Samantha: ನಟಿ ಸಮಂತಾಗೆ ಧ’ ಮಕಿ ಹಾಕಿದ ಖ್ಯಾತ ನಿರ್ಮಾಪಕ! ಈ ಕೋಳಿ ಜಗಳ ಬೇಕಾ ಎಂದ ನೆಟ್ಟಿಗರು.

Samantha ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವಂತಹ ಸಮಂತ(Samantha) ವಿವಾಹ ವಿಚ್ಛೇದನದ ನಂತರ ಚಿತ್ರ ರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಅವಕಾಶಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ನೀವೆಲ್ಲರೂ ಗಮನಿಸಿರುತ್ತೀರಿ.

ಕೇವಲ ತೆಲುಗು ಚಿತ್ರರಂಗದಲ್ಲಿ ನಟಿಸುತ್ತಿದ್ದ ನಟಿ ಸಮಂತ(Samantha) ತಮಿಳು ಹಾಗೂ ಬಾಲಿವುಡ್ ನಲ್ಲಿ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುವಂತಾಗಿದೆ. ಕೆಲವೊಂದು ಸುದ್ದಿ ಮೂಲಗಳ ಪ್ರಕಾರ ಅವರು ಮುಂದಿನ ದಿನಗಳಲ್ಲಿ ಇಂಗ್ಲಿಷ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇತ್ತೀಚಿಗೆ ಸಮಂತಾ ಅವರ ಕುರಿತಂತೆ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ ನಿರ್ಮಾಪಕ ಚಿಟ್ಟಿ ಬಾಬು(Chitti Babu) ಅವರಿಗೆ ಕಿವಿಯಲ್ಲಿ ತಲೆಕೂದಲು ಇರುವುದು ಯಾವ ಅರ್ಥಕ್ಕೆ ಸಮಾನ ಎಂಬುದಾಗಿ ಗೂಗಲ್ ಸರ್ಚ್ ಮಾಡಿ ಸಮಂತ ಪರೋಕ್ಷವಾಗಿ ಟೀಕೆ ಮಾಡಿದ್ದರು. ಅದಕ್ಕೆ ಈಗ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಚಿಟ್ಟಿಬಾಬು(Chitti Babu) ನನ್ನ ದೇಹದಲ್ಲಿ ಎಲ್ಲೆಲ್ಲಿ ಕೂದಲಿದೆ ಎಂಬುದನ್ನು ನೀವು ಅಧ್ಯಯನ ಮಾಡಬಹುದಾಗಿದೆ ಆದರೆ ನೆನಪಿಟ್ಟುಕೊಳ್ಳಿ ಜಾಸ್ತಿ ಮಾತನಾಡಿದರೆ ನಿಮ್ಮ ಜೀವನದ ಕೆಲವೊಂದು ರಹಸ್ಯಗಳನ್ನು ಬಿಚ್ಚಿಡಬೇಕಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಇವರು ಯಾವ ವಿಚಾರದ ಕುರಿತಂತೆ ಮಾತನಾಡುತ್ತಿದ್ದಾರೆ ಎಂಬುದು ಈ ಕೋಳಿ ಜಗಳದ ಮುಂದುವರೆದ ಅಧ್ಯಾಯದಲ್ಲಿ ನಾವು ನೋಡಬೇಕಾಗಿದೆ.

Leave a Comment

error: Content is protected !!