Sihi Kahi Chandru: ಸಿಹಿ ಕಹಿ ಚಂದ್ರು ಅವರ ಫ್ಯಾಮಿಲಿಯ ಸಿಹಿಯಾದ ಫೋಟೋಗಳು! ಇಲ್ಲಿವೆ

ಸ್ನೇಹಿತರೆ, ತಮ್ಮ ಅದ್ಭುತ ಅಡುಗೆ ರೆಸಿಪಿಯಿಂದಾಗಿ ಪ್ರತಿಯೊಬ್ಬ ಕನ್ನಡಿಗರ ಮನೆಯಲ್ಲಿಯೂ ಬಾರಿ ಜನಪ್ರಿಯತೆ ಪಡೆದಿರುವಂತಹ ಸಿಹಿ ಕಹಿ ಚಂದ್ರು(Sihi Kahi Chandru) ಅವರು 80-90 ರ ದಶಕದ ಹಲವಾರು ಸಿನಿಮಾಗಳಲ್ಲಿ ಖಳ ನಟನಾಗಿ, ಪೋಷಕ ನಟನಾಗಿ, ಸಹ ನಟನಾಗಿ ಅಭಿನಯಿಸುತ್ತ ಬೆಳ್ಳಿ ತೆರೆಯ ಮೇಲೆ ಮಿಂಚಿದಂತಹ ಪ್ರತಿಭಾನ್ವಿತ ನಟ. ಸದ್ಯ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದು ಅಡುಗೆ ಮನೆಗೆ ತಮ್ಮ ಒಲವನ್ನು ತೋರುತ್ತಿರುವ ಚಂದ್ರು ಅವರು ಆಗಾಗ ಒಳ್ಳೊಳ್ಳೆ ರೆಸಿಪಿಗಳನ್ನು(Cooking Recipe) ಕಾರ್ಯಕ್ರಮದಲ್ಲಿ ತೋರಿಸುತ್ತಾ ಮನೆಯಲ್ಲಿ ಅಡುಗೆ ಮಾಡುವಂತಹ ಮಹಿಳೆಯರ ಚಿಂತೆಯನ್ನು ಕೊಂಚ ಕಡಿಮೆ ಮಾಡುತ್ತಾರೆ.

ಇನ್ನೂ ಸಿಹಿ ಕಹಿ ಚಂದ್ರು(Sihi Kahi Chandru) ಅವರ ಮಗಳು ಹಿತ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದು, ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವಿಟಿ ಇರುವಂತಹ ಸಿಹಿ ಕಹಿ ಚಂದ್ರು ಅವರ ತುಂಬು ಕುಟುಂಬ ಆಗಾಗ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ. ಅದರಂತೆ ರಜೆ ದಿನವನ್ನು ಎಂಜಾಯ್ ಮಾಡುವ ಸಲುವಾಗಿ ತಮ್ಮ ಕುಟುಂಬದೊಂದಿಗೆ ರೆಸಾರ್ಟ್ ಒಂದಕ್ಕೆ ತೆರಳಿರುವ ಸಿಹಿ ಕಹಿ ಚಂದ್ರು ಅಲ್ಲಿ ತಮ್ಮ ಮಕ್ಕಳೊಂದಿಗೆ ನಿಂತು ಕ್ಯೂಟ್ ಆದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಮನೆಯವರೆಲ್ಲರೂ ವೈಟ್ ಅಂಡ್ ವೈಟ್ ನಲ್ಲಿ ಕಾಣಿಸಿಕೊಂಡಿರುವುದು ಬಹಳ ವಿಶೇಷವಾಗಿದ್ದು ಅಪ್ಪ ಅಮ್ಮನನ್ನು ಮಧ್ಯದಲ್ಲಿ ನಿಲ್ಲಿಸಿ ಇಬ್ಬರು ಮುದ್ದಿನ ಮಕ್ಕಳು ಅವರನ್ನು ಸುತ್ತುವರೆದು ವಿಭಿನ್ನ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ(Social media) ಭಾರಿ ವೈರಲಾಗುತ್ತಿದ್ದು, ಸಿಹಿ ಕಹಿ ಚಂದು ಅವರ ಕುಟುಂಬವನ್ನು ಒಂದೇ ಪ್ರೇಮ್ನಲ್ಲಿ ಕಂಡ ಅಭಿಮಾನಿಗಳು ಲೈಕ್ಸ್ ಹಾಗೂ ಕಾಮೆಂಟ್ ಗಳ ಮೂಲಕ ಮೆಚ್ಚುಗೆಯ ಸುರಿಮಳೆಯನ್ನೆ ಹರಿಸುತ್ತಿದ್ದಾರೆ.

Leave a Comment

error: Content is protected !!