Sarja Family: ಕನ್ನಡದ ಖ್ಯಾತ ಖಳನಟ ಶಕ್ತಿಪ್ರಸಾದ್ ಅವರ ಕುಟುಂಬದ ಎಲ್ಲಾ ನಟರ ಹೆಸರಿನ ಹಿಂದೆ ಸರ್ಜಾ ಹೆಸರು ಇರೋದ್ಯಾಕೆ ಗೊತ್ತಾ?

Sarja Family ಕನ್ನಡ ಚಿತ್ರರಂಗದ ಹಿರಿಯ ಖಳನಾಯಕ ಆಗಿದ್ದ ಶಕ್ತಿಪ್ರಸಾದ್(Shakti Prasad) ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟ ಹಾಗೂ ಖಳನಾಯಕನಾಗಿ ಕಾಣಿಸಿಕೊಂಡಿರುವ ಅವರ ನಿಜವಾದ ಹೆಸರು ರಾಮಸ್ವಾಮಿ ಆಗಿದ್ದು ಚಿಕ್ಕವಯಸ್ಸಿನಿಂದಲೂ ಕೂಡ ಅವರು ಮಧುಗಿರಿಯಲ್ಲಿ ವ್ಯಾಯಾಮ ಶಾಲೆಗೆ ಹೋಗಿ ದೇಹವನ್ನು ಕಟ್ಟುಮಸ್ತಾಗಿ ಹುರಿಗೊಳಿಸಿದ್ದರು. ಪ್ರಾರಂಭದಲ್ಲಿ ಇವರು ಚಾಮರಾಜಪೇಟೆಯ ಪೋರ್ಟ್ ಹೈಸ್ಕೂಲ್ ನಲ್ಲಿ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಾರೆ.

ಎಲ್ಲರೂ ಇವರನ್ನು ದೈಹಿಕ ಶಿಕ್ಷಕ ಎಂಬುದಾಗಿ ಕರೆಯುತ್ತಿದ್ದರು ಯಾಕೆಂದರೆ ಸಮಯ ಸಿಕ್ಕಾಗಲೆಲ್ಲ ತಾವು ಕಲಿತಿರುವಂತಹ ವ್ಯಾಯಾಮಗಳನ್ನು ವಿದ್ಯಾರ್ಥಿಗಳಿಗೆ ಇವರು ಕಲಿಸಿಕೊಡುತ್ತಿದ್ದರು. ಬಾಲ್ಯದಿಂದಲೂ ಕೂಡ ಇವರ ತಂದೆಯ ಪ್ರಭಾವದಿಂದ ನಾಟಕಗಳಲ್ಲಿ ಅವರಿಗೆ ಆಸಕ್ತಿ ಸಾಕಷ್ಟಿರುತ್ತದೆ. ಟಿಪ್ಪು ಸುಲ್ತಾನ್ ನಾಟಕದಲ್ಲಿ ಟಿಪ್ಪುವಿನ ಪಾತ್ರದಲ್ಲಿ ಇವರನ್ನು ಕಂಡಂತಹ ಕೂರಾ ಸೀತಾರಾಮ ಶಾಸ್ತ್ರಿ ಇವರನ್ನು ಮದ್ರಾಸಿಗೆ ಕರೆದುಕೊಂಡು ಹೋಗುತ್ತಾರೆ. ಕರಗಶಕ್ತಿ ಎನ್ನುವ ಸಿನಿಮಾ ನಿರ್ಮಾಣ ಆಗುತ್ತಿದ್ದ ಸಂದರ್ಭದಲ್ಲಿ ಇವರಿಗೆ ಸಿಗಬೇಕಾಗಿದ್ದ ಮೊದಲ ಅವಕಾಶ ಕೈ ತಪ್ಪಿ ಹೋಗುತ್ತದೆ.

ಇದೇ ಸಂದರ್ಭದಲ್ಲಿ ಅವರು ಕೂರ ಸೀತಾರಾಮ ಶಾಸ್ತ್ರಿಯವರಿಗೆ ನಮ್ಮ ತಾಯಿಯ ಶಕ್ತಿ ಹಾಗೂ ಚೌಡೇಶ್ವರಿಯ ಪ್ರಸಾದ ಎರಡು ಹೆಸರನ್ನು ಸೇರಿಸಿ ಶಕ್ತಿಪ್ರಸಾದ್ ಎನ್ನುವ ಹೆಸರನ್ನು ಇಟ್ಟುಕೊಳ್ಳುತ್ತೇನೆ ಎಂಬುದಾಗಿ ಕೇಳುತ್ತಾರೆ. ಅದಕ್ಕೆ ಸೀತಾರಾಮ ಶಾಸ್ತ್ರಿಗಳು ಕೂಡ ಒಪ್ಪಿಗೆ ನೀಡುತ್ತಾರೆ ಅಂದಿನಿಂದ ಅವರ ಹೆಸರು ಶಕ್ತಿಪ್ರಸಾದ್ ಆಗುತ್ತದೆ. 150 ಕಿಂತಲು ಹೆಚ್ಚಿನ ಸಿನಿಮಾ ಮಾಡಿರುವ ಇವರು ಅಣ್ಣಾವ್ರ ಜೊತೆಗೆನೇ 25ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಸರ್ಜಾ ಎನ್ನುವ ಹೆಸರು ಹೇಗೆ ಬಂತು ಎನ್ನುವ ಕುತೂಹಲಕ್ಕೆ ಕೂಡ ಉತ್ತರ ನೀಡುವ ಪ್ರಯತ್ನವನ್ನು ಮಾಡುತ್ತೇವೆ. ಪಾಳೇಗಾರ ಸರ್ಜಾನಾಯಕನ ಜೊತೆಗೆ ಶಕ್ತಿಪ್ರಸಾದ್ ಅವರ ಪೂರ್ವಜರ ಸಂಬಂಧಪಟ್ಟ ಚೆನ್ನಾಗಿತ್ತು ಹೀಗಾಗಿ ಆ ಹೆಸರನ್ನು ಉಳಿಸಿಕೊಂಡು ಬರುವ ಇಚ್ಛೆಯಲ್ಲಿ ತಮ್ಮ ಮಕ್ಕಳಾಗಿರುವ ಅರ್ಜುನ್ ಸರ್ಜಾ(Arjun Sarja) ಹಾಗೂ ಕಿಶೋರ್ ಸರ್ಜಾ ಅವರಿಗೆ ಅದೇ ಹೆಸರನ್ನು ಇಡುತ್ತಾರೆ. ನಂತರ ಅಲ್ಲಿಂದ ಧ್ರುವ ಸರ್ಜಾ(Dhruva Sarja) ಹಾಗೂ ಚಿರು ಸರ್ಜಾ(Chiru Sarja) ಅವರಿಗೂ ಕೂಡ ಅದೇ ಹೆಸರು ಮುಂದುವರೆದುಕೊಂಡು ಬರುತ್ತದೆ. ಇದೇ ಗೆಳೆಯರೇ ಸರ್ಜಾ ಮನೆತನದವರ ಸರ್ಜಾ ಹೆಸರಿನ ರಹಸ್ಯ.

Leave a Comment

error: Content is protected !!