Akshay Kumar: ಮಂಗಳೂರು ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಮೋಸ ಮಾಡಿದ್ರಂತೆ ಕಿಲಾಡಿ ಅಕ್ಷಯ್ ಕುಮಾರ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

Shilpa Shetty ನಮ್ಮ ಕರಾವಳಿ ಮೂಲದಿಂದ ಬಾಲಿವುಡ್ ಚಿತ್ರರಂಗಕ್ಕೆ ಹೋಗಿ ನಟಿಸಿದವರಲ್ಲಿ ನಟಿ ಶಿಲ್ಪ ಶೆಟ್ಟಿ(Shilpa Shetty) ಕೂಡ ಒಬ್ಬರಾಗಿದ್ದು ಬಾಲಿವುಡ್ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದು ಸ್ಟಾರ್ ನಟಿಯಾಗಿ ಕೂಡ ಮಿಂಚಿದ್ದಾರೆ. ಇಂದಿಗೂ ಕೂಡ ವಯಸ್ಸು 50ನ್ನು ಸಮೀಪಿಸಿದ್ದರು ಕೂಡ ಯಾವುದೇ ಹದಿಹರೆಯದ ಯುವ ನಟಿಗೂ ಕಡಿಮೆ ಇಲ್ಲದಂತೆ ಸೌಂದರ್ಯವತಿಯಾಗಿದ್ದಾರೆ.

ಇನ್ನು ಕನ್ನಡದಲ್ಲಿ ಕೂಡ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಶಿಲ್ಪ ಶೆಟ್ಟಿ(Shilpa Shetty) ಅವರ ಜೀವನದ ಒಂದು ಖಾಸಗಿ ವಿಚಾರವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆ ವಿಚಾರ ಯಾವುದು ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಹೌದು ಗೆಳೆಯರೇ 90ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಶಿಲ್ಪ ಶೆಟ್ಟಿ ನಾಯಕ ನಟಿಯಾಗಿ ಪೀಕ್ ನಲ್ಲಿ ಇದ್ದ ಸಂದರ್ಭದಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಅಕ್ಷಯ್ ಕುಮಾರ್(Akshay Kumar) ಅವರ ಜೊತೆಗೆ ಶಿಲ್ಪ ಶೆಟ್ಟಿ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಈ ಸಂದರ್ಭದಲ್ಲಿ ನಟಿ ಶಿಲ್ಪ ಶೆಟ್ಟಿ ಅವರಿಗೆ ಅಕ್ಷಯ್ ಕುಮಾರ್ ಮೋಸ ಮಾಡುತ್ತಾರೆ. ಶಿಲ್ಪ ಶೆಟ್ಟಿ ಅವರಿಗೆ ಮೋಸ ಮಾಡಿ ನಟಿ ಟ್ವಿಂಕಲ್ ಖನ್ನಾ(Twinkle Khanna) ಜೊತೆಗೆ ಅಕ್ಷಯ್ ಕುಮಾರ್ ಡೇಟಿಂಗ್ ನಡೆಸುತ್ತಿದ್ದರು.

ಈ ವಿಚಾರವನ್ನು ಶಿಲ್ಪ ಶೆಟ್ಟಿ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಅಂತರ ಇಬ್ಬರು ಕೂಡ ಪರಸ್ಪರ ಬೇರೆಯಾಗಿ ಬೇರೆ ಬೇರೆಯವರನ್ನು ಮದುವೆಯಾಗಿ ಈಗ ಸದ್ಯಕ್ಕೆ ಜೀವನದಲ್ಲಿ ಸಂತೋಷವಾಗಿದ್ದಾರೆ. ನಟಿ ಶಿಲ್ಪ ಶೆಟ್ಟಿ(Shilpa Shetty) ಕೂಡ ಇದರ ಬಗ್ಗೆ ಮಾತನಾಡುತ್ತಾ ಅಂತಹ ಪರಿಸ್ಥಿತಿಯನ್ನು ನಾನು ಗೆದ್ದು ಇಂದು ಜೀವನದಲ್ಲಿ ಸಂತೋಷವಾಗಿದ್ದೇನೆ ಎನ್ನುವ ಗೆಲುವಿನ ನಗುವನ್ನು ಕೂಡ ಬೀರುತ್ತಾರೆ.

Leave a Comment

error: Content is protected !!