Rishab Shetty: ತನ್ನ ಹುಟ್ಟೂರಿನ ಹೆಸರಿನಲ್ಲಿ ರಿಷಬ್ ಶೆಟ್ಟಿ ರಾಜ್ಯವೇ ಮೆಚ್ಚುವಂತ ಕೆಲಸ ಮಾಡೋಕೆ ಹೊರಟಿದ್ದಾರೆ.

Rishab Shetty ಕಿರಿಕ್ ಪಾರ್ಟಿ(Kirik Party) ಸಿನಿಮಾದ ಮೂಲಕ ಬಹುತೇಕ ಎಲ್ಲರಿಗೂ ಕೂಡ ತಮ್ಮ ನಿರ್ದೇಶನ ಶೈಲಿಯ ಮೂಲಕ ಪರಿಚಿತರಾದ ರಿಷಭ್ ಶೆಟ್ಟಿ(Rishab Shetty) ನಂತರ ಮಕ್ಕಳ ಸಿನಿಮಾ ಆಗಿರುವಂತಹ ಸಹಿಪ್ರಾ ಶಾಲೆ ಕಾಸರಗೋಡು ಸಿನಿಮಾದ ಮೂಲಕವೂ ಕೂಡ ಮತ್ತೊಮ್ಮೆ ತಮ್ಮ ನಿರ್ಧೇಶನ ಶೈಲಿಯನ್ನು ಎಲ್ಲರೂ ಮನಮೆಚ್ಚಿ ಹೊಗಳುವಂತೆ ಮಾಡುತ್ತಾರೆ.

ನಂತರ ಈಗ ಕಾಂತಾರ(Kantara) ಸಿನಿಮಾವನ್ನು ಕೇವಲ 19 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಿ ಭರ್ಜರಿ 350 ಕೋಟಿ ಅಧಿಕ ಕಲೆಕ್ಷನ್ ಮಾಡುವಂತಹ ಸಾಮರ್ಥ್ಯವನ್ನು ಕನ್ನಡ ಚಿತ್ರರಂಗದ ಸಿನಿಮಾಗಳಿಗೆ ಕೂಡ ತೋರಿಸಿಕೊಡುತ್ತಾರೆ. ನಮ್ಮ ಭಾಷೆ ಪ್ರೇಕ್ಷಕರಿಗಿಂತ ಹೆಚ್ಚಾಗಿ ಪರಭಾಷಾ ಪ್ರೇಕ್ಷಕರಿಗೆ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಎನ್ನುವುದು ಅತ್ಯಂತ ಇಷ್ಟವಾಗಿ ಹಿಡಿಸಿದೆ.

ಹೌದು ಗೆಳೆಯರೇ ಈಗ ಎಲ್ಲಾ ಜಂಜಾಟಗಳಿಂದ ದೂರವಾಗಿ ಕಾಂತಾರ ಸಿನಿಮಾದ ಎರಡನೇ ಭಾಗವನ್ನು ಚೆನ್ನಾಗಿ ಮಾಡಬೇಕು ಎನ್ನುವುದಾಗಿ ತಮ್ಮ ಊರಿನ ಕಾಡಿನ ಒಳಗೆ ಕುಳಿತುಕೊಂಡು ಕಾಂತಾರ ಸಿನಿಮಾದ ಎರಡನೇ ಭಾಗದ ಸ್ಕ್ರಿಪ್ಟ್ ಅನ್ನು ಬರೆಯುತ್ತಿದ್ದಾರೆ. ಇದರ ನಡುವೆ ತಮ್ಮ ಹುಟ್ಟೂರಾಗಿರುವ ಕೆರಾಡಿಯ ಹೆಸರಿನಲ್ಲಿ ಮತ್ತೊಂದು ಪ್ರಾಜೆಕ್ಟ್ ಅನ್ನು ಮಾಡಲು ಹೊರಟಿದ್ದಾರೆ.

ಹೌದು ಕೆರಾಡಿ ಸ್ಟುಡಿಯೋಸ್ ಎನ್ನುವ ಹೆಸರಿನಲ್ಲಿ ರಿಷಬ್ ಶೆಟ್ಟಿ(Rishab Shetty) ಪ್ರಮೋಷನ್ ಕಂಪನಿಯನ್ನು ಪ್ರಾರಂಭಿಸುತ್ತಿದ್ದು ಸಿನಿಮಾಗಳ ಪ್ರಚಾರವನ್ನು ಮಾಡುವುದೇ ಈ ಕಂಪನಿಯ ಕೆಲಸವಾಗಿದ್ದು ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಕೂಡ ರಿಷಬ್ ಶೆಟ್ಟಿ ಅವರ ಟೀಮ್ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಲಿದೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!