Ravichandran: ಆ ಒಬ್ಬ ನಟಿಗಾಗಿ ಜೀವನಮಾನದಲ್ಲಿ ಮೊದಲ ಬಾರಿಗೆ ರವಿಚಂದ್ರನ್ ಕಾದು ಕುಳಿತಿದ್ದರಂತೆ! ಯಾಕೆ ಗೊತ್ತಾ?

V Ravichandran ಕ್ರೇಜಿಸ್ಟಾರ್ ರವಿಚಂದ್ರನ್(Crazy star Ravichandran) ರವರು 90ರ ದಶಕದಲ್ಲಿ ಯಾವ ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮೆರೆದಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅಂದಿನ ಕಾಲದಲ್ಲಿ ಅವರು ಭಿನ್ನ ವಿಭಿನ್ನವಾದ ಸಿನಿ ಮಾಗಳು ನಿರ್ದೇಶಕನಾಗಿ ನಾಯಕ ನಟನಾಗಿ ಮಾಡುವ ಮೂಲಕ ಪರಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹೊಂದಿದ್ದರು. ಇಂದಿಗೂ ಕೂಡ ಅವರ ಹಲವಾರು ಸಿನಿಮಾಗಳು ಚಿರಸ್ಮರಣೀಯವಾಗಿವೆ.

ಇನ್ನು ರವಿಚಂದ್ರನ್(Ravichandran) ರವರು ತಮ್ಮ ಸಿನಿಮಾ ಜೀವನದಲ್ಲಿ ಒಬ್ಬ ನಾಯಕನಟಿಗಾಗಿ ಸಾಕಷ್ಟು ದಿನಗಳ ಕಾಲ ಕಾದಿದ್ದರಂತೆ. ಇದ್ಯಾವ್ದು ಗಾಳಿ ಸುದ್ದಿ ಎಂಬುದಾಗಿ ಭಾವಿಸಬೇಡಿ 1996ರಲ್ಲಿ ಬಿಡುಗಡೆ ಆಗಿರುವಂತಹ ಸಿಪಾಯಿ ಸಿನಿಮಾದ(Sipayi Film) ಸಂದರ್ಭದಲ್ಲಿ ನಡೆದಿರುವಂತಹ ಘಟನೆ ಇದಾಗಿದೆ. ಇನ್ನು ಈ ಸಿನಿಮಾದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರವಿಚಂದ್ರನ್ ಅವರ ಜೊತೆಗೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಆಗಿರುವ ಚಿರಂಜೀವಿ(Megastar Chiranjeevi) ಕೂಡ ನಟಿಸಿದ್ದಾರೆ.

ಸಿನಿಮಾ ಚಿತ್ರೀಕರಣ ಪೂರ್ಣ ಆದ ನಂತರವೂ ಕೂಡ ಕೆಲವು ದೃಶ್ಯಗಳು ಹಾಗೂ ಸಾಂಗ್ ಚಿತ್ರೀಕರಣ ರವಿಚಂದ್ರನ್(Ravichandran) ರವರಿಗೆ ಇಷ್ಟ ಆಗಿರಲಿಲ್ಲ ಹೀಗಾಗಿ ಅದನ್ನು ಮತ್ತೊಮ್ಮೆ ಮರುಚಿತ್ರೀಕರಣ ಮಾಡಬೇಕು ಎನ್ನುವುದಾಗಿ ಭಾವಿಸಿದ್ದರು. ಅದರಲ್ಲಿಯೂ ವಿಶೇಷವಾಗಿ ಬಂಗಾರದ ಗೊಂಬೆ ಹಾಡನ್ನು ರವಿಚಂದ್ರನ್ ರವರು ಮತ್ತೊಮ್ಮೆ ಚಿತ್ರೀಕರಣ ಮಾಡಬೇಕು ಎಂಬುದಾಗಿ ಭಾವಿಸಿದ್ದರು.

ಆದರೆ ಆ ಸಂದರ್ಭದಲ್ಲಿ ನಟಿ ಆಗಿದ್ದ ಸೌಂದರ್ಯ(Actress Soundarya) ಅವರ ಡೇಟ್ಸ್ ಸಿಗುತ್ತಿರಲಿಲ್ಲ. ಹೀಗಿದ್ದರೂ ಕೂಡ ಅವರಿಗಾಗಿ ಕಾದು ಕೆಲವೇ ಸಮಯಗಳಲ್ಲಿ ಆ ಹಾಡಿನ ಚಿತ್ರಿಕರಣವನ್ನು ತಮಗೆ ಇಷ್ಟ ಆಗುವ ಹಾಗೆ ಮಾಡಿ ಸಿನಿಮಾದ ಚಿತ್ರೀಕರಣವನ್ನು ರವಿಚಂದ್ರನ್ ರವರು ಮುಗಿಸಿದ್ದರು. ಇದು 1996ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿರುವಂತಹ ಸಿಪಾಯಿ ಸಿನಿಮಾದ ತೆರೆಯ ಹಿಂದಿನ ಕಥೆಯಾಗಿದೆ.

Leave A Reply

Your email address will not be published.

error: Content is protected !!