Eega: ಆ ಕಾಲದಲ್ಲೇ ಇತಿಹಾಸ ಸೃಷ್ಟಿಸಿದ್ದ ಈಗ ಸಿನಿಮಾದಲ್ಲಿ ಕಿಚ್ಚ ಸುದೀಪ್ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಟನೆಯ ಪ್ರತಿಭೆಯನ್ನು ಇಡೀ ವಿಶ್ವ ಜಗತ್ತಿಗೆ ಸಾರಿದ್ದು ರಾಜ ಮೌಳಿ(Rajamouli) ನಿರ್ದೇಶನದಲ್ಲಿ ಮೂಡಿಬಂದಂತಹ ಈಗ ಸಿನಿಮಾ ಎಂದರೆ ತಪ್ಪಾಗಲಾರದು. ಈಗ(Eega) ಸಿನಿಮಾ ಕೇವಲ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಪಾನ್ ಚೀನಾ ಗಳಂತಹ ವಿದೇಶಗಳಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸೃಷ್ಟಿಸುವುದಕ್ಕೆ ನಿಜವಾದ ಕಾರಣವಾಗಿತ್ತು.

ಇಲ್ಲದಂತಹ ನೊಣವನ್ನು ಕಲ್ಪಿಸಿಕೊಂಡು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಟಿಸಿದ ರೀತಿ ನಿಜಕ್ಕೂ ಕೂಡ ನಮ್ಮ ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವ ನಟನಿಂದಲೂ ಕೂಡ ನಟಿಸಲು ಸಾಧ್ಯವಿಲ್ಲ. ಇದನ್ನು ಸ್ವತಃ ಭಾರತೀಯ ಚಿತ್ರರಂಗದ ನಂಬರ್ ಒನ್ ಡೈರೆಕ್ಟರ್ ಆಗಿರುವ ರಾಜಮೌಳಿ ಅವರು ಕೂಡ ಒಪ್ಪಿಕೊಳ್ಳುತ್ತಾರೆ. ಸುದೀಪ್(Sudeep) ರವರು ಈಗ ಸಿನಿಮಾದಲ್ಲಿ ಮಾಡಿದಂತಹ ನಟನೆ ಯಾರಿಂದಲೂ ಕೂಡ ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳುತ್ತಾರೆ.

ಸುದೀಪ್ ಅವರಲ್ಲಿ ಇದ್ದಂತಹ ನಿಜವಾದ ನಟನನ್ನು ಹೊರ ತಂದವರು ರಾಜ ಮೌಳಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಸಿನಿಮಾದಲ್ಲಿನ ನಟನಿಗಾಗಿ ಕಿಚ್ಚ ಸುದೀಪ್(Kiccha Sudeep) ರವರಿಗೆ ಈಗಾಗಲೇ ಹಲವಾರು ಪ್ರತಿಷ್ಠಿತ ಅವಾರ್ಡ್ಗಳು ಕೂಡ ಸಿಕ್ಕಿವೆ. ಇನ್ನು ಆ ಸಿನಿಮಾದಲ್ಲಿ ನಟನೆ ಮಾಡಿರುವುದಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಿಗೆ ದೊರಕಿರುವಂತಹ ಸಂಭಾವನೆ ಎಷ್ಟು ಕೋಟಿ ಎಂಬುದನ್ನು ತಿಳಿಯೋಣ ಬನ್ನಿ.

ಅಂದಿನ ಕಾಲಕ್ಕೆ ಅಭಿನಯ ಚಕ್ರವರ್ತಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಬೇಡಿಕೆಯನ್ನು ಹೊಂದಿದ್ದರು ಹೀಗಾಗಿ ಈಗ ಸಿನಿಮಾಗಾಗಿ(Eega Film) 5 ರಿಂದ 7 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ. ಈಗ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಕೂಡ ಕಥೆಗೆ ನಿಜವಾದ ಹೀರೋ ಅವರೇ ಆಗಿದ್ದರು. ಅವರ ಆ ಒಂದು ನಟನೆ ಇಂದಿಗೂ ಕೂಡ ವಿದೇಶಗಳಲ್ಲಿ ಅವರಿಗೆ ದೊಡ್ಡ ಮಟ್ಟದ ಅಭಿಮಾನಿಗಳು ಇರುವಂತೆ ಮಾಡಿದೆ.

Leave a Comment

error: Content is protected !!