ಯಾರಿಗೂ ಸುಳಿವು ಕೊಡದೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹವಾಗಲಿದ್ದಾರಾ? ಫೋಟೋ ವೈರಲ್

ಸಾಮಾನ್ಯವಾಗಿ ಜನರು ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಳ್ಳುವಾಗ ತಮ್ಮ ಕಾರ್ಯರಂಗದವರನ್ನೇ ಆಯ್ಕೆ ಮಾಡಿಕೊಳ್ಳುವುದು ಹೊಸದೇನಲ್ಲ. ಈ ವಿಚಾರವಾಗಿ ಸಿನಿಮಾರಂಗದ ನಟ ನಟಿಯರು ಕೂಡ ಹೊರತಾಗಿಲ್ಲ. ಒಂದೆರಡು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಿನ ಪರಿಚಯವು ಪ್ರೀತಿಯಾಗಿ ಮಾರ್ಪಟ್ಟು ವಿವಾಹವಾದವರಿದ್ದಾರೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ನಡುವೆ ಪ್ರೀತಿ ಬೆಳೆದಿದೆ ಎಂದು ಅಭಿಮಾನಿಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಿರುತ್ತಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಒಟ್ಟಾಗಿ ಕಾಣಿಸಿಕೊಂಡ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾ, ಅವರನ್ನು ಒಳ್ಳೆಯ ಜೋಡಿ ಎಂದು ಬಿಂಬಿಸುವಂತೆ ಮಾತನಾಡುತ್ತಿರುತ್ತಾರೆ.

ಇವೆಲ್ಲದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರು ಸಂದರ್ಶನಗಳಲ್ಲಿ ಇವರ ಪ್ರೀತಿಯ ಕುರಿತಾದ ಪ್ರಶ್ನೆಗಳನ್ನು ಕೇಳಿದಾಗ ಅದನ್ನು ತಳ್ಳಿ ಹಾಕುತ್ತಲೇ ಬಂದಿದ್ದಾರೆ. ‘ನಾವಿಬ್ಬರು ಒಳ್ಳೆಯ ಸ್ನೇಹಿತರಷ್ಟೇ’ ಎಂಬ ಸಾಲನ್ನು ರಶ್ಮಿಕ ಹಾಗೂ ವಿಜಯ್ ಇಬ್ಬರ ಬಾಯಿಯಿಂದಲೂ ಕೇಳುತ್ತಲೇ ಇರುತ್ತೇವೆ. 2018ರಲ್ಲಿ ಗೀತಾ ಗೋವಿಂದಂ ಮತ್ತು ಚಲೋ, 2019ರಲ್ಲಿ ಡಿಯರ್ ಕಾಮ್ರೆಡ್ ಚಿತ್ರಗಳಲ್ಲಿ ಜೋಡಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡ ಇವರಿಬ್ಬರನ್ನು ಅಭಿಮಾನಿಗಳು ಮೆಚ್ಚಿದ್ದಾರೆ.

ಮೊದಲ ಚಿತ್ರದಿಂದಲೇ ಇವರಿಬ್ಬರೂ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತವೆ. ಇದೀಗ ಹೊಸದೊಂದು ಫೋಟೋ ವೈರಲ್ ಆಗಿದ್ದು, ಆ ಫೋಟೋದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ವಧು-ವರರಂತೆ ಕಾಣುತ್ತಾರೆ. ವಿಜಯ್ ಅವರು ಶ್ವೇತವರ್ಣದ ಶೆರ್ವಾಣಿಯನ್ನು ತೊಟ್ಟು, ತಲೆಗೊಂದು ಪೇಟ ಸುತ್ತಿ ನಗುತ ರಶ್ಮಿಕಾ ಅವರ ಎದುರಲ್ಲಿ ಹೂವುಗಳಿಂದ ಮಾಡಲ್ಪಟ್ಟ ಮಾಲೆಯನ್ನು ಧರಿಸಿ ನಿಂತಿದ್ದಾರೆ; ಅಲ್ಲದೆ ರಶ್ಮಿಕಾ ಮಂದಣ್ಣ ಅವರು ಬಂಗಾರದ ಬಣ್ಣದ ಲೆಹಂಗವನ್ನು ತೊಟ್ಟು ಆಭರಣಗಳೊಂದಿಗೆ ಅಲಂಕರಿಸಿಕೊಂಡು ಅವರು ಕೂಡ ಮಾಲೆಯನ್ನು ಧರಿಸಿ ನಾಚುತ್ತಾ ನಿಂತಿದ್ದಾರೆ. ಈ ಫೋಟೋವನ್ನು ನೋಡಿದ ಬಳಿಕ ಯಾರಿಗೂ ಕೂಡ ‘ಎಂತಹ ಒಳ್ಳೆಯ ಜೋಡಿ’ ಎಂದು ಹೇಳದೆ ಇರಲಾಗದು.

Rashmika mandanna marraige

ವಿಜಯ್ ದೇವರಕೊಂಡ ಡೈಹಾರ್ಡ ಫ್ಯಾನ್ ಎಂಬ ಹೆಸರಿನ ಪೇಜ್ ನಲ್ಲಿ ಹಂಚಿಕೊಳ್ಳಲಾದ ಈ ಫೋಟೋವು, ಎಡಿಟ್ ಮಾಡಿದ್ದು ಎನ್ನಲಾಗುತ್ತಿದೆ. ಆದರೂ ಈ ಫೋಟೋ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಜೋಡಿಯು ಮುಂದೆ ವಿವಾಹವಾಗಲಿದ್ದಾರಾ? ಎಂಬ ಪ್ರಶ್ನೆಯು ಅಭಿಮಾನಿಗಳನ್ನು ಕಾಡುತ್ತಿದೆಯಂತೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಒಂದಾದಲ್ಲಿ ಇವರಿಬ್ಬರ ಮ್ಯೂಚುಯಲ್ ಅಭಿಮಾನಿಗಳು ಫುಲ್ ಖುಷ್ ಆಗುವುದಂತೂ ಪಕ್ಕಾ.

Leave a Comment

error: Content is protected !!