Rashmika Mandanna: ಈಗ ಕನ್ನಡ ಸಿನಿಮಾದಲ್ಲಿ ನಟಿಸೋಕೆ ರಶ್ಮಿಕ ಮಂದಣ್ಣ ಕೇಳೋ ಮಿನಿಮಮ್ ಸಂಭಾವನೆ ಎಷ್ಟು?

Rashmika Mandanna ರಶ್ಮಿಕ ಮಂದಣ್ಣ ಕನ್ನಡ ಚಿತ್ರರಂಗದಿಂದ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಇಂದು ಇಡೀ ಭಾರತೀಯ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಮಟ್ಟದ ಫ್ಯಾಮಿಲಿ ಬೆಂಬಲ ಇಲ್ಲದಿದ್ದರೂ ಕೂಡ ಒಬ್ಬರೇ ಇಂಡಸ್ಟ್ರಿಯಲ್ಲಿ ಸಾಧಿಸಿರುವ ಸಾಧನೆ ಅದು ಕೂಡ ಇಷ್ಟೊಂದು ಕಡಿಮೆ ಸಮಯದಲ್ಲಿ ನಿಜಕ್ಕೂ ಕೂಡ ಅಸಾಧಾರಣವೇ ಸರಿ. ಇದಕ್ಕಾಗಿ ಇಂದು ರಶ್ಮಿಕ ಮಂದಣ್ಣ(Rashmika Mandanna) ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ದೇಶಾದ್ಯಂತ ಹೊಂದಿದ್ದಾರೆ.

ರಶ್ಮಿಕ ಮಂದಣ್ಣ ಸಂಭಾವನೆ ವಿಚಾರದಲ್ಲಿ ಕೂಡ ಯಾರಿಗೇನು ಕಡಿಮೆ ಇಲ್ಲದೆ ಇರುವಂತಹ ನಟಿಯಾಗಿದ್ದಾರೆ. ಭರ್ಜರಿ ಮೂರರಿಂದ ಐದು ಕೋಟಿ ರೂಪಾಯಿ ಸಂಭಾವನೆ ಪಡೆಯುವಂತಹ ಸಾಮರ್ಥ್ಯವನ್ನು ರಶ್ಮಿಕ ಮಂದಣ್ಣ ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಅವರ ಬೇಡಿಕೆ ಹೆಚ್ಚಿದೆ.

ಆದರೆ ನಾವು ಮಾತನಾಡಲು ಹೊರಟಿರುವಂತಹ ಸಂಭಾವನೆಯ ವಿಚಾರ ಕನ್ನಡ ಚಿತ್ರರಂಗದ್ದಾಗಿದೆ. ಕೊನೆಯ ಬಾರಿಗೆ ಧ್ರುವ ಸರ್ಜಾ(Dhruva Sarja) ಅವರ ಪೊಗರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಮತ್ತೆ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಕೂಡ ಕಾಣಿಸಿಕೊಂಡಿಲ್ಲ. ಅಷ್ಟಕ್ಕೂ ಅವರು ಈಗ ಕನ್ನಡ ಚಿತ್ರರಂಗದಲ್ಲಿ ನಟಿಸಿದರೆ ಪಡೆಯುವ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ.

ಹೌದು ಕನಿಷ್ಠಪಕ್ಷ ಕನ್ನಡ ಚಿತ್ರರಂಗದಲ್ಲಿ ಈಗ ನಟಿಸಿದ ರಶ್ಮಿಕ ಮಂದಣ್ಣ ಒಂದು ಕೋಟಿ ರೂಪಾಯಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡುತ್ತಾರೆ. ಈ ಮೂಲಕ ಈ ಸಂಭಾವನೆ ಕನ್ನಡ ಚಿತ್ರರಂಗದ ಕೆಲವು ಸ್ಟಾರ್ ಹೀರೋಗಳಿಗೂ ಕೂಡ ಸರಿ ಸಮನಾಗುತ್ತದೆ. ಕೇವಲ ನಾಯಕನಹಟ್ಟಿಗೆ ಈ ಮಟ್ಟದ ಸಂಭಾವನೆಯನ್ನು ನೀಡುವಂತಹ ಚಿತ್ರರಂಗದ ಮತ್ತೊಬ್ಬ ನಿರ್ಮಾಪಕ ಇಲ್ಲ ಎಂದು ಹೇಳಬಹುದು.

Leave a Comment

error: Content is protected !!