Kantara 2: ಕಾಂತಾರ 450 ಕೋಟಿ ಕಲೆಕ್ಷನ್ ಮಾಡಿದ ನಂತರ ಕಾಂತಾರ2 ಗೆ ರಿಶಬ್ ಶೆಟ್ಟಿ ಪಡೆಯೋ ಸಂಭಾವನೆ ಕೇಳಿದ್ರೆ ತಲೆ ತಿರುಗುತ್ತೆ.

Rishab Shetty ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂತರಾ(Kantara) ಸಿನಿಮಾದ ಬಜೆಟ್ 19 ಕೋಟಿ ಆಗಿತ್ತು ಹೇಗಿದ್ದರೂ ಕೂಡ ಸಿನಿಮಾ ಅದ್ಬುತವಾಗಿ ನಿರ್ಮಾಣವಾಗಿ ಬಿಡುಗಡೆಯಾಗಿ ಅದ್ದೂರಿಯಾಗಿ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಕನ್ನಡ ಚಿತ್ರರಂಗ ತಲೆ ಎತ್ತಿ ಗರ್ವದಿಂದ ನಡೆಯುವಂತೆ ಮಾಡಿತ್ತು.

ಇನ್ನು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಎರಡನೇ ಭಾಗವನ್ನು ಕೂಡ ಅನೌನ್ಸ್ ಮಾಡಿದ್ದಾರೆ. ಅತಿ ಶೀಘ್ರದಲ್ಲಿಯೇ ಸಿನಿಮಾದ ಛತ್ರಿಕರಣ ಕೂಡ ಪ್ರಾರಂಭವಾಗಲಿದ್ದು ಈಗಾಗಲೇ ರಿಷಬ್ ಶೆಟ್ಟಿ(Rishab Shetty) ಸಿನಿಮಾದ ಕಥೆಯನ್ನು ಬರೆಯಲು ಪ್ರಾರಂಭಿಸಿದ್ದಾರೆ. ಇದರ ಬಗ್ಗೆ ಕೂಡ ಯುಗಾದಿ ಹಬ್ಬದಂದು ರಿಷಬ್ ಶೆಟ್ಟಿ ಅಧಿಕೃತವಾಗಿ ಎಲ್ಲರೊಂದಿಗೆ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು.

ಇನ್ನು ಕಾಂತಾರ(Kantara) ಸಿನಿಮಾದ ಯಶಸ್ಸಿನ ನಂತರ ಕಾಂತಾರ ಸಿನಿಮಾದ ಎರಡನೇ ಭಾಗಕ್ಕೆ ಇರುವ ಬೇಡಿಕೆ ಹಾಗೂ ಜನಪ್ರಿಯತೆ ಸಹಜವಾಗಿ ಭಾರತ ದೇಶದಾದ್ಯಂತ ಹೆಚ್ಚಾಗಿದೆ. ಹೀಗಾಗಿ ನಿರ್ದೇಶಕನಾಗಿ ಹಾಗೂ ನಾಯಕ ನಟನಾಗಿ ರಿಷಬ್ ಶೆಟ್ಟಿ ಇದಕ್ಕೆ ಪಡೆಯುವಂತಹ ಸಂಭಾವನೆ ಕೂಡ ಸಹಜವಾಗಿಯೇ ಹೆಚ್ಚಲಿದೆ. ಹಾಗಿದ್ದರೆ ರಿಶಬ್ ಶೆಟ್ಟಿ ಅವರು ಕಾಂತರಾ 2(Kantara 2) ಸಿನಿಮಾಗೆ ಪಡೆಯಲಿರುವ ಸಂಭಾವನೆ ಎಷ್ಟು ಇರಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅಂದಾಜು ಮೂಲಗಳ ಪ್ರಕಾರ ರಿಷಬ್ ಶೆಟ್ಟಿ 26 ರಿಂದ 25 ಕೋಟಿ ರೂಪಾಯಿ ಸಂಭಾವನೆ ಹಾಗೂ ಲಾಭದಲ್ಲಿ ಕೂಡ ಪಾಲನ್ನು ಪಡೆಯಬಹುದು ಎಂಬುದನ್ನು ಅಂದಾಜಿಸಬಹುದಾಗಿದೆ. ಈಗಾಗಲೇ ಜನರು ಈ ಸಿನಿಮಾವನ್ನು ನೋಡಲು ಕಾತರರಾಗಿರುವ ಹಿನ್ನೆಲೆಯಲ್ಲಿ ಖಂಡಿತವಾಗಿ ಈ ಸಿನಿಮಾ ಬಿಡುಗಡೆಯಾದರೆ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ‌. ಒಂದು ಲೆಕ್ಕದಲ್ಲಿ ಹೇಳುವುದಾದರೆ ಕೇವಲ ಕನ್ನಡ ಚಿತ್ರರಂಗದ ಅದೃಷ್ಟವನ್ನು ಮಾತ್ರವಲ್ಲದೆ ರಿಷಬ್ ಶೆಟ್ಟಿ(Rishab Shetty) ಅವರ ಅದೃಷ್ಟವನ್ನು ಕೂಡ ಕಾಂತರಾ ಸಿನಿಮಾ ಬದಲಾಯಿಸಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Leave a Comment

error: Content is protected !!