Lakshmi: ಹಿರಿಯ ನಟಿ ಲಕ್ಷ್ಮಿ ಅವರ ಬಗ್ಗೆ ಕಣ್ಣೀರು ಹಾಕುತ್ತಾ ಅವರ ಮಗಳು ಹೇಳಿದ್ದೇನು ಗೊತ್ತಾ?

Lakshmi Kannada Actress ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಆಗಿರುವ ಲಕ್ಷ್ಮಿ(Lakshmi) ಅವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಂಚಭಾಷಾ ತಾರೆ ಆಗಿ ಈಗಾಗಲೇ ಕಾಣಿಸಿಕೊಂಡವರು. ನೂರಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಈಗಾಗಲೇ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಜನಪ್ರಿಯತೆಯನ್ನು ಹೊಂದಿರುವ ನಟಿಯಾಗಿದ್ದಾರೆ ನಟಿ ಲಕ್ಷ್ಮಿ.

ಇನ್ನು ನಟಿ ಲಕ್ಷ್ಮಿ ಅವರ ದಾಂಪತ್ಯ ಜೀವನದ ಕುರಿತಂತೆ ಮಾತನಾಡುವುದಾದರೆ ಅಷ್ಟೊಂದು ಸುಲಭವಾಗಿರಲಿಲ್ಲ. ಅವರ ತಮ್ಮ ಜೀವನದಲ್ಲಿ ಒಟ್ಟಾರೆಯಾಗಿ ಮೂರು ಮದುವೆಯನ್ನು ಆಗಿದ್ದಾರೆ. ಸದ್ಯಕ್ಕೆ ನಟಿ ಲಕ್ಷ್ಮಿ ಶಿವಚಂದ್ರನ್ ಅವರನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಲಕ್ಷ್ಮಿ ಅವರಿಗೆ ಸಂಯುಕ್ತ ಹಾಗೂ ಐಶ್ವರ್ಯ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಐಶ್ವರ್ಯ(Aishwarya Lakshmi) ಅವರ ಕುರಿತಂತೆ ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ.

Actress Lakshmi With Her Daughter

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ರಘು ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಸಂದರ್ಶನ ನೀಡುವ ಸಂದರ್ಭದಲ್ಲಿ ತಮ್ಮ ತಾಯಿಯ ಕುರಿತಂತೆ ಅವರು ಮಾತನಾಡಿದ್ದಾರೆ. ನಾನು ಇಂದಿಗೂ ಕೂಡ ಸಹಾಯಕ್ಕಾಗಿ ನನ್ನ ತಂದೆ ತಾಯಿಯ ಬಳಿ ಕೈಚಾಚುವ ಮಗಳಲ್ಲ. 18 ವರ್ಷದವರೆಗೂ ಅವರ ಸಹಾಯದಿಂದ ವಿದ್ಯಾಭ್ಯಾಸವನ್ನು ಹಾಗೂ ಜೀವನವನ್ನು ನಡೆಸಿದ್ದೆ ಆದರೆ ಅದು ಈಗ ಹಾಗಾಗುವುದಿಲ್ಲ.

ನಾನು ಕೂಡ ಬೇರೆಯ ಸೆಲೆಬ್ರಿಟಿಗಳ ಮಕ್ಕಳ ರೀತಿಯಲ್ಲಿ ತಾಯಿಯ ಆಶ್ರಯದಲ್ಲಿ ಇನ್ನು ಕೂಡ ಬದುಕಲು ಸಾಧ್ಯವಿಲ್ಲ. ನಾನು ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದೇನೆ. ಮದುವೆಯಾದ ನಂತರ ಗಂಡ ಹಾಗೂ ಮಕ್ಕಳ ಆಶ್ರಯದಲ್ಲಿ ಕೂಡ ನನಗೆ ಬದುಕಲು ಸಾಧ್ಯವಿಲ್ಲ ನನಗೆ ಸ್ವಾವಲಂಬಿ ಜೀವನವೇ ಬದುಕಲು ಇಷ್ಟ ಎಂಬುದಾಗಿ ಹೇಳಿದ್ದಾರೆ. ನಾನು ಮಾಡುತ್ತಿರುವ ಕೆಲಸದಿಂದ ಬರುವ ಹಣದಿಂದ ನನ್ನ ಮಣ್ಣಿನ ಕಡೆಗೆ ಹಾಗೂ ನನ್ನ ತಾಯಿಯ ಕಡೆಗೆ ಗಮನ ನೀಡಬೇಕು ಅದನ್ನು ಮಾಡುತ್ತಿದ್ದೇನೆ ಅಷ್ಟರಲ್ಲೇ ಸಮಾಧಾನವಿದೆ ಎಂಬುದಾಗಿ ಹೇಳಿದ್ದಾರೆ.

Leave a Comment

error: Content is protected !!