KD: ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾಗೆ ಸಂಜಯ್ ದತ್ ನಂತರ ಎಂಟ್ರಿ ನೀಡುತ್ತಿದ್ದಾರೆ ಮತ್ತೊಬ್ಬ ಬಾಲಿವುಡ್ ನಟಿ! ಜೋಗಿ ಪ್ರೇಮ್ ಕರಾಮತ್ತು.

Dhruva Sarja ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯಕ್ಕೆ ಈ ವರ್ಷ ಎರಡು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಮೊದಲನೇದಾಗಿ ಎಪಿ ಅರ್ಜುನ್(AP Arjun) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಾರ್ಟಿನ್(Martin Kannada Movie) ಸಿನಿಮಾದಲ್ಲಿ ಈಗಾಗಲೇ ಬಹುತೇಕ ಚಿತ್ರೀಕರಣವನ್ನು ಪೂರೈಸಿ, ಟೀಸರ್ ಕೂಡ ಬಿಡುಗಡೆಯಾಗಿ ವ್ಯಾಪಕವಾಗಿ ಜನ ಮೆಚ್ಚುಗೆಗೆ ಒಳಗಾಗಿದೆ. ಈಗ ನಾವು ಮಾತನಾಡಲು ಹೊರಟಿರುವುದು ಅವರ ಎರಡನೇ ಸಿನಿಮಾದ ಬಗ್ಗೆ.

ಹೌದು ಗೆಳೆಯರೇ, ಜೋಗಿ ಪ್ರೇಮ್(Jogi Prem) ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಕೆಡಿ(KD Kannada Movie) ಸಿನಿಮಾ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದು ನೈಜ ಘಟನೆಗಳನ್ನು ತೋರಿಸುವಂತ‌ಹ ಚಿತ್ರಣ ಇದಾಗಿರಲಿದೆ ಎನ್ನುವುದಾಗಿ ಹಲವಾರು ಜನರು ಮಾತನಾಡುತ್ತಿದ್ದಾರೆ. ಈ ಸಿನಿಮಾ ಪಿರಿಯಾಡಿಕ್ ಮಾದರಿಯ ಕಥೆಯನ್ನು ಹೊಂದಿರಲಿದೆ ಎನ್ನುವುದಾಗಿ ಸುಲಭವಾಗಿ ಊಹಿಸಬಹುದಾಗಿದೆ.

shilpa Sherry in dhruva sarja KD

ಹೌದು ಗೆಳೆಯರೆ ಇನ್ನು ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಜೊತೆಗೆ ಖಳನಾಯಕನ ಪಾತ್ರದಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಸಂಜಯ್ ದತ್(Sanjay Dutt) ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ನಿರ್ಮಾಣವನ್ನು ಕೆ ವಿ ಎನ್ ಪ್ರೊಡಕ್ಷನ್ಸ್(KVN Proructions) ಮಾಡಲಿದ್ದು ಈ ಸಿನಿಮಾಗೆ ಈಗ ಮತ್ತೊಬ್ಬ ಬಾಲಿವುಡ್ ನಟಿಯ ಆಗಮನವೂ ಕೂಡ ಆಗಿದೆ. ಹಾಗಿದ್ದರೆ ಆ ಬಾಲಿವುಡ್ ನಟಿ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಧ್ರುವ ಸರ್ಜಾ(Dhruva Sarja) ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಕೆ ಡಿ ಸಿನಿಮಾಗೆ ಎಂಟ್ರಿ ನೀಡುತ್ತಿರುವ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಮತ್ಯಾರು ಅಲ್ಲ ಕರಾವಳಿ ಮೂಲದ ಫಿಟ್ನೆಸ್ ಐಕಾನ್ ಆಗಿರುವ ಶಿಲ್ಪ ಶೆಟ್ಟಿ(Shilpa Shetty). ಹಲವಾರು ವರ್ಷಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅವರು ಈಗ ಮತ್ತೆ ಈ ಸಿನಿಮಾದ ಮೂಲಕ ಕನ್ನಡಕ್ಕೆ ಬರುತ್ತಿರುವುದು ಎಲ್ಲರೂ ಖುಷಿಪಡಬೇಕಾಗಿರುವ ವಿಚಾರವಾಗಿದೆ.

Leave a Comment

error: Content is protected !!