Rocking Star Yash: ಭಾರತದ ಇಬ್ಬರು ಸ್ಟಾರ್ ಗಳನ್ನು ಮಖಾಡೆ ಮಲಗಿಸಿದ್ದ ಯಶ್! ಅವರಿಬ್ಬರೇನು ಸಾಮಾನ್ಯದವರಲ್ಲ.

Rocking Star Yash ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಇಡೀ ಭಾರತ ದೇಶದ ನೆಚ್ಚಿನ ರಾಕಿ ಭಾಯ್ ಯಶ್(Yash) ಅವರ ಕುರಿತಂತೆ ಪ್ರತಿಯೊಬ್ಬರಿಗೂ ಕೂಡ ತಿಳಿದಿದ್ದು ಅದರಲ್ಲೂ ವಿಶೇಷವಾಗಿ ಕೆಜಿಎಫ್ ಸರಣಿ ಚಿತ್ರಗಳು ಅವರನ್ನು ಇಡೀ ಭಾರತ ದೇಶವೇ ತಲೆಬಾಗಿ ಮೆಚ್ಚುವಂತೆ ಮಾಡಿತು ಎಂದರು ತಪ್ಪಾಗಲಾರದು. ಯಾವುದೇ ಬೆಟ್ಟ ಎದುರಿದ್ದರೂ ಕೂಡ ಅದನ್ನು ಪುಡಿ ಮಾಡುವಂತಹ ಶಕ್ತಿ ನನಗಿದೆ ಎಂಬುದನ್ನು ಎಷ್ಟು ತೋರಿಸಿಕೊಟ್ಟಿದ್ದಾರೆ.

ಅದರಲ್ಲೂ ವಿಶೇಷವಾಗಿ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಎರಡು ಸಿನಿಮಾಗಳ ಮೂಲಕವೂ ಕೂಡ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಭಾರತೀಯ ಚಿತ್ರರಂಗದ ಇಬ್ಬರು ಸ್ಟಾರ್ ನಟರ ಸಿನಿಮಾಗಳನ್ನು ಕೆಡವಿ ಮಣ್ಣು ಪಾಲು ಮಾಡಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕಾಗಿದೆ.

ಮೊದಲಿಗೆ ಕೆಜಿಎಫ್ ಚಾಪ್ಟರ್ 1(Kgf Chapter 1) ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಸಿನಿಮಾ ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವಂತಹ ಶಾರುಖ್ ಖಾನ್(Shah Rukh Khan) ಅವರ ಸಿನಿಮಾದ ಜೊತೆಗೆ ಕ್ಲಾಶ್ ಆಗುತ್ತದೆ. ಈ ಸಂದರ್ಭದಲ್ಲಿ ಕೆಜಿಎಫ್ ಚಿನ್ನವನ್ನು ಬಾಚಿದ್ದಾರೆ ಜೀರೋ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೂಡ ಝೀರೋ ತೋರಿಸಿ ಮಣ್ಣು ಪಾಲಾಗಿತ್ತು ಎಂಬುದನ್ನು ನೀವೆಲ್ಲ ನೋಡಿದ್ದೀರಿ.

ಇನ್ನು ಇತ್ತೀಚಿಗಷ್ಟೇ ಅಂದರೆ ಒಂದು ವರ್ಷಗಳ ಹಿಂದೆ ಬಿಡುಗಡೆ ಆದಂತಹ ಕೆಜಿಎಫ್ ಚಾಪ್ಟರ್ 2(Kgf Chapter 2) ಸಂದರ್ಭದಲ್ಲಿ ತಳಪತಿ ವಿಜಯ್(Thalapathy Vijay) ನಟನೆಯ ಬೀಸ್ಟ್(Beast) ಸಿನಿಮಾ ಕೂಡ ಬಿಡುಗಡೆಯಾಗಿ ಸೋಲನ್ನು ಅನುಭವಿಸಿರುವುದನ್ನು ನಾವೆಲ್ಲ ಗಮನಿಸಿದ್ದೇವೆ. ಯಶ್ ರವರ ಒಳ್ಳೆಯ ಸಿನಿಮಾಗಳ ಎದುರು ನಿಲ್ಲುವಂತಹ ಭಾರತೀಯ ಚಿತ್ರರಂಗದ ಯಾವುದೇ ಸ್ಟಾರ್ ಇಲ್ಲ ಎಂದು ಹೇಳಬಹುದು.

Leave a Comment

error: Content is protected !!