Ravi Basrur: ಸಿಂಪಲ್ ಆಗಿರೋ ರವಿ ಬಸ್ರೂರ್ ಅವರು ಪಡೆದುಕೊಳ್ಳುವ ಸಂಭಾವನೆ ಮಾತ್ರ ದುಬಾರಿ.

Ravi Basrur ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವಂತಹ ರವಿ ಬಸ್ರೂರು(Ravi Basrur) ಅವರು ಕನ್ನಡ ಚಿತ್ರರಂಗದಲ್ಲಿ ಉಗ್ರಂ ಸಿನಿಮಾದ ಮೂಲಕ ತಮ್ಮ ಸಂಗೀತ ಪಯಣವನ್ನು ಪ್ರಾರಂಭಿಸುತ್ತಾರೆ. ಅಲ್ಲಿಂದ ಆಚೆಗೆ ಮತ್ತೆ ಅವರು ಕನ್ನಡ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ ಎಂದು ಹೇಳಬಹುದಾಗಿದೆ.

ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಗೆ ದೊಡ್ಡ ಮಟ್ಟದ ಮೈಲೇಜ್ ನೀಡಿರುವಂತಹ ಸಿನಿಮಾ ಎಂದರೆ ನಿಸ್ಸಂಶಯವಾಗಿ ಕೆಜಿಎಫ್ ಸರಣಿ(KGF Series) ಸಿನಿಮಾಗಳು ಎಂದು ಹೇಳಬಹುದಾಗಿದೆ. ಅಲ್ಲಿಂದಲೇ ಅವರಿಗೆ ಈಗ ಸಲಾರ್ ಸಿನಿಮಾಗೆ ಕೂಡ ಆಫರ್ ಬಂದಿದ್ದು ಬಾಲಿವುಡ್ ನಲ್ಲಿ ಕೂಡ ಸಾಕಷ್ಟು ಸಿನಿಮಾಗಳನ್ನು ಮಾಡಿ ಬಂದಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಅವರು ಸಂಗೀತ ನಿರ್ದೇಶಕನಾಗಿ ಪ್ರತಿಯೊಂದು ಸಿನಿಮಾಗಳಿಗೂ ಕೂಡ ಪಡೆದುಕೊಳ್ಳುವ ಸಂಭಾವನೆಯ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಅದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಮೂಲಗಳ ಪ್ರಕಾರ ದೊಡ್ಡ ಬಜೆಟ್ ಸಿನಿಮಾಗಳಿಗೆ ರವಿ ಬಸ್ರೂರು(Ravi Basrur) ಅವರು ಮೂರರಿಂದ ಐದು ಕೋಟಿ ಹಣವನ್ನು ಪಡೆಯುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಇದರಲ್ಲಿ ಮ್ಯೂಸಿಕ್ ಉಪಕರಣಗಳು ಸೇರಿದಂತೆ ಸಾಕಷ್ಟು ವಿಚಾರಗಳ ಖರ್ಚುಗಳು ಕೂಡ ಸೇರುತ್ತವೆ ಅದನ್ನು ತೆಗೆದ ನಂತರ ಸ್ವಲ್ಪ ಮಟ್ಟದ ಹಣವನ್ನು ಮಾತ್ರ ತಮ್ಮ ಸಂಭಾವನೆ ರೂಪದಲ್ಲಿ ರವಿ ಬಸ್ರೂರು ಪಡೆಯುತ್ತಾರೆ ಎಂಬುದಾಗಿ ತಿಳಿದುಬಂದಿದೆ.

Leave A Reply

Your email address will not be published.

error: Content is protected !!