Rishab Shetty: ಮೊದಲ ಬಾರಿಗೆ ರಿವೀಲ್ ಆಯ್ತು ನೋಡಿ ರಿಷಬ್ ಶೆಟ್ಟಿ ಮಗಳ ಫೋಟೋ. ರಿಷಬ್ ಶೆಟ್ಟಿ ಮಗಳ ಹೆಸರೇನು ಗೊತ್ತಾ?

Rishab Shetty ಒಂದು ಕಾಲದಲ್ಲಿ ಕೇವಲ ಒಳ್ಳೆಯ ಚಿತ್ರಗಳನ್ನು ಮಾಡಬಲ್ಲಂತಹ ಪ್ರತಿಭೆ ಕಲಾವಿದ ನಿರ್ದೇಶಕ ನಿರ್ಮಾಪಕ ಎಂಬುದಾಗಿ ಗುರುತಿಸಿಕೊಂಡಿದ್ದ ರಿಶಬ್ ಶೆಟ್ಟಿ ಕಾಂತಾರ(Rishab Shetty Kantara) ಸಿನಿಮಾದ ಗೆಲುವಿನ ನಂತರ ಇಂದು ಗ್ಲೋಬಲ್ ಲೆವೆಲ್ ನಲ್ಲಿ ಸದ್ದನ್ನು ಮಾಡುತ್ತಿರುವಂತಹ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಅವರ ಪರಿಶ್ರಮಕ್ಕೆ ತಕ್ಕಂತಹ ಫಲ ಸಿಕ್ಕಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಬಹುದಾಗಿದೆ.

ಕಡಿಮೆ ಬಜೆಟ್ ನಲ್ಲಿ ಉತ್ತಮ ಕಂಟೆಂಟ್ ಗಳನ್ನು ನೀಡುವಂತಹ ಮಲಯಾಳಂ ಚಿತ್ರರಂಗದ ಕಲೆಯನ್ನು ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಕೂಡ ಸಾಬೀತುಪಡಿಸಿದವರಲ್ಲಿ ರಿಷಬ್ ಶೆಟ್ಟಿ(Rishab Shetty) ಕೂಡ ಒಬ್ಬರಾಗಿದ್ದಾರೆ. ಇನ್ನು ಪ್ರತಿಯೊಬ್ಬರೂ ಕೂಡ ಈಗ ಸದ್ಯಕ್ಕೆ ಕಾಂತರಾ 2(Kantara 2) ಸಿನಿಮಾಗಾಗಿ ಕಾತರರಾಗಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಅವರ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡುವುದಾದರೆ ಪ್ರಗತಿ ಶೆಟ್ಟಿ(Pragathi Rishab Shetty) ಎನ್ನುವಂತಹ ಅವರ ಅಭಿಮಾನಿಯನ್ನೇ ಅವರು ಪ್ರೀತಿಸಿ ಮದುವೆಯಾಗಿದ್ದರು. ಇನ್ನು ಅವರಿಗೆ ಗಂಡು ಮಗ ಇದ್ದು ಇತ್ತೀಚಿಗಷ್ಟೇ ಹೆಣ್ಣು ಮಗಳಿಗೂ ಕೂಡ ರಿಷಬ್ ಶೆಟ್ಟಿ ತಂದೆ ಆಗುವ ಮೂಲಕ ಸಂತೋಷವನ್ನು ಆನಂದಿಸಿದ್ದಾರೆ. ಇನ್ನು ಅವರ ಮಗಳ ಹೆಸರು ರಾದ್ಯಾ ಶೆಟ್ಟಿ(Raadya Shetty) ಎನ್ನುವುದಾಗಿ ಇರಿಸಲಾಗಿದೆ.

ಇಂದು ರಿಷಬ್ ಶೆಟ್ಟಿ(Rishab Shetty) ಅವರು ತಮ್ಮ ಮಗಳಾಗಿರುವ ರಾದ್ಯಾ ಶೆಟ್ಟಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಿಶೇಷವಾದ ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದು ಈ ಮೂಲಕ ತಮ್ಮ ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ನೀಡಿದ್ದಾರೆ. ನೀವು ಕೂಡ ರಿಷಬ್ ಶೆಟ್ಟಿ ಅವರ ಮಗಳ ಫೋಟೋವನ್ನು ಇಲ್ಲಿ ನೋಡಬಹುದಾಗಿದ್ದು ಕಾಮೆಂಟ್ ಮಾಡುವ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೂಡ ಕೋರಬಹುದಾಗಿದೆ.

Leave a Comment

error: Content is protected !!