SRK: ಶಾರುಖ್ ಖಾನ್ ಅವರ ಮನೆಯಲ್ಲಿ ಅವರಿಗೆ ತಿಳಿಯದಂತೆ ನಡೆದಿರುವ ಅನಾಹುತ ಏನು ಗೊತ್ತಾ?

Shah Rukh Khan ಬಾಲಿವುಡ್ ನ ದೊರೆ ಆಗಿರುವ ಶಾರುಖ್ ಖಾನ್(SRK) ಅವರಿಗೆ ಕೋಟ್ಯಂತರ ಅಭಿಮಾನಿಗಳು ವಿಶ್ವಾದ್ಯಂತ ಇದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನು ಅವರಷ್ಟೆ ಜನಪ್ರಿಯತೆ ಅವರ ಮನೆ ಆಗಿರುವ ಮನ್ನತ್(Mannath) ಗೂ ಕೂಡ ಇದೆ. ಇನ್ನು ಅವರನ್ನು ದೇವರಂತೆ ಪೂಜಿಸುವಂತಹ ಅಭಿಮಾನಿಗಳೇ ಅವರ ಮನೆಯಲ್ಲಿ ಅಡವಿಕೊಂಡಿದ್ದ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ.

ಶಾರುಖ್ ಖಾನ್ ಅವರ ಮರೆಯಾಗಿರುವ ಮನ್ನತ್ ಅನ್ನು ನೋಡಲು ಕೂಡ ಮುಂಬೈಗೆ ದಿನನಿತ್ಯ ಸಹಸ್ರಾರು ಜನ ಬರುತ್ತಾರೆ. ಅಷ್ಟರ ಮಟ್ಟಿಗೆ ಶಾರುಖ್ ಖಾನ್(Shah Rukh Khan) ಅವರ ಮನೆಯ ಜನಪ್ರಿಯತೆ ಎಲ್ಲಾ ಕಡೆ ಹರಡಿದೆ. ಅದು ಕೇವಲ ಮನೆಯಲ್ಲ ಬಂಗಲೆಯ ರೀತಿಯಲ್ಲಿ ಇರುವಂತಹ ಅರಮನೆ ಎಂದರು ಕೂಡ ತಪ್ಪಾಗಲಾರದು. ಇನ್ನು ಇದೇ ಮನೆಯಲ್ಲಿ ಅವರ ಇಬ್ಬರು ಅಭಿಮಾನಿಗಳು ಭರ್ಜರಿ ಎಂಟು ಗಂಟೆಗಳ ಕಾಲ ಅವಿತು ಕುಳಿತುಕೊಂಡಿದ್ದರು ಎಂದರೆ ನೀವು ನಂಬಲೇಬೇಕು.

ಹೌದು ಮಿತ್ರರ ರಾತ್ರಿ ಗುಜರಾತಿ(Gujarat) ನಿಂದ ಬಂದಿರುವಂತಹ ಶಾರುಖ್ ಖಾನ್ ಅವರ ಇಬ್ಬರು ಅಭಿಮಾನಿಗಳು ರಾತ್ರಿ 3:00 ಸುಮಾರಿಗೆ ಕಾಂಪೌಂಡ್ ಹಾರಿ ಮನೆಯ ಒಳಗೆ ಬಂದಿದ್ದಾರೆ. ನೇರವಾಗಿ ಇಬ್ಬರು ಅಭಿಮಾನಿಗಳು ಶಾರುಖ್ ಖಾನ್ ರವರ ಮೇಕಪ್ ರೂಮಿಗೆ ಹೋಗಿ ಅಡಗಿಕೊಂಡು ಕುಳಿತಿದ್ದಾರೆ. ಬೆಳಗ್ಗೆ 10:30 ಸುಮಾರಿಗೆ ಇವರಿಬ್ಬರನ್ನು ನೋಡಿರುವಂತಹ ಶಾರುಖ್ ಖಾನ್ ರವರು ಬೆಚ್ಚಿಬಿದ್ದಿದ್ದಾರೆ. ಈಗಾಗಲೇ ಇವರಿಬ್ಬರನ್ನು ಕೂಡ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಸದ್ಯಕ್ಕೆ ಈ ಇಬ್ಬರು ಹುಚ್ಚು ಅಭಿಮಾನಿಗಳ ಮೇಲೆ ಪ್ರಕರಣವನ್ನು ದಾಖಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಇದರ ಕುರಿತಂತೆ ಯಾವ ರೀತಿಯ ಸುದ್ದಿಗಳು ಹೊರಬರುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಸಾಕಷ್ಟು ವರ್ಷಗಳಿಂದ ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ರವರ ಪಠಾಣ್(Pathaan) ಸಿನಿಮಾ ಈಗ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಮತ್ತೆ ಶಾರುಖ್ ಖಾನ್ ಗೆಲುವಿನ ಟ್ರ್ಯಾಕಿಗೆ ಮರಳಿದ್ದಾರೆ.

Leave a Comment

error: Content is protected !!