) ಸಿನಿಮಾವನ್ನು ನೋಡಿದರೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!