Shivanna: 60ರ ವಯಸ್ಸಿನಲ್ಲಿ ಕೂಡ ಎನರ್ಜಿಟಿಕ್ ಆಗಿರುವ ಶಿವಣ್ಣ ಒಂದು ಸಿನಿಮಾಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?

Shivanna ಸದ್ಯದ ಮಟ್ಟಿಗೆ ಮೂರು ಜನರೇಷನ್ ನಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ನಟರಲ್ಲಿ ಅಗ್ರಗಣ್ಯರಾಗಿ ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕಾಣಿಸಿಕೊಳ್ಳುತ್ತಾರೆ. ಅವರು ಮಾಡೋ ನಟನೆ ನೃತ್ಯ ಸಾಹಸ ದೃಶ್ಯಗಳನ್ನು ನೋಡಿದರೆ ಅವರಿಗೆ 60 ವರ್ಷ ಆಗಿದೆ ಎನ್ನುವ ಭಾವನೆ ಕೂಡ ಬರುವುದಿಲ್ಲ. ಅಷ್ಟರಮಟ್ಟಿಗೆ ಶಿವಣ್ಣ ಎನರ್ಜಿಟಿಕ್ ಆಗಿದ್ದಾರೆ.

ಅಣ್ಣಾವ್ರು(Annavru) ನಟಿಸುತ್ತಿದ್ದ ಕಾಲದಿಂದ ಹಿಡಿದು ಇಂದು ಅಣ್ಣಾವ್ರ ಮೊಮ್ಮಕ್ಕಳು ನಟಿಸುವ ಕಾಲದವರೆಗೂ ಕೂಡ ಶಿವಣ್ಣ ಕನ್ನಡ ಚಿತ್ರರಂಗದ ಟಾಪ್ ನಾಯಕ ನಟನಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 125ಕ್ಕೂ ಅಧಿಕ ಸಿನಿಮಾಗಳಲ್ಲಿ ಶಿವಣ್ಣ(Shivarajkumar) ಕಾಣಿಸಿಕೊಂಡಿರುವುದು ಅವರಿಗಿರುವ ಅನುಭವ ನಿಜಕ್ಕೂ ಕೂಡ ಅಮೂಲ್ಯವಾದದ್ದು ಎನ್ನುವುದನ್ನು ಎರಡು ಮಾತಿಲ್ಲದೆ ಹೇಳಬಹುದಾಗಿದೆ.

ಇಂದಿಗೂ ಕೂಡ ಅತ್ಯಂತ ಬಹು ಬೇಡಿಕೆಯ ನಾಯಕ ನಟನಾಗಿರುವ ಶಿವಣ್ಣ ಕೈಯಲ್ಲಿ ಈಗಾಗಲೇ ಐದರಿಂದ ಆರು ಸಿನಿಮಾಗಳನ್ನು ಹೊಂದಿದ್ದಾರೆ. 126ನೇ ಸಿನಿಮಾದಿಂದ ಹಿಡಿದು 130ರವರೆಗೂ ಕೂಡ ಶಿವಣ್ಣನ(Shivanna) ಕಾಲ್ ಶೀಟ್ ಬುಕ್ ಆಗಿವೆ. ಇನ್ನು ಅವರು ಒಂದು ಸಿನಿಮಾಗೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಕೋಟಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇಂದಿಗೂ ಕೂಡ ವರ್ಷಕ್ಕೆ ಮೂರರಿಂದ ನಾಲ್ಕು ಬಿಡುಗಡೆಯಾಗುವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಶಿವಣ್ಣ(SRK) ಒಂದು ಸಿನಿಮಾ ಗೆ ಭರ್ಜರಿ ನಾಲ್ಕರಿಂದ ಆರು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಎನ್ನುವ ಮಾತಿದೆ. 60ರ ಈ ಇಳಿ ವಯಸ್ಸಿನಲ್ಲಿ ಕೂಡ ಎನರ್ಜಿಟಿಕ್ ಶಿವಣ್ಣ ಯಾವ ಸ್ಟಾರ್ ನಟನಿಗೂ ಕಡಿಮೆ ಇಲ್ಲದಂತೆ ಸಂಭಾವನೆ ಪಡೆದುಕೊಳ್ಳುತ್ತಿರುವುದು ನಿಜಕ್ಕೂ ಪ್ರತಿಯೊಬ್ಬರೂ ಕೂಡ ಮೆಚ್ಚಿ ಕೊಳ್ಳಬೇಕಾದ ವಿಚಾರವಾಗಿದೆ.

Leave a Comment

error: Content is protected !!