Shivanna: ಶಿವಣ್ಣನ ಕುಟುಂಬದಿಂದ ಮತ್ತೊಂದು ಪ್ರತಿಭೆ ಕನ್ನಡ ಚಿತ್ರರಂಗಕ್ಕೆ. ಪಾರ್ವತಮ್ಮ ರಾಜಕುಮಾರ್ ಅವರ ಬದಲಿಗೆ ಇವರು.

Shivanna ಕರುನಾಡ ಚಕ್ರವರ್ತಿ ಶಿವಣ್ಣ ಕನ್ನಡ ಚಿತ್ರರಂಗದಲ್ಲಿ(Kannada Film Industry) ಸಾಕಷ್ಟು ವರ್ಷಗಳಿಂದಲೂ ಕೂಡ ನಾಯಕ ನಟನಾಗಿ ಕಾಣಿಸಿಕೊಂಡು ಬಂದವರು ಹಾಗೂ ಸಾಕಷ್ಟು ಪ್ರತಿಭೆಗಳನ್ನು ಕೂಡ ಬೆಳಕಿಗೆ ತರುವಂತಹ ಕೆಲಸವನ್ನು ತಮ್ಮ ಸಿನಿಮಾಗಳ ಮೂಲಕ ಮಾಡಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು.

ರಾಜಕುಮಾರ್ ಅವರ ಕುಟುಂಬವೇ ಹಾಗೆ ಕನ್ನಡ ಚಿತ್ರರಂಗಕ್ಕೆ ವರದಾನದ ರೀತಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಏನು ವಿಶೇಷವಾಗಿ ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕವಾಗಿ ಕಾಣಿಸಿಕೊಂಡಿರುವಂತಹ ಪಾರ್ವತಮ್ಮ ರಾಜಕುಮಾರ್(Parwathamma rajkumar) ಅವರನ್ನು ಕೂಡ ಧೈರ್ಯವಂತರ ಮಹಿಳೆಯ ಲಿಸ್ಟ್ ನಲ್ಲಿ ಒಬ್ಬರನ್ನಾಗಿ ನೋಡಬಹುದು.

ಯಾಕೆಂದರೆ ಚಿತ್ರರಂಗವನ್ನು ಗಂಡಸರೇ ಆಳುತ್ತಿದ್ದ ಕಾಲದಲ್ಲಿ ಅವರು ಒಬ್ಬ ಸ್ವಾವಲಂಬಿ ಮಹಿಳೆಯಾಗಿ ನಿರ್ಮಾಪಕವಾಗಿ ಕಾಣಿಸಿಕೊಂಡ ರೀತಿ ನಿಜಕ್ಕೂ ಕೂಡ ಅವರನ್ನು ಎಲ್ಲರಿಗಿಂತ ವಿಶೇಷವನ್ನಾಗಿ ಮಾಡಿಸುತ್ತದೆ. ವಜ್ರೇಶ್ವರಿ ಕಂಬೈನ್ಸ್(Vajreshwari Combines) ಮೂಲಕ ಈಗಾಗಲೇ ಸಾಕಷ್ಟು ನಾಯಕ ಹಾಗೂ ನಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿರುವ ಶ್ರೇಯಾ ಅವರಿಗೆ ಸಲ್ಲುತ್ತದೆ.

ಈಗ ಅಜ್ಜಿಯ ಸ್ಥಾನದಲ್ಲಿ ಅವರ ಮೊಮ್ಮಗಳು ಅಂದರೆ ಶಿವಣ್ಣನ ಮಗಳಾಗಿರುವಂತಹ ನಿವೇದಿತಾ ಶಿವರಾಜಕುಮಾರ್(Niveditha Shivaraj Kumar) ರವರು ಕಾಣಿಸಿಕೊಳ್ಳಲಿದ್ದಾರೆ. ಹೌದು ಫೈಯರ್ ಫ್ಲೈ ಎನ್ನುವಂತಹ ಸಿನಿಮಾವನ್ನು ಚೊಚ್ಚಲ ಬಾರಿಗೆ ನಿರ್ಮಾಣ ಮಾಡಲು ಹೊರಟಿರುವ ನಿವೇದಿತಾ ಅವರು ಸಿನಿಮಾದ ಮುಹೂರ್ತ ಪೂಜೆಯನ್ನು ಕೂಡ ಮೊನ್ನೆ ಅಷ್ಟೇ ಮಾಡಿದ್ದಾರೆ.

Leave a Comment

error: Content is protected !!