ರಾಕಿ ಭಾಯ್ ಗೆ ಬಂತು ಟಾಲಿವುಡ್ ನಿರ್ಮಾಪಕನಿಂದ ಭರ್ಜರಿ ಆಫರ್; ಯಶ್ ಗೆ ಸಿಕ್ಕಿರುವ ಆಫರ್ ಎಷ್ಟು ಕೋಟಿ ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಹೆಸರನ್ನ ಕೇಳಿದರೆ ಸಾಕು ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುತ್ತದೆ. ಅಭಿಮಾನಿಗಳು ಸಿಳ್ಳೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಇಂದು ಯುನಿವರ್ಸಲ್ ಸ್ಟಾರ್ ಎನಿಸಿಕೊಂಡಿರುವ ರಾಕಿ ಬಾಯ್ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇನ್ನು ಈ ಗೆಲುವಿನ ಕುದುರೆಯನ್ನು ಇಟ್ಟುಕೊಂಡು ಸಿನಿಮಾ ಮಾಡೋಕೆ ಎಲ್ಲಾ ಭಾಷೆಯ ಸಿನಿ ನಿರ್ಮಾಪಕರು ಕಾಯ್ತಾ ಇದ್ದಾರೆ.

ರಾಕಿ ಭಾಯ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಎಲ್ಲರನ್ನೂ ಬಹುವಾಗಿ ಕಾಡುತ್ತಿದೆ. ಈಗಾಗಲೇ ಕೆವಿಎನ್ ಪ್ರೊಡಕ್ಷನ್ ನಿರ್ಮಣದಲ್ಲಿ ’ಮಫ್ತಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಅವರ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎನ್ನುವುದು ಆಲ್ ಮೋಸ್ಟ್ ಪಕ್ಕ ಆಗಿದೆ. ಜೊತೆಗೆ ತೆಲುಗಿನ ಪೂಜ ಹೆಗ್ಡೆ ಯಶ್ ಗೆ ಜೋಡಿಯಗಿ ನಟಿಸಲಿದ್ದಾರೆ ಎನ್ನುವ ಸುದ್ದಿಯೂ ಇದೆ ಅದರೆ ಇದ್ಯಾವುದರ ಬಗ್ಗೆಯೂ ಅಧಿಕೃತ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

ಕೆಜಿಎಫ್ ಸಿನಿಮಾ ಸಕ್ಸೆಸ್ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಲೆವಲ್ ಬೇರೆಯಾಗಿದೆ. ಎಲ್ಲಾ ಸಿನಿಮಾ ರಂಗದಿಂದ ರಾಕಿಗೆ ಆಫರ್ ಗಳು ಬರುತ್ತಿವೆ. ಈ ಹಿಂದೆ ಬಾಲಿವುಡ್ ನಿಂದ ನೂರು ಕೋಟಿಯ ಆಪರ್ ಬಂದಿತ್ತು, ಅದನ್ನ ಯಶ್ ಬೇಡ ಅಂತ ತಿರಸ್ಕರಿಸಿದ್ರು ಅನ್ನೋದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಯಶ್ ಮೊದಲು ಕನ್ನಡದಲ್ಲಿಯೇ ನಟಿಸುತ್ತಾರೆ ಅಂತ ಅಭಿಮಾನಿಗಳೂ ಖುಷಿಯಾಗಿದ್ರು. ಅದರೆ ಯಶ್ ಗೆ ಬರುವ ಅಫರ್ ಗಳು ಮಾತ್ರ ನಿಂತಿಲ್ಲ. ವರದಿಯ ಪ್ರಕಾರ ಈಗ ಯಶ್ ಅವರನ್ನು ಸಿನಿಮಾಕ್ಕೆ ಕರೆಯುವ ಸಾಲಿನಲ್ಲಿ ಟಾಲಿವುಡ್ ಕೂಡ ಇದೆ.

ಹೌದು ಟಾಲಿವುಡ್ ನಲ್ಲಿಅತೀಹೆಚ್ಚು ಬಜೆಟ್ ನಲ್ಲಿ ಸಿನಿಮಾವನ್ನು ನಿರ್ಮಿಸುವ ದಿಲ್ ರಾಜು ಯಶ್ ಅವರಿಗೆ ವಿಶೇಷ ಆಫರ್ ನೀಡಿದ್ದಾರಂತೆ. ಸುಮಾರು ನೂರು ಕೋಟಿ ಸಂಭಾವನೆಯ ಆಫರ್ ಇದಾಗಿದೆ. ಇದೊಂದು ತೆಲಗು ನಿರ್ದೇಶಕರೇ ನಿರ್ಮಿಸಲಿರುವ ಸಿನಿಮಾ ಆಗಿದ್ದು ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆಯಂತೆ. ಯಶ್ ಕನ್ನಡದಲ್ಲಿ ನರ್ತನ್ ಜೊತೆ ಸಿನಿಮಾ ಮುಗಿಸಿ ತೆಲಗುವಿನಲ್ಲಿ ನಟಿಸಲ್ಲಿದ್ದಾರೆ ಎನ್ನುವ ಸುದ್ದಿಯಿದೆ. ಈ ಸುದ್ದಿಯೇನಾದ್ರೂ ನಿಜವಾದ್ರೆ ನೂರು ಕೋಟಿ ಸಂಭಾವನೆ ಪಡೆದ ಕೆಲವೇ ಕೆಲವು ನಟರಲ್ಲಿ ಯಶ್ ಕೂಡ ಒಬ್ಬರಾಗಲಿದ್ದಾರೆ.

ಕೆಜಿಎಫ್ ಚಿತ್ರ ಹಿಟ್ ಆದ ಮೇಲೆ ಅವರ ಸಂಭಾವನೆ ಹೆಚ್ಚಾಗಿದ್ದು ನಿಜ ಆದರೆ ನೂರು ಕೋಟಿ ಸಂಭಾವನೆ ಪಡಿ ರೇಂಜ್ ಗೆ ಯಶ್ ಅವರು ಬೆಳೆದಿದ್ದಾರೆ ಎಂದರೆ ನಿಜಕ್ಕೂ ನಮಗೆಲ್ಲ ಹೆಮ್ಮೆಯ ವಿಷಯ. ಕನ್ನಡದ ಒಬ್ಬ ನಟನಿಗೆ ಶಾರುಖ್ ಖಾನ್ ಸಲ್ಮಾನ್ ಖಾನ್ ರೇಂಜ್ ಗೆ ಬೆಳೆಯುವ ಸಾಮರ್ಥ್ಯ ಇದೆ ಅಂದರೆ ಅದು ಯಶ್. ಸದ್ಯದ ಮಟ್ಟಿಗೆ ಬಾಲಿವುಡ್ ನಟರಿಗೂ ಸೈಡ್ ಹೊಡೆಯುತ್ತಿರುವ ನಟ ಯಶ್ ಅವರ, ಕಿಸ್ಮತ್ ಇನ್ಮುಂದೆ ಹೇಗಿದ್ಯೋ ಅವರ ಮುಂದಿನ ಸಿನಿಮಾಗಳೇ ಹೇಳ್ಬೇಕು!

Leave a Comment

error: Content is protected !!