Shivanna: ವಯಸ್ಸು 61 ಆದರ ಶಿವಣ್ಣನ ಕೈಯಲ್ಲಿರುವ ಸಿನಿಮಾ ಎಷ್ಟು ಗೊತ್ತಾ?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Shivanna) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊನ್ನೆ ಅಷ್ಟೇ ತಮ್ಮ 61ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಕೂಡ 20 ಹರೆಯದ ಯುವಕರಿಗೆ ಕಾಂಪಿಟೇಶನ್ ನೀಡೋ ಹಾಗೆ ನಟಿಸುತ್ತಾರೆ ಹಾಗೂ ಡಾನ್ಸ್ ಮಾಡುತ್ತಾರೆ.

ಬರ್ತಡೆಯ ದಿನದಂದು ಕೂಡ ಶಿವಣ್ಣನಿಗೆ ಸಿನಿಮಾಗಳ ಆಫರ್ ಗಳು ಬರೋದು ಕಡಿಮೆಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ವಯಸ್ಸಿನಲ್ಲಿ ಬೇರೆ ಸ್ಟಾರ್ ಗಳು ಪೋಷಕ ಕಲಾವಿದನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಶಿವಣ್ಣ ಸೂಪರ್ ಸ್ಟಾರ್ ಆಗಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು 61ನೇ ವಯಸ್ಸಿನ ಬರ್ತಡೆ ದಿನದಂದು ಶಿವಣ್ಣ ಒಟ್ಟಾರೆ 12 ಸಿನಿಮಾಗಳಿಗೆ ಸೈನ್ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಶಿವಣ್ಣ(Shivarajkumar) ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆ ನಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ವಯಸ್ಸಿನಲ್ಲಿ ಕೂಡ ಅವರಷ್ಟು ಸಿನಿಮಾಗಳನ್ನು ಹೊಂದಿರುವ ಮತ್ತೊಬ್ಬ ಸ್ಟಾರ್ ಕನ್ನಡ ಚಿತ್ರರಂಗದಲ್ಲಿ ಯಾವುದೇ ವಯೋಮಾನದಲ್ಲೂ ಕೂಡ ಇಲ್ಲ ಎಂದು ಹೇಳಬಹುದು.

ಶಿವಣ್ಣ ನಟನೆಯ ಮುಂದಿನ ಸಿನಿಮಾಗಳ ಅಧಿಕೃತ ಅನೌನ್ಸ್ಮೆಂಟ್ ಆಗಿದ್ದು ಇವುಗಳಲ್ಲಿ ನೀವು ಯಾವ ಸಿನಿಮಗಳಿಗಾಗಿ ಕಾಯುತ್ತಿದ್ದೀರಿ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ಶಿವಣ್ಣನ ಅಭಿಮಾನಿ ಹಾಗಿದ್ದರೆ ಅವರು ಯಾವ ಗುಣಗಳಿಗಾಗಿ ಅವರನ್ನು ಇಷ್ಟಪಡುತ್ತೀರಾ ಎಂಬುದನ್ನು ಕೂಡ ಕಾಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!