ಡಿ ಬಾಸ್‌ ಬಗ್ಗೆ ಹಾಡಿ ಹೊಗಳಿ ನಂತರ ಶಿವಣ್ಣ ಹಾಗಲ್ಲ ಅಂತ ಶಾಕಿಂಗ್ ಹೇಳಿಕೆ ಕೊಟ್ಟ ಸುಂಟರಗಾಳಿ ಚಿತ್ರದ ವಿಲನ್

ದರ್ಶನ್ ಅವರನ್ನು ಬಾಯಿ ತುಂಬ ಹೊಗಳಿದ ಹಿರಿಯ ನಟಿ ಶಿವಣ್ಣ ಅವರ ಬಗ್ಗೆ ನೀಡಿದ ಶಾಕಿಂಗ್ ಹೇಳಿಕೆ ಏನು ಗೊತ್ತಾ? ನಮ್ಮ ಕನ್ನಡ ಚಿತ್ರರಂಗದಲ್ಲಿ ನಾಯಕ ನಟ ಹಾಗೂ ನಾಯಕ ನಟಿ ಮತ್ತು ಅತ್ಯಂತ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಲಾವಿದರ ಬಗ್ಗೆ ಮಾತ್ರ ನಮ್ಮ ಪ್ರೇಕ್ಷಕರು ಹೆಚ್ಚಿನ ಸಮಯಗಳ ಕಾಲ ನೆನಪಿಟ್ಟುಕೊಳ್ಳುತ್ತಾರೆ. ಬೇರೆ ಕಲಾವಿದರನ್ನು ಅವರು ಸಿನಿಮಾ ರಂಗದಿಂದ ಕೊಂಚ ಸಮಯ ದೂರ ಆಗುತ್ತಿದ್ದಂತೆ ಮರೆತುಬಿಡುತ್ತಾರೆ ಎಂದರೆ ತಪ್ಪಾಗಲಾರದು. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವ ಹಿರಿಯ ನಟಿ ಲಲಿತಮ್ಮ ಅವರ ಪರಿಸ್ಥಿತಿ ಕೂಡ ಅದೇ ರೀತಿ ಆಗಿದೆ ಎಂದರು ತಪ್ಪಾಗಲಾರದು.

ಕನ್ನಡದ ಐವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕನಟಿ ಹಾಗೂ ಹಾಸ್ಯ ಪಾತ್ರಗಳಲ್ಲಿ ಮತ್ತು ಖಳನಾಯಕಿಯ ಪಾತ್ರದಲ್ಲಿ ಕೂಡ ಲಲಿತಮ್ಮ ಕಾಣಿಸಿಕೊಂಡಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಅದರಲ್ಲಿಯೂ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸುಂಟರಗಾಳಿ ಸಿನಿಮಾದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ ಲಲಿತಮ್ಮ ಎಲ್ಲರಿಗೂ ಚಿರಪರಿಚಿತರು ಎನ್ನಬಹುದಾಗಿದೆ. ಆದರೆ ಇಷ್ಟೆಲ್ಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಲಲಿತಮ್ಮ ಅವರ ಈಗಿನ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ ಎನ್ನಬಹುದು.

ಇದೇ ಸಂದರ್ಭದಲ್ಲಿ ಲಲಿತಮ್ಮ ಕನ್ನಡ ಚಿತ್ರರಂಗದ ಇಬ್ಬರು ಖ್ಯಾತ ನಟರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ಅವರ ಬಗ್ಗೆ ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ನಡೆದಿರುವ ಸಂದರ್ಶನ ಒಂದರಲ್ಲಿ ಲಲಿತಮ್ಮ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲಿ ಸಿಕ್ಕಿದರು ಕೂಡ ಹೇಗಿದ್ದೀರಾ ಚೆನ್ನಾಗಿದ್ದೀರಾ ಮೇಡಂ ಎಂಬುದಾಗಿ ಆರೋಗ್ಯ ಕ್ಷೇಮವನ್ನು ವಿಚಾರಿಸಿದ್ದಾರೆ.

ಆದರೆ ಒಮ್ಮೆ ನಾನು ಶಿವಣ್ಣ ಅವರ ಬಳಿ ಹೋಗಿದ್ದ ಸಂದರ್ಭದಲ್ಲಿ ಯಾರು ನೀವು ಎಂಬುದಾಗಿ ಪರಿಚಯ ಇಲ್ಲದವರಂತೆ ಕೇಳಿದ್ದು ನನಗೆ ಬೇಸರವಾಯಿತು ಅಲ್ಲಿಂದ ನಾನು ಕೂಡಲೇ ಹೊರಟು ಬಂದೆ ಎಂಬುದಾಗಿ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಹತ್ತಿರತ್ತಿರ 150 ಸಿನಿಮಾಗಳನ್ನು ಶಿವಣ್ಣ ಮಾಡಿದ್ದಾರೆ ಹೀಗಾಗಿ ಹಲವಾರು ಕಲಾವಿದರನ್ನು ಪ್ರತಿದಿನ ನೋಡುವ ಸಂದರ್ಭದಲ್ಲಿ ನನ್ನ ನೆನಪು ಹೋಗಿರಬಹುದು ಎಂಬುದಾಗಿ ಲಲಿತಮ್ಮ ಬೇಸರದಿಂದ ಹೇಳಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!