Kranti trailer launch: ಕ್ರಾಂತಿ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಡಿ ಬಾಸ್ ವೇದಿಕೆಯಿಂದ ಬೇಸರದಿಂದ ಕೆಳಗಿಳಿದು ಬಂದದ್ದು ಯಾಕೆ ಗೊತ್ತಾ?

D Boss at the Kranti trailer launch event ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ವಿ ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಶೈಲಜಾ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಕ್ರಾಂತಿ ಸಿನಿಮಾದ ಟ್ರೈಲರ್ (Trailer) ಲಾಂಚ್ ಕಾರ್ಯಕ್ರಮ ಈಗಾಗಲೇ ಜನವರಿ 7ರಂದು ಅದ್ದೂರಿಯಾಗಿ ನಡೆದಿದೆ. ಸಿನಿಮಾದಲ್ಲಿ ನಾಯಕ ನಟಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಪ್ರಮುಖ ಪಾತ್ರದಲ್ಲಿ ಸುಮಲತಾ ಅಂಬರೀಶ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಕೂಡ ಈಗಾಗಲೇ ಅದ್ಧೂರಿಯಾಗಿ ಮೂಡಿ ಬಂದಿದೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೂಡ ಟ್ರೈಲರ್ ಲಾಂಚ್ (Trailer Launch) ಕಾರ್ಯಕ್ರಮವನ್ನು ಅವರೇ ಸ್ವತಹ ಖುದ್ದಾಗಿ ರಾಜ್ಯಾದ್ಯಂತ 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುವ ಮೂಲಕ ಸಂಭ್ರಮಾಚರಣೆಯನ್ನು (Celebration) ಮಾಡಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೇರಿದಂತೆ ಕ್ರಾಂತಿ ಚಿತ್ರತಂಡವು ಕೂಡ ಟ್ರೈಲರ್ ಬಿಡುಗಡೆಯ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಂಡಿತು. ಈ ಕಾರ್ಯಕ್ರಮಕ್ಕೆ ಚಿತ್ರತಂಡ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಕೂಡ ಆಗಮಿಸಿದ್ದರು.

ಆದರೆ ಇಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವೇದಿಕೆ ಮೇಲೆ ಮಾತನಾಡುತ್ತಿದ್ದ ಹಾಗೆ ಬೇಸರದಿಂದ ಕೆಳಗಿಳಿದು ಹೋಗಿದ್ದು ಕಂಡುಬಂದಿತು. ಇದು ಅವರಿಗೆ ಆದಂತಹ ಬೇಸರವೂ ಕೂಡ ಆಗಿರಬಹುದು ಇಲ್ಲವಾದಲ್ಲಿ ಬೇರೆಯವರಿಗೆ ಮಾತನಾಡುವ ಅವಕಾಶ (Opportunity) ಸಿಗಲಿ ಎನ್ನುವ ಡಿ ಬಾಸ್ ಅವರ ಕಳಕಳಿಯು ಕೂಡ ಆಗಿರಬಹುದು. ಆದರೆ ಡಿ ಬಾಸ್ ವೇದಿಕೆಯಿಂದ ಕೇವಲ ಎರಡು ಮಾತುಗಳನ್ನಾಡಿ ಕೆಳಗಿಳಿದು ಬಂದಿದ್ದು ಅವರ ಸಮರ್ಥಕರಿಗೆ ಮಾತ್ರ ಬೇಸರವನ್ನುಂಟು ಮಾಡಿರುವುದಂತೂ ಸತ್ಯ.

ಇದನೊಮ್ಮೆ ಓದಿ,,ಹೊಸಪೇಟೆಯಲ್ಲಿ ನಡೆದಿರುವ ಅವಮಾನಕ್ಕೆ ಸಡ್ಡು ಹೊಡೆಯಲು ಸಿದ್ದರಾದ ಡಿ ಬಾಸ್ ಅಭಿಮಾನಿಗಳು ಮಾಡಲು ಹೊರಟಿರುವುದೇನು ಗೊತ್ತಾ?

ಹೌದು ಮಿತ್ರರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾತನಾಡಲು ವೇದಿಕೆಗೆ ಬಂದು ಸುಮಲತಾ ಅಂಬರೀಶ್ ಹಾಗೂ ಗಿರಿಜಾ ಲೋಕೇಶ್ ಅವರಿಗೆ ಮತ್ತು ವೇದಿಕೆಯ ಮುಂಭಾಗದಲ್ಲಿ ಇರುವಂತಹ ಎಲ್ಲ ಗಣ್ಯರಿಗೂ ನಮಸ್ಕಾರವನ್ನು ಮಾಡಿ ನಾನೇನು ಹೆಚ್ಚೇನು ಹೇಳುವುದಕ್ಕೆ ಹೋಗುವುದಿಲ್ಲ ಈಗಾಗಲೇ ಹಲವಾರು ಚಾನಲ್ಗಳಲ್ಲಿ ಕ್ರಾಂತಿ ಸಿನಿಮಾದ ಕುರಿತಂತೆ ಮಾತನಾಡಿದ್ದೇನೆ. ನೀವು ಟ್ರೈಲರ್ ಕೂಡ ನೋಡಿದ್ದೀರಾ ನಾವು ದೊಡ್ಡ ಮಟ್ಟದ ಕಮರ್ಷಿಯಲ್ (Commercial) ಸಿನಿಮಾ ಮಾಡಿದ್ದೇವೆ ಎಂದು ಹೇಳಲು ಹೋಗುವುದಿಲ್ಲ ಆದರೆ ಡಿಸೆಂಟ್ ಸಿನಿಮಾವನ್ನು ಮಾಡಿದ್ದೇವೆ. ನೀವು ಈಗ ನೋಡಿರುವುದು ಕೇವಲ 0.1%. ಥಿಯೇಟರ್ (Theatre) ನಲ್ಲಿ ನೋಡುವುದು ಇನ್ನೂ ಬಾಕಿ ಇದೆ ಎಂಬುದಾಗಿ ಹೇಳಿ ವೇದಿಕೆಯಿಂದ ಕೆಳಗಿಳಿಯುತ್ತಾರೆ.

Leave a Comment

error: Content is protected !!