Kiccha Sudeep: ಕಿಚ್ಚ ಸುದೀಪ್ ಮಗಳ ಕ್ರಶ್ ಗೆ ಮದುವೆ ಆಯ್ತಂತೆ, ಬೇಸರದಲ್ಲಿ ಸಾನ್ವಿ ಸುದೀಪ್.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳಲ್ಲಿ ಅತ್ಯಂತ ಹೆಚ್ಚು ಬೇಡಿಕೆಯನ್ನು ಹೊಂದಿರುವಂತಹ ಅತ್ಯಮೂಲ್ಯ ನಟರಲ್ಲಿ ಒಬ್ಬರಾಗಿದ್ದಾರೆ. ಇನ್ನು ಕಿಚ್ಚ ಸುದೀಪ್(Kiccha Sudeep) ಅವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ಪ್ರಿಯ ರಾಧಾಕೃಷ್ಣನ್(Priya Sudeep) ಅವರನ್ನು ಮದುವೆಯಾಗಿರುವ ಕಿಚ್ಚ ಸುದೀಪ್ ಅವರಿಗೆ ಸಾನ್ವಿ(Saanvi Sudeep) ಎನ್ನುವ ಮಗಳು ಕೂಡ ಇದ್ದಾರೆ.

ಅಪ್ಪನಂತೆ ಮಗಳು ಕೂಡ ಸಾಕಷ್ಟು ಪ್ರತಿಭಾನ್ವತೆ ಎಂದರೆ ತಪ್ಪಾಗಲಾರದು ಯಾಕೆಂದರೆ ಅವರು ಹಾಡುವಂತಹ ಹಾಡುಗಳು ಹಾಗೂ ಅವರ ಸ್ವರಮಾಧುರ್ಯತೆ ಖಂಡಿತವಾಗಿ ಅನುಭವಸ್ಥ ಗಾಯಕರು ಕೂಡ ನಾಚುವಂತಿದೆ. ಈಗಾಗಲೇ ಸಾನ್ವಿ ಸುದೀಪ್(Saanvi Sudeep) ಅವರು ಸಾಕಷ್ಟು ಹಾಡುಗಳನ್ನು ಹಾಡಿದ್ದು ಕೇಳುಗರ ಮನವನ್ನು ಕದ್ದಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಅತಿ ಶೀಘ್ರದಲ್ಲೇ ಅವರು ಕೂಡ ಚಿತ್ರರಂಗಕ್ಕೆ ಗಾಯಕಿಯಾಗಿ ಪಾದರ್ಪಣೆ ಮಾಡಲಿ ಎಂಬುದಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

kiccha Sudeep With family

ಇನ್ನು ಇದರ ನಡುವೆ ಸಾನ್ವಿ ಸುದೀಪ್(Saanvi) ಅವರ ಕೃಷ್ ಗೆ ಮದುವೆ ಆಗಿದೆ ಎಂಬುದಾಗಿ ತಿಳಿದು ಬಂದಿದ್ದು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಇನ್ಸ್ಟಾಗ್ರಾಮ್ ನಲ್ಲಿ ಅಳುವ ಇಮೋಜಿಯನ್ನು ಹಾಕಿಕೊಂಡು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಸಾನ್ವಿ ಸುದೀಪ್ ಅವರ ಕ್ರಶ್ ಯಾರು ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಹೌದು ಗೆಳೆಯರೇ, ಸಾನ್ವಿ ಅವರ ಕ್ರಶ್ ಯಾರಿಗೆ ಏನು ಕಡಿಮೆ ಇಲ್ಲ. ನಾವು ಮಾತನಾಡುತ್ತಿರುವುದು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಸಿದ್ದಾರ್ಥ್ ಮಲ್ಹೋತ್ರ ಅವರ ಬಗ್ಗೆ. ಇತ್ತೀಚಿಗಷ್ಟೇ ಅವರು ನಟಿ ಕಿಯಾರ ಅದ್ವಾನಿ(Kiara Advani) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದರಿಂದಾಗಿ ಸಿದ್ಧಾರ್ಥ ಮಲ್ಹೋತ್ರಾ(Sidharth Malhotra) ಅವರನ್ನು ಇಷ್ಟಪಡುತ್ತಿದ್ದ ಸಾಕಷ್ಟು ಹುಡುಗಿಯರ ಮನಸ್ಸು ಮುರಿದಿದೆ ಅದರಲ್ಲಿ ಕಿಚ್ಚ ಸುದೀಪ್ ಅವರ ಮಗಳಾಗಿರುವ ಸಾನ್ವಿ ಸುದೀಪ್ ಕೂಡ ಒಬ್ಬರು. ಈ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಜೋಕ್ಸ್ ನಂತೆ ಶೇರ್ ಮಾಡುತ್ತಿದ್ದಾರೆ.

Leave a Comment

error: Content is protected !!