Samantha: ಸಮಂತ ಖರೀದಿಸಿದ 3BHK ಅಪಾರ್ಟ್ಮೆಂಟಿನ ಬೆಲೆ ಕೇಳಿದ್ರೆ ನೀವೇ ದಂಗಾಗ್ತೀರಾ.

Samantha ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬಹು ಬೇಡಿಕೆ ನಟಿಯರಲ್ಲಿ ಒಬ್ಬರಾಗಿರುವಂತಹ ನಟಿ ಸಮಂತ(Samantha) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಒಬ್ಬಂಟಿಯಾಗಿ ಜೀವಿಸುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಅವರು ಸಾಕಷ್ಟು ಬೇಸರವನ್ನು ಹೊಂದಿದ್ದರೂ ಕೂಡ ಸಿನಿಮಾ ಜೀವನದಲ್ಲಿ ಮಾತ್ರ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದ್ದಾರೆ.

ಅದರಲ್ಲೂ ಇತ್ತೀಚಿಗಷ್ಟೇ ಸಿಟಾಡೆಲ್ ಎನ್ನುವಂತಹ ಹಾಲಿವುಡ್ ವೆಬ್ ಸೀರೀಸ್ ಅನ್ನು ಹಿಂದಿಯಲ್ಲಿ ಮಾಡುವುದಕ್ಕೆ ಸಿದ್ಧತೆಯನ್ನು ನಡೆಸುತ್ತಿದ್ದು ಪ್ರಿಯಾಂಕ ಚೋಪ್ರಾ(Priyanka Chopra) ಅವರ ಪಾತ್ರವನ್ನು ಸಮಂತ ಅವರೇ ನಿರ್ವಹಿಸಲಿದ್ದಾರೆ. ಇದರ ನಡುವಲ್ಲಿ ಅವರನ್ನು ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು ಅದರ ಬೆಲೆ ಕೂಡ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಹೌದು ಗೆಳೆಯರೇ ಜಯಭೇರಿ ಆರೆಂಜ್ ಕೌಂಟಿಯಲ್ಲಿ 13 ಹಾಗೂ 14ನೇ ಫ್ಲೋರ್ ನಲ್ಲಿ ನಟಿ ಸಮಂತ ಅವರು ಈ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು, ಭರ್ಜರಿ ಆರು ಪಾರ್ಕಿಂಗ್ ಲಾಟ್ಗಳು ಇವೆ ಎಂಬುದಾಗಿ ತಿಳಿದು ಬಂದಿದೆ‌. ಇನ್ನು ಇದರ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈ ಅಪಾರ್ಟ್ಮೆಂಟ್ ಅನ್ನು ಭರ್ಜರಿ 7.8 ಕೋಟಿ ರೂಪಾಯಿ ಹಣವನ್ನು ನೀಡಿ ಸಮಂತ ಅವರು ಖರೀದಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಗಳಿಗಾಗಿ ಸುದ್ದಿಯಾಗುತ್ತಿದ್ದ ಸಮಂತ(Samantha) ಅವರು ಈಗ ತಮ್ಮ ಹೊಸ ಅಪಾರ್ಟ್ಮೆಂಟ್ ವಿಚಾರಕ್ಕಾಗಿ ಸುದ್ದಿಯಾಗುತ್ತಿದ್ದಾರೆ‌. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave a Comment

error: Content is protected !!