ಹೆಂಡತಿ ಗೀತಕ್ಕ ಅವರ ತಲೆಕೂದಲನ್ನು ಬಾಚಿ ಸರಳತೆಯನ್ನು ಮೆರೆದ ಶಿವಣ್ಣ ವಿಡಿಯೋ ವೈರಲ್

Sivanna combed the hair of his wife Geetakka and showed simplicity ಕರುನಾಡ ಚಕ್ರವರ್ತಿ ಶಿವಣ್ಣ ಅವರಿಗೆ ವಯಸ್ಸು 60 ಆಗಿದ್ದರೂ ಕೂಡ ಇಂದಿನ ಕನ್ನಡ ಚಿತ್ರರಂಗದ 30ರ ಹರೆಯದ ಯುವ ನಟರಿಗಿಂತ ಹೆಚ್ಚಾಗಿ ಎನರ್ಜಿಟಿಕ್ (Energetic) ಹಾಗೂ ಆಕ್ಟಿವ್ (Active) ಆಗಿ ಶಿವಣ್ಣ ಅವರು ಕಾಣಿಸಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಶಿವಣ್ಣ ಅವರ 125ನೇ ಸಿನಿಮಾ ವೇದ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಬಹುದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದು ಬಾಕ್ಸ್ ಆಫೀಸ್ ನಲ್ಲಿ ಕೂಡ ಕಮಾಲ್ ಮಾಡಿದೆ.

ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾ ವೇದ ಆಗಿದ್ದು ಪ್ರತಿಯೊಬ್ಬರೂ ಕೂಡ ಸಿನಿಮಾವನ್ನು ವೀಕ್ಷಿಸಿದ ನಂತರ ಚಿತ್ರದ ಕುರಿತಂತೆ ಸಕಾರಾತ್ಮಕ ರೆಸ್ಪಾನ್ಸ್ (Positive Response) ಅನ್ನು ನೀಡುತ್ತಿದ್ದಾರೆ. ಇದು ದಿನೇದಿನೇ ಚಿತ್ರದ ಕುರಿತಂತೆ ಪ್ರೇಕ್ಷಕರಲ್ಲಿ ಮತ್ತೊಮ್ಮೆ ಸಿನಿಮಾವನ್ನು ನೋಡಬೇಕೆನ್ನುವ ಆಸೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಬಹುದಾಗಿದೆ. ಈ ಹರ್ಷ ಹಾಗೂ ಶಿವಣ್ಣ ಅವರ ಕಾಂಬಿನೇಷನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಇನ್ನು ಇತ್ತೀಚಿಗಷ್ಟೇ ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ ಪತ್ನಿ ಗೀತಾ ಅವರ ಜೊತೆಗೆ ಶಿವಮೊಗ್ಗಕ್ಕೆ ಸಿನಿಮಾದ ಪ್ರಚಾರಕ್ಕಾಗಿ ಹೋಗಿದ್ದರು. ಈ ಸಂದರ್ಭದಲ್ಲಿ ಕ್ಯೂಟ್ ವಿಡಿಯೋ ಒಂದು ಹೊರಗೆ ಬಂದಿದ್ದು ಶಿವಣ್ಣ ತಮ್ಮ ಪತ್ನಿ ಗೀತಕ್ಕ ಅವರ ತಲೆ ಬಾಚುತ್ತಿದದ್ದು ಕಂಡು ಬಂದಿತು. ಸರಳ ವ್ಯಕ್ತಿತ್ವವನ್ನು ಹೊಂದಿರುವಂತಹ ಶಿವಣ್ಣ ಕೇವಲ ತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಒಬ್ಬ ಜಂಟಲ್ ಮ್ಯಾನ್ (Gentleman) ಎಂದರೆ ತಪ್ಪಾಗಲಾರದು.

ತಮ್ಮ ಪತ್ನಿ ಗೀತಾ ಅವರ ಕೈ ಗಾ’ಯ ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ತಲೆ ಬಾಚಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ ಪತ್ನಿಗೆ ಕಷ್ಟ ಆಗಬಾರದು ಎನ್ನುವ ಕಾರಣಕ್ಕಾಗಿ ತಾವೇ ಅವರ ತಲೆ ಬಾಚುತ್ತಿದ್ದರು. ಈ ಅಮೂಲ್ಯ ಕ್ಷಣ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ (Social Media) ಕೂಡ ವೈರಲ್ ಆಗಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ಶಿವಣ್ಣ ಅವರ ಈ ಸರಳತೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!