ರಾಕಿಂಗ್ ಸ್ಟಾರ್ ತಮ್ಮ ಮೊದಲ ಚಿತ್ರ ಜಂಭದ ಹುಡುಗಿ ಸಿನಿಮಾದಲ್ಲಿ ನಟನೆ ಮಾಡೋಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?

ನಮಗೆಲ್ಲಾ ಗೊತ್ತಿರುವ ಹಾಗೆ ಯಶ್ ಅವರ ಯಶಸ್ಸು ಮುಗಿಲು ಮುಟ್ಟಿದೆ. ಹಿಂದೆ ಎಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಕೂಡ ಯಶ್ ಈಗ ಗುರುತಿಸಿಕೊಳ್ಳುವುದೇ ರಾಕಿ ಭಾಯ್ ಆಗಿ. ಕಳೆದ ನಾಲ್ಕೈದು ವರ್ಷಗಳಿಂದ ರಕಿಂಗ್ ಸ್ಟಾರ್ ಯಶ್ ಅಂದ್ರೆ ಇಮೇಜ್ ಬದಲಾಗಿದೆ. ಕೆಜಿಎಫ್ ನಲ್ಲಿ ಅವರ ಡೆಡಿಕೇಶನ್ ಅವರ ಈ ಗೆಲುವಿಗೆ ಕಾರಣವಾಗಿದೆ.

ಸಿನಿಮಾ ರಂಗದಲಿ ಇಷ್ಟೇಲ್ಲಾ ಯಶಸ್ಸನ್ನು ಗಳಿಸಿರುವ ಯಶ್ ಅವರ ಸಿನಿಮಾ ಮೊದಲ ದಿನಗಳ ಬಗ್ಗೆ ನಾವೊಮ್ಮೆ ನೆನಪಿಸಿಕೊಳ್ಳಲೇ ಬೇಕು. ಯಶ್ ಮೊದಲು ತೆರೆ ಮೇಲೆ ಕಾಣಿಸಿಕೊಂಡಿದ್ದು ಕಿರುತೆರೆಯ ಮೂಲಕ, ನಂತಗೋಕುಲ, ಪ್ರೀತಿ ಇಲ್ಲದ ಮೇಲೆ ಧಾರಾವಾಹಿಗಳಲ್ಲಿ ನಟಿಸಿದ ಯಶ್ ನಂತರ ಸಿನಿಮಾಕ್ಕೆ ಆಯ್ಕೆಯಾದರು. ಧಾರಾವಾಹಿಗಳಲ್ಲಿ ಯಶ್ ಅವರ ನಟನೆಯನ್ನು ನೋಡಿ ಮೊದಲು ಸಿನಿಮಾದಲ್ಲಿ ಅವಕಾಶಕೊಟ್ಟಿದ್ಡೇ ನಿರ್ಮಾಪಕರು, ನಿರ್ದೇಶಕರು ಹಾಗೂ ನಟಿಯೂ ಆಗಿರುವಂಥ ಪ್ರಿಯಾ ಹಾಸನ್!

ಹೌದು, ಪ್ರಿಯಾ ಹಾಸನ್ ಅವರ ಮೊದಲ ಸಿನಿಮಾ ’ಜಂಬದ ಹುಡುಗಿ’. ಈ ಚಿತ್ರಕ್ಕೆ ಬಂಡವಾಳ ಹೂಡಿ, ನಿರ್ದೇಶನವನ್ನೂ ಮಾಡಿ ಚಿತ್ರದ ನಾಯಕ ನಟಿಯಾಗಿ ಅಭಿನಯಿಸಿದ್ದರು ಪ್ರಿಯಾ ಹಾಸನ್. ಆ ಚಿತ್ರ ತೆರೆಕಂಡಿದ್ದು 2007ರಲ್ಲಿ. ಈ ಚಿತ್ರ ಯಶ್ ಅವರ ಸಿನಿಮಾ ಜರ್ನಿಗೆ ನಾಂದಿ ಹಾಡಿದ ಸಿನಿಮಾ. ಆಗಿನ ಕಾಲದಲ್ಲಿ ಸಿನಿಮಾ ಬ್ಯುಸನೆಸ್ ಅಷ್ಟು ಜೋರಾಗಿರಲಿಲ್ಲ. ಈಗಿನ ಹಾಗೆ ಸಿನಿಮಾಗಳ ಕ್ರೇಜ್ ಜಾಸ್ತಿಯೂ ಇರಲಿಲ್ಲ. ಹಾಗಾಗಿ ಹೊಸ ಮುಖಗಳನ್ನ ಸಿನಿಮಾದಲ್ಲಿ ಹಾಕಿಕೊಂಡು ಬಂಡವಾಳ ಹೂಡಲು ನಿರ್ಮಾಪಕರು ಹೆದರುತ್ತಿದ್ದರು. ಆದಷ್ಟು ಗೊತ್ತಿರುವ ಸ್ಟಾರ್ ನಟರನ್ನೇ ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ಸಿನಿಮಾ ಸ್ಥಿತಿ ಹೇಗಿತ್ತೆಂದರೆ ಒಬ್ಬ ಸಿನಿಮಾ ನಾಯಕನಾಗಲು ತಾನೇ ಆ ಸಿನಿಮಾ ನಿರ್ಮಾಣ ಮಾಡಿಕೊಳ್ಳುವಂಥ ಸ್ಥಿತಿಯಿತ್ತು.

ಇಂಥಹ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಅವಕಾಶವನ್ನು ನೀಡಿದ್ದು ಪ್ರಿಯಾ ಹಾಸನ್! ಅವರೂ ಕೂಡ ಮೊದಲ ಅಬಾರಿಗೆ ನಾಯಕಿಯಾಗಿ ನಟಿಸುತ್ತಿರುವ ಚಿತ್ರ ಜಂಬದ ಹುಡುಗಿಯಲ್ಲಿ ಯಶ್ ಅವರನ್ನು ಆಯ್ಕೆ ಮಾಡಿದರು. ಈ ಚಿತ್ರದಲ್ಲಿ ಇಬ್ಬರು ನಾಯಕ ನಟರು. ಒಬ್ಬರು ಯಶ್ ಹಾಗೂ ಇನ್ನೊಬ್ಬರು ತೆಲುಗಿನ ಜೈ ಆಕಾಶ್. ಈ ಚಿತ್ರದಲ್ಲಿ ಯಶ್ ಅವರ ಪಾತ್ರಕ್ಕೆ ತುಸು ಹೆಚ್ಚಾಗಿಯೇ ಸ್ಕೋಪ್ ಇತ್ತು. ಹಾಗಾಗಿ ಯಶ್ ಅವರಿಗೆ ತಮ್ಮ ಪ್ರತಿಭೆಯನ್ನ ತೋರಿಸಿಕೊಳ್ಳಲು ಉತ್ತಮ ವೇದಿಕೆ ಸಿಕ್ಕಹಾಗಾಗಿತ್ತು.

ಇನ್ನು ಯಶ್ ಅವರ ಮೊದಲ ಸಿನಿಮಾ ಅಭಿನಯಕ್ಕೆ ಎಷ್ಟು ಸಂಭಾವನೆ ಪಡೆದಿದ್ದರು ಗೊತ್ತೇ? ಈ ಬಗ್ಗೆ ಸ್ವತಃ ಪ್ರಿಯಾ ಹಾಸನ್ ಅವರೇ ಒಂದು ಸಂದರ್ಶನದಲ್ಲಿ ಹೇಳಿದ್ಡಾರೆ. ಯಶ್ ಅವರಿಗೆ ಮೊದಲ ಸಿನಿಮಾಕ್ಕೆ ಪ್ರಿಯಾ ಹಾಸನ್ ಫಿಕ್ಸ್ ಮಾಡಿದ್ದು 50 ಸಾವಿರ ರೂಪಾಯಿಗಳು. ಸಿನಿಮಾ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಮಾಡುವ ಸಂದರ್ಭದಲ್ಲಿ ಪ್ರಿಯಾ ಅವರ ತಾಯಿ ಯಶ್ ಕೈಗೆ ಈ ಹಣವನ್ನು ಇಟ್ಟರಂತೆ. ಇದು ತನ್ನ ಮೊದಲ ಸಂಭಾವನೆ ಎಂದು ಯಶ್ ತಾಯಿಗೆ ನಮಸ್ಕರಿಸಿ ಆ ಹಣವನ್ನು ಸ್ವೀಕರಿಸಿದ್ದರಂತೆ. ಅಂದು ಬಹಳ ಪ್ರೀತಿಯಿಂದ ಇಷ್ಟಪಟ್ಟು ಮಾಡಿದ ಒಂದು ಸಿನಿಮಾ ಇಂದು ಯಶ್ ಅವರನ್ನು ಬೇರೆಯದೇ ಲೆವಲ್ ಗೆ ಕರೆದುಕೊಂಡು ಹೋಗಿದೆ. ಇಂದು ಯಶ್ ವಿಶ್ವದಾದ್ಯಂತ ಹೆಸರು ಮಾಡಿದ್ದು ಎಲ್ಲರ ಮೆಚ್ಚಿನ ರಾಕಿ ಭಾಯ್ ಆಗಿದ್ದಾರೆ!

Leave A Reply

Your email address will not be published.

error: Content is protected !!